Advertisement

ರಾಜ್ಯದ 22 ಪೊಲೀಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಗೌರವ

06:15 AM Jan 25, 2018 | Team Udayavani |

ಬೆಂಗಳೂರು: ಪೊಲೀಸ್‌ ಇಲಾಖೆಯಲ್ಲಿ ಸಲ್ಲಿಸಿದ ವಿಶೇಷ ಸೇವೆಗೆ ನೀಡಲಾಗುವ ರಾಷ್ಟ್ರಪತಿ ಪದಕ ಗೌರವಕ್ಕೆ ರಾಜ್ಯ ಪೊಲೀಸ್‌ ನೇಮಕಾತಿ ಹಾಗೂ ತರಬೇತಿ ವಿಭಾಗದ ಡಿಐಜಿ ಡಾ. ಬಿ.ಎ ಮಹೇಶ್‌, ಮಂಗಳೂರು ನಗರ ಪೊಲೀಸ್‌ ಆಯುಕ್ತ ಟಿ. ಸುರೇಶ್‌, ಬೆಂಗಳೂರು ಉತ್ತರ ವಿಭಾಗದ ಸಂಚಾರ ಎಸಿಪಿ  ಜಿ.ಎ ಜಗದೀಶ್‌ ಪಾತ್ರರಾಗಿದ್ದಾರೆ.

Advertisement

ಅದೇ ರೀತಿ ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿ ಇಬ್ಬರು ಎಸ್ಪಿ, ನಾಲ್ಕು ಮಂದಿ ಡಿವೈಎಸ್ಪಿ, ಇಬ್ಬರು ಎಸಿಪಿ, ಒಬ್ಬರು ಇನ್ಸ್‌ಪೆಕ್ಟರ್‌, ಮೂವರು ಸಹಾಯಕ ಸಬ್‌ ಇನ್ಸ್‌ಪೆಕ್ಟರ್, ಆರು ಮಂದಿ ಹೆಡ್‌ಕಾನ್ಸ್‌ಟೇಬಲ್‌ಗ‌ಳು ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಲಭಿಸಿದೆ.

ವಿಶೇಷ ಸೇವೆಗೆ ರಾಷ್ಟ್ರಪತಿ ಪದಕ ಪುರಸ್ಕೃತರು
1.ಡಾ. ಬಿ.ಎ ಮಹೇಶ್‌, ಡಿಐಜಿ, ರಾಜ್ಯ ಪೊಲೀಸ್‌ ನೇಮಕಾತಿ ಹಾಗೂ ತರಬೇತಿ ವಿಭಾಗ
2.ಟಿ. ಸುರೇಶ್‌, ಮಂಗಳೂರು ನಗರ ಪೊಲೀಸ್‌ ಆಯುಕ್ತ
3. ಜಿ.ಎ ಜಗದೀಶ್‌, ಎಸಿಪಿ, ಉತ್ತರ ವಿಭಾಗದ ಸಂಚಾರ ಬೆಂಗಳೂರು
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು
1. ರವಿಕುಮಾರ್‌ ಎಚ್‌ ನಾಯಕ್‌, ಬೆಳಗಾವಿ ಜಿಲ್ಲಾ ಎಸ್ಪಿ
2. ಹಮ್ಜಾ ಹುಸೇನ್‌ ಎಸ್ಪಿ, ಗುಪ್ತಚರ ದಳ ಬೆಂಗಳೂರು
3. ಕೆ.ಎಸ್‌ ನಾಗರಾಜ ಡಿವೈಎಸ್ಪಿ, ತುಮಕೂರು
4. ಬಿ.ಬಾಲರಾಜ್‌, ಡಿವೈಎಸ್ಪಿ, ಎಸಿಬಿ, ಬೆಂಗಳೂರು
5. ಯು. ಶರಣಪ್ಪ, ಡಿವೈಎಸ್ಪಿ, ,ಚಿಂಚೋಳಿ
6. ಸಿ ಸಂಪತ್‌ ಕುಮಾರ್‌, ಡಿವೈಎಸ್ಪಿ, ಸೋಮವಾರ ಪೇಟೆ ಉಪವಿಭಾಗ
7. ಕೆ.ಪಿ ರವಿಕುಮಾರ್‌ಎಸಿಪಿ ಬಾಣಸವಾಡಿ ಉಪವಿಭಾಗ
8.ನಿಂಗಪ್ಪ ಬಿ ಸಕ್ರಿ, ಎಸಿಪಿ ಹುಬ್ಬಳ್ಳಿ
9.ಕೆ. ಸತ್ಯನಾರಾಯಣ ,ಸರ್ಕಲ್‌  ಇನ್ಸ್‌ ಪೆಕ್ಟರ್‌ ,ಕಡೂರು
10. ವಿ.ಎನ್‌ ಗುಣವತಿ ,ಸಹಾಯಕ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಎಎಸ್‌ಐ)ರಾಜ್ಯ ಅಪರಾಧ ಅಂಕಿ-ಅಂಶಗಳ ಘಟಕ
11.ಜಗನ್ನಾಥ, ವಿಶೇಷ ಎಎಸ್‌ಐ,ಕಂದಾಯ ವಿಭಾಗ ಕೆಎಸ್‌ಆರ್‌ಪಿ 3ನೇ ಬೆಟಾಲಿಯನ್‌
12. ಕೆ.ಆರ್‌ ವಿನುತಾ, ಎಎಸ್‌ಐ, ರಾಜ್ಯ ಅಪರಾಧ ಅಂಕಿ-ಅಂಶಗಳ ಘಟಕ
13. ಶ್ರೀನಿವಾಸ ಶೆಟ್ಟಿ, ಹೆಡ್‌ ಕಾನ್ಸ್‌ಟೇಬಲ್‌, ಉಪ್ಪಾರಪೇಟೆ ಠಾಣೆ,ಬೆಂಗಳೂರು
14. ಬಿ.ಹೆಚ್‌ ಹೇಮಕುಮಾರ್‌ ,ಹೆಡ್‌ ಕಾನ್ಸ್‌ ಟೇಬಲ್‌, ಸಿಐಡಿ ಅರಣ್ಯಘಟಕ
15. ಬಿ.ಎಬ್‌ ಮೆಹಬೂಬ್‌, ಸಂಚಾರ ಹೆಡ್‌ ಕಾನ್ಸ್‌ ಟೇಬಲ್‌, ಕೋಲಾರ
16. ಲಚಿರಾಮ್‌ ಪ್ರಸಾದ್‌ ಪಟ್ನಾಯಕ್‌ ,ಹೆಡ್‌ಕಾನ್ಸ್‌ಟೇಬಲ್‌, ಹುಬ್ಬಳ್ಳಿ ಗ್ರಾಮಾಂತರ
17.ಮಲ್ಲಿಕಾರ್ಜುನ ಹೆಗಡೆ, ಸಿವಿಲ್‌ ಹೆಡ್‌ ಕಾನ್ಸ್‌ಟೇಬಲ್‌, ಸಿಐಡಿ,ಬೆಂಗಳೂರು
18 .ಕಮಲಾಕ್ಷ, ಹೆಡ್‌ ಕಾನ್ಸ್‌ಟೇಬಲ್‌, ಕೆಎಸ್‌ಆರ್‌ಪಿ 7ನೇ ಬೆಟಾಲಿಯನ್‌ ಮಂಗಳೂರು
19.ಕೃಷ್ಣೋಜಿ ರಾವ್‌ ಎಂ, ಹೆಡ್‌ ಕಾನ್ಸ್‌ಟೇಬಲ್‌ ಜಿಲ್ಲಾ ಸಶಸ್ತ್ರ ವಿಭಾಗ ( ಡಿಎಆರ್‌)ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next