Advertisement

Copa America ಫುಟ್‌ಬಾಲ್‌ : ಆರ್ಜೆಂಟೀನಾ 16 ಪ್ರಶಸ್ತಿಗಳ ದಾಖಲೆ

11:53 PM Jul 15, 2024 | Team Udayavani |

ಮಿಯಾಮಿ ಗಾರ್ಡನ್ಸ್‌ (ಯುಎಸ್‌ಎ): ಲಿಯೋ ನೆಲ್‌ ಮೆಸ್ಸಿ ಸಾರಥ್ಯದ ಆರ್ಜೆಂಟೀನಾ ಪ್ರತಿಷ್ಠಿತ “ಕೊಪಾ ಅಮೆರಿಕ ಕಪ್‌’ ಫುಟ್‌ಬಾಲ್‌ ಪ್ರಶಸ್ತಿ ಯನ್ನು ಉಳಿಸಿ ಕೊಂಡು ಪಾರಮ್ಯ ಸಾಧಿಸಿದೆ. “ಹಾರ್ಡ್‌ ರಾಕ್‌ ಸ್ಟೇಡಿಯಂ’ ಹೊರಗಡೆ ಪ್ರೇಕ್ಷಕರು ನಡೆಸಿದ ದಾಂಧಲೆ ಯಿಂದ ಸುಮಾರು ಒಂದು ಗಂಟೆ, 22 ನಿಮಿಷ ತಡ ವಾಗಿ ಆರಂಭ ಗೊಂಡ ಫೈನಲ್‌ನಲ್ಲಿ ಆರ್ಜೆಂಟೀನಾ ಪಡೆ ಕೊಲಂಬಿಯಾ ವನ್ನು ಏಕೈಕ ಗೋಲಿನಿಂದ ಮಣಿಸಿತು. ಇದರೊಂದಿಗೆ ಸರ್ವಾಧಿಕ 16ನೇ ಸಲ ಪಟ್ಟವೇರಿ ಉರುಗ್ವೆ ದಾಖಲೆಯನ್ನು (15) ಮುರಿಯಿತು.

Advertisement

ಏಕೈಕ ಗೋಲನ್ನು ಲೌಟಾರೊ ಮಾರ್ಟಿನೆಜ್‌, ಹೆಚ್ಚುವರಿ ಸಮಯದ 112ನೇ ನಿಮಿಷದಲ್ಲಿ ಬಾರಿ ಸಿ ದರು. ಡಿ ಮಾರಿಯ ನೀಡಿದ ಪಾಸನ್ನು ಅವರು ಗೋಲಾಗಿಸುವಲ್ಲಿ ಯಶಸ್ವಿಯಾದರು.

ಗೋಲ್ಡನ್‌ ಬೂಟ್‌
ಇದು ಲೌಟಾರೊ ಹೊಡೆದ 5ನೇ ಗೋಲಾಗಿತ್ತು. ಕೂಟದ ಸರ್ವಾಧಿಕ ಗೋಲು ವೀರನೆಂಬ ಹೆಗ್ಗಳಿಕೆ ಯೊಂದಿಗೆ “ಗೋಲ್ಡನ್‌ ಬೂಟ್‌’ ಗೆದ್ದರು. 97ನೇ ನಿಮಿಷದಲ್ಲಿ ಅವರು ಬದಲಿ ಆಟಗಾರನಾಗಿ ಕಣಕ್ಕಿಳಿ ದಿದ್ದರು. ಕೊಲಂಬಿಯಾ ಗೋಲ್‌ ಕೀಪರ್‌ ಕ್ಯಾಮಿಲೊ ವರ್ಗಾಸ್‌ ಅವರನ್ನು ವಂಚಿಸಿ ಗೋಲು ಬಾರಿಸಿ ದೊಡನೆ ಲೌಟಾರೊ ಮಾರ್ಟಿನೆಜ್‌ ಮಾಡಿದ್ದೇನೆಂದರೆ, ಗಾಯಾಳಾಗಿ ಹೊರಗೆ ಕುಳಿತ್ತಿದ್ದ ಮೆಸ್ಸಿ ಅವರನ್ನು ತಬ್ಬಿಕೊಂಡದ್ದು.

ಮೆಸ್ಸಿಗೆ ಪಾದದ ನೋವು
ಮೆಸ್ಸಿ ಮೊದಲಾರ್ಧದಲ್ಲೇ ಪಾದದ ನೋವಿಗೆ ಸಿಲುಕಿದ್ದರು. ಆದರೂ ಆಟ ಮುಂದುವರಿಸಿದ್ದರು. ಆದರೆ ದ್ವಿತೀಯಾರ್ಧದಲ್ಲಿ ಅಂಗಳ ದಲ್ಲೇ ಬಿದ್ದವರಿಗೆ ಮತ್ತೆ ಆಡಲಿಳಿ ಯಲು ಸಾಧ್ಯ  ವಾಗಲಿಲ್ಲ. ಬಲಗಾಲಿನ ಬೂಟನ್ನು ಕಳಚಿ ಮೈದಾನ ತೊರೆ ದರು. ಹೀಗೆ, ಮೆಸ್ಸಿ ಅವರ ಕೊನೆಯ ಕೊಪಾ ಅಮೆರಿಕ ಪಂದ್ಯ ಮಿಶ್ರ ಅನುಭವ  ನೀಡಿತು. ಆರ್ಜೆಂಟೀನಾದ ಮತ್ತೋರ್ವ ಶ್ರೇಷ್ಠ ಆಟಗಾರ ಏಂಜೆಲ್‌ ಡಿ ಮಾರಿಯ ಕೂಡ ವಿದಾಯ ಹೇಳಿದರು.

ಮೆಸ್ಸಿ ಜೋಳಿಗೆಯಲ್ಲಿ 45 ಟ್ರೋಫಿಗಳು
2024ರ ಕೊಪಾ ಅಮೆರಿಕ ಪ್ರಶಸ್ತಿ ಜಯಿಸುವುದರೊಂದಿಗೆ ಲೆಜೆಂಡ್ರಿ ಫ‌ುಟ್ಬಾಲಿಗ ಲಿಯೋನೆಲ್‌ ಮೆಸ್ಸಿ ನೂತನ ಮೈಲುಗಲ್ಲೊಂದನ್ನು ನೆಟ್ಟರು. ಇದು ಅವರಿಗೆ ಒಲಿದ ಸೀನಿಯರ್‌ ವಿಭಾಗದ 45ನೇ ಟ್ರೋಫಿಯಾಗಿದೆ. ಫುಟ್‌ಬಾಲ್‌ ಇತಿಹಾಸದಲ್ಲಿ ಇದೊಂದು ದಾಖಲೆ. ಈ ಸಂದರ್ಭದಲ್ಲಿ ಅವರು ಡ್ಯಾನಿ ಅಲ್ವೆಸ್‌ ಅವರ 44 ಟ್ರೋಫಿಗಳ ದಾಖಲೆ ಮುರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next