Advertisement

football; ಜುಲೈ 25ರಿಂದ ಇಂಡಿಪೆಂಡೆನ್ಸ್‌ ಕಪ್‌ ಪಂದ್ಯಾವಳಿ

12:16 AM Jul 16, 2024 | Team Udayavani |

ಮಂಗಳೂರು: ದ.ಕ. ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ ವತಿಯಿಂದ 26ನೇ ವರ್ಷದ ಅಂತರ್‌ಶಾಲೆ ಹಾಗೂ ಕಾಲೇಜು ಮಟ್ಟದ ಬಾಲಕರ ಮತ್ತು ಬಾಲಕಿಯರ ವಿಭಾಗದ ಇಂಡಿಪೆಂಡೆನ್ಸ್‌ ಕಪ್‌ ಫುಟ್‌ಬಾಲ್‌ ಪಂದ್ಯಾವಳಿ ಜು. 25ರಿಂದ ಮಂಗಳೂರಿನ ನೆಹರೂ ಮೈದಾನದ ಫುಟ್‌ಬಾಲ್‌ ಗ್ರೌಂಡ್‌ನ‌ಲ್ಲಿ ನಡೆಯಲಿದೆ.

Advertisement

ದ.ಕ., ಉಡುಪಿ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಶಾಲಾ ಕಾಲೇಜು ತಂಡಗಳಿಗೆ ಭಾಗ ವಹಿಸಲು ಅವಕಾಶವಿದೆ. ವಿಜೇತ ತಂಡಗಳಿಗೆ ಇಂಡಿಪೆಂಡೆನ್ಸ್‌ ಟ್ರೋಫಿ ಹಾಗೂ ನಗದು ಬಹುಮಾನ ದೊರೆಯಲಿದೆ. ಹಿರಿಯ ಪ್ರಾಥಮಿಕ ಶಾಲೆ ವಿಭಾಗ, ಪ್ರೌಢಶಾಲೆ ವಿಭಾಗ ಜು. 22ರೊಳಗೆ, ಪಿ.ಯು. ಕಾಲೇಜು ವಿಭಾಗ ಜು. 28ರೊಳಗೆ, ಮತ್ತು ಕಾಲೇಜು ವಿಭಾಗದಲ್ಲಿ ಭಾಗವಹಿಸುವವರು ಆ. 5ರೊಳಗೆ ತಂಡಗಳನ್ನು ನೋಂದಾಯಿಸಬೇಕು. ನೋಂದಾವಣೆ ಅರ್ಜಿಯನ್ನು dkdfamangalore@gmail.comಗೆ ಮೇಲ್‌ ಮಾಡಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next