Advertisement

ಮಾಲ್ಡಾ : ಬಾಡಿಗೆ ಮನೆಯಿಂದ 22 ಪಿಸ್ತೂಲು, 80,000 ನಕಲಿ ಕರೆನ್ಸಿ ವಶ

11:43 AM Jun 01, 2018 | Team Udayavani |

ಮಾಲ್ಡಾ, ಪಶ್ಚಿಮ ಬಂಗಾಲ : ಇಲ್ಲಿಗೆ ಸಮೀಪದ ನಲಡೂಬಿ ಪ್ರದೇಶದಲ್ಲಿನ ಬಾಡಿಗೆ ಮನೆಯೊಂದರಿಂದ 9 ಎಂಎಂ ನ 22 ಪಿಸ್ತೂಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಬಾಡಿಗೆ ಮನೆಯಲ್ಲಿದ್ದ  ಕೆಲವು ಅರೆ ಉತ್ಪಾದಿತವಾದವುಗಳು ಸೇರಿದಂತೆ 22 ಪಿಸ್ತೂಲುಗಳು, ಆರು ಲೇತ್‌ ಯಂತ್ರಗಳು ಮತ್ತು ಸುಮಾರು 80,000 ಖೋಟಾ ಕರೆನ್ಸಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ ಅರ್ನಾಬ್‌ ಘೋಷ್‌ ತಿಳಿಸಿದ್ದಾರೆ.

ಬಿಹಾರದ ನಿವಾಸಿಯೋರ್ವರಿಗೆ ಸೇರಿದ ಈ ಮನೆಯನ್ನು ಮಾಲಕನು ಅಕ್ರಮ್‌ ಎಂಬಾತನಿಗೆ ಬಾಡಿಗೆಗೆ ಕೊಟ್ಟಿದ್ದರು. ಮನೆಯಲ್ಲಿದ್ದ ಮುಂಗೇರ್‌ನ 9 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೇಸು  ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಘೋಷ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next