Advertisement

225 ಕೋಟಿ ಆಸ್ತಿ ಜಪ್ತಿ

12:30 AM Mar 21, 2019 | |

ಹೊಸದಿಲ್ಲಿ: ತೆರಿಗೆ ವಂಚನೆ ಪ್ರಕರಣದಲ್ಲಿ ಬಿಎಸ್‌ಪಿ ನಾಯಕಿ ಮಾಯಾವತಿ ಮಾಜಿ ಆಪ್ತ, ನಿವೃತ್ತ ಐಎಎಸ್‌ ಅಧಿಕಾರಿ  ನೇತ್‌ ರಾಮ್‌ಗೆ ಸೇರಿದ  225 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ. ದಿಲ್ಲಿ, ಮುಂಬಯಿ, ನೋಯ್ಡಾ, ಕೋಲ್ಕತಾ ಮುಂತಾದ ಕಡೆ ಇದ್ದ ಸ್ಥಿರಾಸ್ತಿ ಹಾಗೂ ನೇತ್‌ ರಾಮ್‌ ಮನೆಯಲ್ಲಿದ್ದ ಮೂರು ಐಶಾರಾಮಿ ಕಾರುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಕೋಲ್ಕತಾ ಮೂಲದ ನಕಲಿ ಕಂಪೆನಿಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡ ಆರೋಪ ನೇತ್‌ ರಾಮ್‌ ಮತ್ತು ಸರಕಾರಿ ವಲಯದ ಅವರ ಆಪ್ತ ಅಧಿಕಾರಿಗಳ ಮೇಲಿತ್ತು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next