Advertisement

ಲಾಕ್‌ಡೌನ್‌ ವೇಳೆ 22 ರಸ್ತೆ ಅಪಘಾತ

01:04 PM Jun 12, 2020 | Suhan S |

ಬಾಗಲಕೋಟೆ: ಕೋವಿಡ್‌-19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಸಮಯದಲ್ಲಿಯೂ ಜಿಲ್ಲೆಯಾದ್ಯಂತ 22 ಮಾರಣಾಂತಿಕ ಅಪಘಾತ ಪ್ರಕರಣ ದಾಖಲಾಗಿದ್ದು, ಪೊಲೀಸ್‌, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು ಸ್ವಯಂ ಪ್ರೇರಿತವಾಗಿ ಅಪಘಾತ ತಡೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ.ರಾಜೇಂದ್ರ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಜರುಗಿದ ರಸ್ತೆ ಸರಕ್ಷತಾ ಸಪ್ತಾಹ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಜನವರಿ 20ರಿಂದ ಮಾ. 20ರವರೆಗೆ 97 ಮಾರಣಾಂತಿಕ ಅಪಘಾತ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಏಪ್ರಿಲ್‌ ಮತ್ತು ಮೇ ಮಾಹೆಗಳ ಲಾಕ್‌ಡೌನ್‌ ಸಮಯದಲ್ಲಿಯೂ ಸಹ 22 ಮಾರಣಾಂತಿಕ ಅಪಘಾತ ಪ್ರಕರಣಗಳು ದಾಖಲಾಗಿರುವುದು ವಿಷಾದಕರ ಎಂದರು.

ಜಿಲ್ಲೆಯ ವ್ಯಾಪ್ತಿಯಲ್ಲಿ ಸಂಚರಿಸುವ ಭಾರಿ ಗಾತ್ರದ ವಾಹನಗಳು ಮರಳು, ಜೆಲ್ಲಿಕಲ್ಲು ಹಾಗೂ ಅದಿರು ಸಾಗಿಸುತ್ತಿರುವ ವಾಹನಗಳು ಕಡ್ಡಾಯವಾಗಿ ರಿಪ್ಲೇಕ್ಟರ್‌ ಅಳವಡಿಸಬೇಕು. ಸ್ಪೀಡ್‌ ಗವರ್ನರ್‌ ಹೊಂದಿರತಕ್ಕದ್ದು. ಟಾರ್ಪಾಲ್‌ ಹೊದಿಕೆ ಹೊಂದಿರುವ ಬಗ್ಗೆ ವಿಶೇಷ ತನಿಖಾ ಕಾರ್ಯ ಕೈಗೊಳ್ಳಬೇಕು. ರಾಜ್ಯ ರಸ್ತೆ ಪ್ರಾಧಿಕಾರದ ನಿರ್ದೇಶನದಂತೆ ಗಂಭೀರ ಗಾಯ, ಮರಣಗಳು ಸಂಭವಿಸಿರುವ ಪ್ರತಿ ರಸ್ತೆ ಅಪಘಾತಗಳನ್ನು ವೈಜ್ಞಾನಿಕ ವಾಗಿ ತನಿಖೆ ನಡೆಸಲು ತಿಳಿಸಿದರು. ವೈಜ್ಞಾನಿಕ ತನಿಖೆಗೆ ಲೋಕೋಪಯೋಗಿ, ಪೊಲೀಸ್‌ ಮತ್ತು ಸಾರಿಗೆ ಇಲಾಖೆಗಳನ್ನು ಒಳಗೊಂಡ ತಾಲೂಕುವಾರು ತಂಡ ರಚಿಸಲು ತಿಳಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಪಡಸಾಲಿ ಕಳೆದ ಸಭೆಯ ನಡಾವಳಿಗೆ ಅನುಸರಣಾ ವರದಿ ಮಂಡಿಸಿದರು. ಸಭೆಯಲ್ಲಿ ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಸಂಚಾರಿ ನಿಯಂತ್ರಣಾಧಿಕಾರಿ ಪಡಿಯಪ್ಪ ಮೈತ್ರಿ, ಬಾಗಲಕೋಟೆ ತಹಶೀಲ್ದಾರ್‌ ಗುರುಸಿದ್ದಯ್ಯ ಹಿರೇಮಠ, ರಬಕವಿ-ಬನಹಟ್ಟಿ ತಹಶೀಲ್ದಾರ್‌ ಪ್ರಶಾಂತ ಚನಗೊಂಡ ಮುಂತಾದವರು ಉಪಸ್ಥಿತರಿದ್ದರು.

ಕೋವಿಡ್‌ ಸೋಂಕಿನಿಂದ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಮಾತ್ರ ಮೃತಪಟ್ಟಿದ್ದು ನೋಡಿದರೆ ಕೋವಿಡ್‌ಕ್ಕಿಂತ ಹೆಚ್ಚುವಾಹನಗಳ ಅಪಘಾತಗಳೇ ಹೆಚ್ಚಿನ ಪ್ರಮಾಣದಲ್ಲಿ ಆಗಿರುವುದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಸ್ವಯಂ ಪ್ರೇರಿತರಾಗಿ ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳುವ ಅಗತ್ಯವಿದೆ.ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ, ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next