Advertisement
ದೇಶದ ಕರಾವಳಿ ಮತ್ತು ಉತ್ತರ ಭಾರತವನ್ನು ಸಂಪರ್ಕಿಸುವ ಪ್ರಮುಖ ರೈಲ್ವೇ ಸಂಚಾರ ಮಾರ್ಗವೂ ಇದಾಗಿದ್ದು, ಭಾರತೀಯ ಎಂಜಿನಿಯರಿಂಗ್ ಕೌಶಲಕ್ಕೊಂದು ಉದಾಹರಣೆಯೂ ಆಗಿದೆ. ಕೊಂಕಣ ರೈಲ್ವೇ ಶುರುವಾದ ಬಳಿಕ ರಾಜ್ಯದ ಕರಾವಳಿಗೆ ಬಹಳಷ್ಟು ಪ್ರಯೋಜವಾಗಿದ್ದು, ಜನಜೀವನದ ಪ್ರಮುಖ ಕೊಂಡಿಯಾಗಿದೆ.
ಆದರೆ ಕೊಂಕಣ ರೈಲ್ವೇ ಇತಿಹಾಸ ಇದಕ್ಕೂ ಬಹು ದಶಕಗಳ ಹಿಂದಕ್ಕೆ ಇದೆ. 1971-73, 1975-77ರ ಅವಧಿಯಲ್ಲಿ ಯೋಜನೆಯ ಸಂಭವನೀಯತೆ ಕುರಿತು ಸಮೀಕ್ಷೆ ನಡೆಸಲಾಗಿತ್ತು. 1984ರಲ್ಲಿ ಪಶ್ಚಿಮ ಕರಾವಳಿಯ ಸಂಪರ್ಕವನ್ನು ರೋಹಾದಿಂದ ಮಂಗಳೂರುವರೆಗೆ ಸಂಚಾರ ಸಮೀಕ್ಷೆಯನ್ನು ನಡೆಸ ಲಾಯಿತು. 1977ರಲ್ಲಿ ಪ್ರೊ| ಮಧು ದಂಡವತೆ ಅವರು ರೈಲ್ವೇ ಸಚಿವರಾಗಿದ್ದಾಗ ಆಪಾrದಿಂದ ರೋಹಾ ವರೆಗೆ ಪ್ರಥಮ ಹಂತವನ್ನು ಮಂಜೂರುಗೊಳಿಸಿದ್ದರು. ಇದು 1986ರಲ್ಲಿ ಉದ್ಘಾಟನೆಗೊಂಡಿತು. 1989ರಲ್ಲಿ ಜಾರ್ಜ್ ಫೆರ್ನಾಂಡಿಸ್ ಅವರು ರೈಲ್ವೇ ಸಚಿವರಾದಾಗ ಇವರ ದೃಢ ಸಂಕಲ್ಪದಿಂದ ಪೂರ್ಣ ಪ್ರಮಾಣ ದಲ್ಲಿ ಜಾರಿಗೊಂಡಿತು. ರೋಹಾದಿಂದ ತೋಕೂರು ವರೆಗಿನ 741 ಕಿ.ಮೀ. ಮಾರ್ಗ ವನ್ನು ತಾಂತ್ರಿಕವಾಗಿ ಯಶಸ್ವಿಗೊಳಿಸಿದ ಕೀರ್ತಿ ಪ್ರಥಮ ಆಡಳಿತ ನಿರ್ದೇಶಕ ಇ.ಶ್ರೀಧರನ್ ಅವರಿಗೆ ಸಲ್ಲುತ್ತದೆ. ವಾಜಪೇಯಿ ಉದ್ಘಾಟಿಸಿದ್ದರು
1993ರ ಮಾರ್ಚ್ 20ರಂದು ಮಂಗಳೂರು ಮತ್ತು ಉಡುಪಿ ನಡುವೆ ಪ್ರಥಮ ಪ್ರಯಾಣಿಕ ರೈಲು ಸಂಚರಿಸಿತು. 1998ರ ಜನವರಿಯಲ್ಲಿ ಎಲ್ಲ ಕೆಲಸಗಳು ಮುಗಿದು ಮೇ ತಿಂಗಳಲ್ಲಿ ಮುಂಬಯಿ ಮತ್ತು ಮಂಗಳೂರು ನಡುವೆ ರೈಲು ಸಂಚಾರ ಆರಂಭವಾಯಿತು. ಆ ವರ್ಷ ಮೇ 1 ಕಾರ್ಮಿಕರ ದಿನಾಚರಣೆಯಂದು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಕೊಂಕಣ ರೈಲ್ವೇ ಸೇವೆಯನ್ನು ಉದ್ಘಾಟಿಸಿದ್ದರು.
Related Articles
2018-19ರ ಆರ್ಥಿಕ ವರ್ಷಾಂತ್ಯದಲ್ಲಿ 2,825 ಕೋ.ರೂ. ಆದಾಯವನ್ನು ಸಂಸ್ಥೆ ಗಳಿಸಿದೆ. 101 ಕೋ.ರೂ. ನಿವ್ವಳ ಲಾಭ ಗಳಿಸಿದೆ. ಸುಮಾರು 5,000 ನೌಕರರು ಇದರಲ್ಲಿ ತೊಡಗಿಕೊಂಡಿದ್ದಾರೆ. ಈಗ ಕೋವಿಡ್-19 ಲಾಕ್‌ಡೌನ್ ಇದ್ದಾಗಲೂ ಅಗತ್ಯದ ಸರಕು ಸಾಗಣೆ ವಹಿವಾಟು ನಡೆಸುತ್ತಿದೆ. ಪ್ರಸ್ತುತ ಆಡಳಿತ ನಿರ್ದೇಶಕರಾಗಿ ಸಂಜಯ ಗುಪ್ತ ಅವರು ಸೇವೆ ಸಲ್ಲಿಸುತ್ತಿದ್ದಾರೆ.
Advertisement