Advertisement

ದ.ಕ.: 23 ಮಂದಿಗೆ ಕೋವಿಡ್ ದೃಢ ; ಉಡುಪಿ: ಕೋವಿಡ್ ಶೂನ್ಯ ದಿನ

01:08 AM Jun 10, 2020 | Hari Prasad |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 23 ಮಂದಿಗೆ ಕೋವಿಡ್ ದೃಢಪಟ್ಟಿದೆ.

Advertisement

18 ಮಂದಿ ಸೌದಿ ಅರೇಬಿಯಾದಿಂದ ಆಗಮಿಸಿದವರಾದರೆ ಉಳಿದವರು ದುಬಾೖ, ಮುಂಬಯಿಯಿಂದ ಆಗಮಿಸಿದವರು.

ಮುಂಬಯಿಯಿಂದ ಮೇ 20ರಂದು ಆಗಮಿಸಿ ಉಡುಪಿಯಲ್ಲಿ ಕ್ವಾರಂಟೈನ್‌ನಲ್ಲಿದ್ದ 46 ವರ್ಷದ ವ್ಯಕ್ತಿ ಅವಧಿ ಮುಗಿಸಿ ಹಿನ್ನೆಲೆಯಲ್ಲಿ ಮೂಡುಬಿದಿರೆಗೆ ಆಗಮಿಸಿದ್ದರು.

ಇದೀಗ ಅವರ ಗಂಟಲ ದ್ರವ ಮಾದರಿ ಪರೀಕ್ಷೆ ವರದಿ ಸ್ವೀಕೃತವಾಗಿದ್ದು, ಕೋವಿಡ್ ದೃಢಪಟ್ಟಿದೆ. ಜೂ. 1ರಂದು ದುಬಾೖಯಿಂದ ಆಗಮಿಸಿ ಖಾಸಗಿ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ 30 ವರ್ಷದ ಯುವಕ, 38 ವರ್ಷದ ವ್ಯಕ್ತಿ ಹಾಗೂ 32 ವರ್ಷದ ಯುವಕನಿಗೂ ಕೋವಿಡ್ ದೃಢಪಟ್ಟಿದೆ.

ಮೇ 13ರಂದು ಪುಣೆಯಿಂದ ಆಗಮಿಸಿ ಉಡುಪಿಯಲ್ಲಿ ಕ್ವಾರಂಟೈನ್‌ ಮುಗಿಸಿ ವಿಟ್ಲ – ಅಳಿಕೆಗೆ ಆಗಮಿಸಿದ್ದ 46 ವರ್ಷದ ವ್ಯಕ್ತಿಗೆ ಕೋವಿಡ್ ದೃಢಪಟ್ಟಿದೆ.

Advertisement

ಸೌದಿ ಅರೇಬಿಯಾದಿಂದ ಮಂಗಳೂರಿಗೆ ಆಗಮಿಸಿ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ 24 ವರ್ಷದ ಯುವಕ, 28 ವರ್ಷದ ಯುವಕ, 27 ವರ್ಷದ ಯುವಕ, 22 ವರ್ಷದ ಯುವಕ, 25 ವರ್ಷದ ಯುವಕ, 24 ವರ್ಷದ ಯುವಕ, 31 ವರ್ಷದ ಯುವಕ, 29 ವರ್ಷದ ಯುವಕ, 29 ವರ್ಷದ ಯುವಕ, 26 ವರ್ಷದ ಯುವಕ, 28 ವರ್ಷದ ಯುವಕ, 28 ವರ್ಷದ ಯುವಕ, 24 ವರ್ಷದ ಯುವಕ, 31 ವರ್ಷದ ಯುವಕ, 28 ವರ್ಷದ ಯುವಕ, 28 ವರ್ಷದ ಯುವಕ, 30 ವರ್ಷದ ಯುವಕ, 27 ವರ್ಷದ ಯುವಕ, 27 ವರ್ಷದ ಯುವಕನಿಗೆ ಕೋವಿಡ್ ದೃಢಪಟ್ಟಿದೆ. ಎಲ್ಲರನ್ನೂ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

16 ಮಂದಿ ಗುಣಮುಖ
ಕೋವಿಡ್ ದೃಢಪಟ್ಟು ವೆನ್ಲಾಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 16 ಮಂದಿ ಗುಣಮುಖರಾಗಿ ಮಂಗಳವಾರ ಬಿಡುಗಡೆಗೊಂಡಿದ್ದಾರೆ. ಮಂಗಳವಾರ ಸ್ವೀಕರಿಸಲಾದ ಒಟ್ಟು 199 ಮಂದಿಯ ಗಂಟಲ ದ್ರವ ಮಾದರಿ ಪರೀಕ್ಷೆಯ ವರದಿ ಪೈಕಿ 176 ನೆಗೆಟಿವ್‌, 23 ಪಾಸಿಟಿವ್‌ ಬಂದಿವೆ. ಒಟ್ಟು 39 ಮಂದಿಯ ವರದಿ ಬರಲು ಬಾಕಿ ಇದ್ದು, ಹೊಸದಾಗಿ 95 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜೂ. 12: ಶಾರ್ಜಾದಿಂದ ವಿಶೇಷ ವಿಮಾನ?
ಮಂಗಳೂರು: ಲಾಕ್‌ಡೌನ್‌ನಿಂದಾಗಿ ಶಾರ್ಜಾದಲ್ಲಿ ಸಮಸ್ಯೆಗೆ ಸಿಲುಕಿರುವ ಜನರನ್ನು ಮಂಗಳೂರಿಗೆ ಕರೆತರಲು ಜೂನ್‌ 12ರಂದು ವಿಶೇಷ ವಿಮಾನ ಆಗಮಿಸುವ ನಿರೀಕ್ಷೆ ಇದೆ. ಈ ವಿಮಾನದಲ್ಲಿ 200ಕ್ಕೂ ಅಧಿಕ ಪ್ರಯಾಣಿಕರು ಆಗಮಿಸುವ ಸಾಧ್ಯತೆ ಇದೆ.

ಖಾಸಗಿ ವಿಮಾನ ಆಗಮನದ ಕುರಿತಂತೆ ಕೇಂದ್ರ ವಿಮಾನಯಾನ ಸಚಿವಾಲಯದಿಂದ ಅನುಮತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸೋಮವಾರ ರಾತ್ರಿ 12.30ಕ್ಕೆ ದಮಾಮ್‌ನಿಂದ ಖಾಸಗಿ ವಿಮಾನ ಮಂಗಳೂರಿಗೆ ಆಗಮಿಸಿದ್ದು, 169 ಪ್ರಯಾಣಿಕರು ಬಂದಿಳಿದಿದ್ದಾರೆ. ಅವರನ್ನು ಜಿಲ್ಲಾಡಳಿತದ ವತಿಯಿಂದ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಉಡುಪಿ: ಕೋವಿಡ್ ಶೂನ್ಯ ದಿನ
ಬಹಳ ದಿನಗಳ ಬಳಿಕ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್‌ ಪ್ರಕರಣ ಮಂಗಳವಾರ ವರದಿಯಾಗಿಲ್ಲ. ಇದರ ಜತೆಗೆ 103 ಸೋಂಕು ಪೀಡಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಮೂರು ದಿನ ನಿರಂತರವಾಗಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಯುತ್ತಿರುವುದು ಜನರಲ್ಲಿ ಸಮಾಧಾನ ತಂದಿದೆ.

ಜಿಲ್ಲೆಯಲ್ಲಿ ಇದುವರೆಗೆ 946 ಪಾಸಿಟಿವ್‌ ಪ್ರಕರಣ ವರದಿಯಾಗಿದ್ದು ಒಟ್ಟು 304 ಸೋಂಕಿತರು ಬಿಡುಗಡೆಗೊಂಡಿದ್ದಾರೆ. 641 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 33 ವರದಿಗಳು ಬರಲು ಬಾಕಿ ಇವೆ. ಪ್ರಸ್ತುತ 305 ಮಂದಿ ಮನೆಗಳಲ್ಲಿ, 185 ಮಂದಿ ಸಾಂಸ್ಥಿಕ, ಇಬ್ಬರು ಆಸ್ಪತ್ರೆಗಳಲ್ಲಿ, 82 ಮಂದಿ ಐಸೊಲೇಶನ್‌ ವಾರ್ಡ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಮಂಗಳವಾರ ಒಟ್ಟು 12 ಜನರ ವರದಿ ನೆಗೆಟಿವ್‌ ಬಂದಿವೆ.

ಕಾಸರಗೋಡು: ಇಬ್ಬರಿಗೆ ಸೋಂಕು
ಜಿಲ್ಲೆಯಲ್ಲಿ ಮಂಗಳವಾರ ಇಬ್ಬರಿಗೆ ಕೋವಿಡ್ ದೃಢವಾಗಿದೆ. ಕುಂಬಳೆಯ 49 ವರ್ಷದ ವ್ಯಕ್ತಿ, ಪಳ್ಳಿಕ್ಕರೆಯ 65 ವರ್ಷದ ವ್ಯಕ್ತಿ ಸೋಂಕು ಬಾಧಿತರು. ಇಬ್ಬರೂ ಮಹಾರಾಷ್ಟ್ರದಿಂದ ಆಗಮಿಸಿದವರು. ಜಿಲ್ಲೆಯಲ್ಲಿ ಕೋವಿಡ್ ಬಾಧಿತರ ಸಂಖ್ಯೆ 111ಕ್ಕೇರಿದೆ.

ಇದೇ ವೇಳೆ ಕೇರಳದಲ್ಲಿ ಮಂಗಳವಾರ 91 ಮಂದಿಗೆ ಸೋಂಕು ದೃಢವಾಗಿದೆ.
ಕಂಟೈನ್‌ಮೆಂಟ್‌ ಝೋನ್‌ ಹೊರತು ಇತರ ಪ್ರದೇಶಗಳಲ್ಲಿ ಇನ್ನು ಬೆಳಗ್ಗೆ 7 ಗಂಟೆ ಯಿಂದ ರಾತ್ರಿ 9 ಗಂಟೆವರೆಗೆ ಅಂಗಡಿಗಳು ಕಾರ್ಯಾಚರಿಸಬಹುದೆಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ತಿಳಿಸಿದ್ದಾರೆ.

165 ಮಂದಿ ವಿರುದ್ಧ ಕೇಸು
ಜಿಲ್ಲೆಯಲ್ಲಿ ಮಂಗಳವಾರ ಮಾಸ್ಕ್ ಧರಿಸದ ಆರೋಪದಲ್ಲಿ 165 ಮಂದಿ ವಿರುದ್ಧ, ಲಾಕ್‌ಡೌನ್‌ ಉಲ್ಲಂಘನೆ ಆರೋಪದಲ್ಲಿ ಐವರ ವಿರುದ್ಧ ಕೇಸು ದಾಖಲಿಸಲಾಗಿದೆ. 6 ಮಂದಿಯನ್ನು ಬಂಧಿಸಲಾಗಿದ್ದು, 4 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next