ಮಿನಿಯಾಪೊಲಿಸ್: ಅಮೆರಿಕದಲ್ಲಿ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದ್ದ ಜಾರ್ಜ್ ಫ್ಲಾಯ್ಡ್ ಕೊಲೆ ಪ್ರಕರಣದಲ್ಲಿ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಗೆ 22.5 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗಿದೆ.
45 ವರ್ಷದ ಡೆರೆಕ್ ಚೌವಿನ್ ಅವರು ಮಿನ್ನಿಯಾಪೊಲಿಸ್ ಕೋರ್ಟ್ ನಲ್ಲಿ ಜಾರ್ಜ್ ಫ್ಲಾಯ್ಡ್ ಕುಟುಂಬಿಕರಿಗೆ ಕ್ಷಮೆಯಾಚಿಸದೆ ಸಂತಾಪ ಸೂಚಿಸಿದರು. ಬಳಿಕ ನ್ಯಾಯಾಧೀಶ ಪೀಟರ್ ಕಾಹಿಲ್ ಅವರು ಡೆರೆಕ್ ಗೆ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದರು.
” ನಂಬಿಕೆ ಮತ್ತು ಅಧಿಕಾರದ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕೆ ಈ ಜೈಲು ಶಿಕ್ಷೆ ನೀಡಲಾಗಿದೆ. ಮತ್ತು ಜಾರ್ಜ್ ಫ್ಲಾಯ್ಡ್ ಗೆ ತೋರಿಸಿದ ನಿರ್ದಿಷ್ಟ ಕ್ರೌರ್ಯವನ್ನು ಮನದಲ್ಲಿಟ್ಟುಕೊಂಡು ಶಿಕ್ಷೆ ಪ್ರಟಿಸಲಾಗಿದೆ” ಎಂದು ಪೀಟರ್ ಕಾಹಿಲ್ ಹೇಳಿದರು.
ಇದನ್ನೂ ಓದಿ:2022ರಲ್ಲಿ ಸ್ವದೇಶಿ ವಿಮಾನ ವಾಹಕ ನೌಕೆ ಸಮರ್ಪಣೆ : ರಕ್ಷಣ ಸಚಿವ ರಾಜನಾಥ್ ಸಿಂಗ್
ಫ್ಲಾಯ್ಡ್ ಕುಟುಂಬದ ವಕೀಲರು ಈ ಶಿಕ್ಷೆಯನ್ನು ಅಮೆರಿಕದಲ್ಲಿ ಜನಾಂಗೀಯ ಸಾಮರಸ್ಯದ ಕಡೆಗೆ “ಐತಿಹಾಸಿಕ” ಹೆಜ್ಜೆ ಎಂದು ಬಣ್ಣಿಸಿದ್ದಾರೆ.
ಈ ಪ್ರಕರಣದಲ್ಲಿ ಪರಿಗಣಿಸಲ್ಪಟ್ಟ ಎಲ್ಲಾ ಸಂದರ್ಭಗಳು ನನಗೆ ತಿಳಿದಿಲ್ಲ ಆದರೆ ಮಾರ್ಗಸೂಚಿಗಳ ಪ್ರಕಾರ ಈ ಶಿಕ್ಷೆ ಸೂಕ್ತವೆಂದು ತೋರುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದರು.