ದೇವನಹಳ್ಳಿ: ಹೊಸಕೋಟೆ ತಾಲೂಕಿನ ನಂದಗುಡಿ, ಬೈಲಾನರಸಾಪುರ, ಎಸ್.ಹೊಸಹಳ್ಳಿ, ಬಂಡೇನ ಹಳ್ಳಿ ಸುತ್ತಮುತ್ತಲಿನಲ್ಲಿ ಆಫ್ರಿಕನ್ ಕ್ಯಾಟ್ ಫಿಷ್ ಅಕ್ರಮ ಸಾಕಣೆ ಕೇಂದ್ರಗಳ ಮೇಲೆ ಜಿಲ್ಲಾ ಮೀನುಗಾರಿಕೆ ಅಧಿಕಾರಿ ಎಸ್.ಆರ್.ನಾಗರಾಜ್ ಅವರ ತಂಡ ದಾಳಿ ನಡೆಸಿದೆ. ದಾಳಿ ವೇಳೆ 22 ಭೂ ಮಾಲೀಕರು ಹಾಗೂ 34 ಮೀನು ಅಕ್ರಮ ಸಾಕಣೆಗಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಹೆಚ್ಚಿನ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗವುದು ಎಂದು ಅಧಿಕಾರಿ ನಾಗರಾಜ್ ತಿಳಿಸಿದ್ದಾರೆ.
ತಾಲೂಕಿನ ಚಪ್ಪರದ ಕಲ್ಲು ಸರ್ಕಲ್ ನಲ್ಲಿರುವ ಜಿಲ್ಲಾಡಳಿತ ಭವನದ ಮೀನುಗಾರಿಕೆ ಇಲಾಖೆಯ ಕಚೇರಿಯಲ್ಲಿ ಆಫ್ರಿಕನ್ ಕ್ಯಾಟ್ ಫಿಷ್ ಅಕ್ರಮ ಸಾಕಾಣಿಕೆ ಆರೋಪಿಗಳ ಪಟ್ಟಿ ಬಿಡುಗಡೆ ಗೊಳಿಸಿ ಮಾತನಾಡಿದರು.
52 ಮಂದಿ ಅಕ್ರಮ ಸಾಕಣೆದಾರರು: ಹೊಸಕೋಟೆ ತಾಲೂಕಿನ ನಂದಗುಡಿ , ಬೈಲಾನರಸಾಪುರ, ಎಸ್.ಹೊಸಹಳ್ಳಿ, ಬಂಡೇನ ಹಳ್ಳಿ ಸುತ್ತಮುತ್ತಲಿನಲ್ಲಿ ಕೆಲವು ಮೀನು ಸಾಕಣೆಗಾರರು ಸ್ವಂತ ಜಮೀನಿನಲ್ಲಿ ಹೊಂಡ ನಿರ್ಮಿಸಿ ಅಕ್ರಮ ಮೀನು ಕೃಷಿ ಯಲ್ಲಿ ತೊಡಗಿದ್ದಾರೆ. ಇನ್ನೂ ಕೆಲವರು ಜಮೀನನ್ನು ಗುತ್ತಿಗೆ ಪಡೆದು ಸಾಕಣೆ ಮಾಡುತ್ತಿರುವುದು ಪರಿಶೀಲನೆ ಸಂದರ್ಭದಲ್ಲಿ ಗಮನಕ್ಕೆ ಬಂದಿದೆ.
38 ಪ್ರಕರಣಗಳಲ್ಲಿ 52 ಮಂದಿ ಸಾಕಣೆದಾರರಿದ್ದಾರೆ. ಅಲ್ಲದೆ ಕ್ಯಾಟ್‌ಫಿಶ್ ಸಾಕಣೆ ಹೊಂಡಗಳನ್ನು ಮುಚ್ಚಲು ತಾಕೀತೂ ಮಾಡಿದರೂ ಮಾಲಿಕರು ಮುಂದಾಗುತ್ತಿಲ್ಲ. ಈ ಕುರಿತು ಜಿಲ್ಲಾಧಿಕಾರಿ ಮತ್ತು ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅಲ್ಲದೆ ಆಯಾ ಗಾಮಗಳ ವ್ಯಾಪ್ತಿಯಲ್ಲಿ ಆರೋಪಿಗಳ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಲು ಪಟ್ಟಿ ನೀಡಲಾಗಿದೆ ಎಂದು ಹೇಳಿದರು.
ಪ್ರಕರಣ ದಾಖಲು: ಇತ್ತೀಚಿಗೆ ನಡೆದ ಜಿಪಂ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಜಿಪಂ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ, ನಂದಗುಡಿ ಜಿಪಂ ಸದಸ್ಯ ನಾಗರಾಜ್, ಆಫ್ರಿಕನ್ ಕ್ಯಾಟ್ ಫಿಷ್ ಸಾಕಣೆ ಕೇಂದ್ರದ ಮೇಲೆ ಸೂಕ್ತ ಕ್ರಮಕೈಗೊಂಡಿಲ್ಲ. ಅಕ್ರಮ ಸಾಕಣೆಗಾರರ ವಿರುದ್ಧ ತ್ವರಿತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಇದರಂತೆ ಮೀನು ಸಾಕಣೆ ಕೇಂದ್ರಗಳ ಪರಿಶೀಲನೆ ನಡೆಸಿ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವಿವರಿಸಿದರು.
ಮೀನು ಸಾಕಣೆ ಆರೋಪಿಗಳು ಬೈಲಾನರಸಾಪುರ ಶಾಬು ಜಾನ್, ಮಾಶೂದ್ ಖಾನ್, ಶಾವರ್, ಶೌಕತ್ ಆಲಿಖಾನ್, ಬಂಡೇನ ಹಳ್ಳಿ ಅಹಮದ್ ಖಾನ್, ಎನ್ ಹೊಸಹಳ್ಳಿ ಇಕ್ಬಾಲ್ ಖಾನ್, ಬಾಬಾಜಾನ್, ಅಸ್ಲಾಂ ಪಾಷಾ, ಇತರರ ಮೇಲೆ ದೂರಿನ ಪಟ್ಟಿ ತಯಾರಿಸಲಾಗಿದೆ ಎಂದರು.