Advertisement

23 ಲಕ್ಷ ರೂ. ಉಳಿತಾಯ ಬಜೆಟ್‌

09:04 PM Mar 18, 2021 | Team Udayavani |

ಕಡೂರು: ಪುರಸಭಾ ಕನಕ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಅವರು 2021-2022ನೇ ಸಾಲಿನ 23,67,237 ಲಕ್ಷ ರೂ. ಉಳಿತಾಯ ಬಜೆಟ್‌ ಮಂಡಿಸಿದರು.

Advertisement

ನಂತರ ಮಾತನಾಡಿದ ಅವರು, ತಾವು ಈ ಹಿಂದೆ ಅಧ್ಯಕ್ಷರಾಗಿದ್ದ ಅವ ಧಿಯಲ್ಲಿ 2 ಬಾರಿ ಹಾಗೂ ಈಗಿನ ಆಯವ್ಯಯ ಸೇರಿ ಇದು ನನ್ನ 3ನೇ ಪುರಸಭೆಯ ಬಜೆಟ್‌ ಆಗಿದೆ. ನಿಮ್ಮೆಲ್ಲರ ಸಹಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. 25 ನಿಮಿಷಗಳ ಕಾಲ ಸುದೀರ್ಘ‌ವಾಗಿ ಆಯ-ವ್ಯಯ ಪತ್ರ ಓದಿದ ಅಧ್ಯಕ್ಷರು, ನಂತರ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ ಬಜೆಟ್‌ನ ಒಪ್ಪಿಗೆ ಪಡೆದರು. ಆರಂಭದ ಶಿಲ್ಕು 84,41,991 ರೂ.ಗಳಿಂದ ಆರಂಭವಾಗಿರುವ ಈ ಬಾರಿಯ ಬಜೆಟ್‌ನಲ್ಲಿ ರಾಜಸ್ವ ಸ್ವೀಕೃತಿಗಳಿಂದ 15,25,70,477 ರೂ. ಹಾಗೆಯೇ, ರಾಜಸ್ವ ಪಾವತಿಗಳಿಂದ 15,17,95,229 ರೂ., ರಾಜಸ್ವ ಖಾತೆಯಲ್ಲಿನ ಹೆಚ್ಚುವರಿ ಬಾಬ್ತು 7,75,284 ರೂ. ತೋರಿಸಲಾಗಿದೆ ಎಂದರು.

ಬಂಡವಾಳ ಖಾತೆ: ಬಂಡವಾಳ ಸ್ವೀಕೃತಿ 11,10,50,002 ರೂ., ಬಂಡವಾಳ ಪಾವತಿಗೆ 1,17,90,004 ರೂ. ಖಾತೆಯ ಹೆಚ್ಚುವರಿ ಕೊರತೆ 68,50,002 ರೂ. ಗಳಾಗಿದೆ. ಅಸಾಧಾರಣ ಖಾತೆ: ಅಸಾಧಾರಣ ಸ್ವೀಕೃತಿಯಿಂದ 9,96,10,926 ರೂ., ಅಸಾಧಾರಣ ಪಾವತಿ 9,96,10926 ರೂ.ಆಗಿದ್ದು, ಒಟ್ಟಾರೆ ಈ ಬಾರಿಯ ಉಳಿತಾಯ 23,67,237 ರೂ.ಆಗಿ¨ದೆ ಎಂದು ಅಧ್ಯಕ್ಷರು ಘೋಷಿಸುತ್ತಿದ್ದಂತೆ ಸದಸ್ಯರು ಚಪ್ಪಾಳೆ ಮೂಲಕ ಸ್ವಾಗತಿಸಿದರು. ಪುರಸಭೆಯ ಆದಾಯ 36,32,22,405 ರೂ. ಎಂದು ನಿರೀಕ್ಷಿಸಲಾಗಿದೆ. ಅಂದಾಜು ವೆಚ್ಚ 36,92,97,159 ರೂ. ಎಂದು ಅಂದಾಜಿಸಲಾಗಿದೆ ಎಂದರು.

ಸದಸ್ಯ ಈರಳ್ಳಿ ರಮೇಶ್‌ ಬಜೆಟ್‌ ಮಂಡನೆಯ ನಂತರ ಅಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿ, ಕುಡಿಯುವ ನೀರಿಗೆ ಇನ್ನೂ ಹೆಚ್ಚಿನ ಒತ್ತು ನೀಡಬೇಕಾಗಿತ್ತು ಎಂಬ ಸಲಹೆ ನೀಡಿದರು. ವಾಣಿಜ್ಯ ಮಳಿಗೆಗಳಿಂದ ಆದಾಯ ಕೊರತೆಯಾಗಿರುವುದಾಗಿ ಗಮನ ಸೆಳೆದರು.

ಮತ್ತೋರ್ವ ಸದಸ್ಯ ಸೋಮಯ್ಯ ಬಜೆಟ್‌ ಸ್ವಾಗತಿಸಿ ಮಾತನಾಡಿ, ಆದಾಯ ಮೂಲಗಳನ್ನು ಹುಡುಕಬೇಕಾಗಿದೆ. ದಾರ್ಶನಿಕರ ಜಯಂತಿ ಮಹೋತ್ಸವಗಳಿಗೆ, ಕ್ರೀಡಾಕೂಟಗಳ ಧನ ಸಹಾಯಕ್ಕೆ ಒತ್ತು ನೀಡಬೇಕಾಗಿತ್ತು ಎಂದರು.

Advertisement

ಪುರಸಭೆಯ ವ್ಯವಹಾರಗಳಿಗೆ ದಲ್ಲಾಳಿಗಳಿಗೆ ಕಡಿವಾಣ ಹಾಕಿರುವುದು ಉತ್ತಮ ಬೆಳವಣಿಗೆ. ಸಾರ್ವಜನಿಕರು ನೇರವಾಗಿ ಬಂದು ಹೋಗಲು ವ್ಯವಸ್ಥೆ ಕಲ್ಪಿಸಿರುವುದನ್ನು ಸ್ವಾಗತಿಸುತ್ತೇವೆ ಎಂದರು.

ಸದಸ್ಯೆ ಸುಧಾ ಉಮೇಶ್‌ ಮಾತನಾಡಿ, ಮನೆ, ಕಟ್ಟಡ ಕಂದಾಯ ಬ್ಯಾಂಕಿಗೆ ಕಟ್ಟಿರುವವರು ತಮ್ಮ ರಸೀದಿ ಕಳೆದುಕೊಂಡಿದ್ದಾರೆ. ಪುರಸಭೆಯಲ್ಲಿ ಯಾವುದೇ ದಾಖಲೆ ದೊರಕುತ್ತಿಲ್ಲ ಎಂಬ ದೂರುಗಳು ಮನೆಯ ಮಾಲಿಕರಿಂದ ಬರುತ್ತಿದೆ. ಇದಕ್ಕೆ ಪರಿಹಾರವೇನು ಎಂದು ಪ್ರಶ್ನಿಸಿದರು.

ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಮಾತನಾಡಿ, ಬ್ಯಾಂಕಿನಿಂದ ಪುರಸಭೆಗೆ ರಸೀದಿ ತರಿಸಿ ಅದನ್ನು ವಾರ್ಡ್‌ವಾರು ಫೈಲ್‌ ಮಾಡಿಸಲಾಗುವುದು ಎಂದು ಉತ್ತರ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ವಿಜಯ ಚಿನ್ನರಾಜು, ಸದಸ್ಯರಾದ ಮಂಜುಳಾ ಶಾಮಿಯಾನ ಚಂದ್ರು, ಲತಾ ರಾಜು, ಯತೀಶ್‌, ಸುಬ್ಬಣ್ಣ, ಮೋಹನ್‌, ಭಾಗ್ಯ ರಂಗನಾಥ್‌, ಮನು, ಶ್ರೀಕಾಂತ್‌, ಇಕ್ಬಾಲ್‌, ಪುಷ್ಪಾ ಮಂಜುನಾಥ್‌, ಕಮಲ ವೆಂಕಟೇಶ್‌, ಹಾಲಮ್ಮ, ಜ್ಯೋತಿ ಆನಂದ್‌, ಸೈಯದ್‌ ಯಾಸೀನ್‌ ಮತ್ತು ಮುಖ್ಯಾ ಧಿಕಾರಿ ಎಚ್‌.ಎನ್‌.ಮಂಜುನಾಥ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next