ದೊಡ್ಡಬಳ್ಳಾಪುರ: ನಗರದ ಗಾಂಧಿನಗರದಲ್ಲಿರುವ ಟೆಕ್ಸ್‌ಟೈಲ್ ಮ್ಯಾನುಫ್ಯಾಕ್ಚರ್ ಕೋ ಆಪರೇಟಿವ್ ಬ್ಯಾಂಕ್ ಲಿ.,ನ 56ನೇ ವಾರ್ಷಿಕ ಹಾಗೂ 2019- 20 ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ನಗರದ ದತ್ತಾತ್ರೇಯಕಲ್ಯಾಣಮಂದಿರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ನ ಅಧ್ಯಕ್ಷ ಕೆ.ಪಿ. ವಾಸುದೇವ್ ಮಾತನಾಡಿ, ಟಿಎಂಸಿ ಬ್ಯಾಂಕ್ ಮಾರ್ಚ್ 2020 ರ ಅಂತ್ಯಕ್ಕೆ 22.95 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ. ಬ್ಯಾಂಕ್ ದಿನೇ ದಿನೆ ಅಭಿವೃದ್ಧಿಹೊಂದುತ್ತಿದೆ. ಆದರೆ ಮಾರ್ಚ್ 2020 ರನಂತರ ಕೋವಿಡ್ ಕಾರಣದಿಂದಾಗಿ ಬ್ಯಾಂಕ್‌ನ ವಹಿವಾಡಿನಲ್ಲಿ ಕುಸಿತ ಕಂಡಿತ್ತು. ಈ ಸಂದರ್ಭದಲ್ಲಿ 3 ಲಕ್ಷ ರೂ. ಸಾಲಕ್ಕೆ ಬಡ್ಡಿ ಮಾತ್ರಪಾವತಿಸುವಯೋಜನೆರೂಪಿಸಲಾಯಿತು. ಬೆಳ್ಳಿ, ಆಭರಣಗಳ ಮೇಲೆ ಸಾಲ ನೀಡಲಾಗುತ್ತಿದೆ. ಆದರೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರೋಗ್ಯ ಶಿಬಿರಗಳಂತಹ ಕಾರ್ಯಕ್ರಮ ಮಾಡಲಾಗಲಿಲ್ಲ.
ಬ್ಯಾಂಕಿನ ಸದಸ್ಯತ್ವದ ಕುರಿತಾಗಿ ರಿಸರ್ವ್ ಬ್ಯಾಂಕ್‌ನಿಂದ ಹೊಸ ಆದೇಶಗಳು ಬಂದಿದ್ದು,ಬ್ಯಾಂಕ್ ಷೇರುಗಳ ಹಣವನ್ನು ಸಾಲಕ್ಕೆ ಜಮಾ ಹಾಕಿಕೊಳ್ಳುವುದು ಹಾಗೂ ಸದಸ್ಯರಿಗೆ ಹಣನೀಡುವ ಕುರಿತು ನಿಯಮಗಳು ಮಾರ್ಪಾಟಾಗಿದ್ದು, ರಿಸರ್ವ್ ಬ್ಯಾಂಕ್‌ನ ಅನುಮತಿಯಿಲ್ಲದೇ ಬ್ಯಾಂಕ್ ಬಂಡವಾಳ ಹಿಂತಿರುಗಿಸುವಂತಿಲ್ಲ, ಇದು ಬೈಲಾದಲ್ಲಿ ತಿದ್ದುಪಡಿಯಾಗಿದೆ ಎಂದರು.
ಮಾರ್ಚ್ 2020ರ ಪ್ರಗತಿಯಂತೆ ಷೇರು ಮೊತ್ತ 43.41 ಲಕ್ಷ ರೂ. ಠೇವಣಿ ಮೊತ್ತ9.4ಕೋಟಿ ರೂ. ದಾಟಿದ್ದು, 3.18 ಕೋಟಿ ರೂ. ಸಾಲ ವಸೂಲಾತಿಯಾಗಿದೆ. ದಶಕದ ಹಿಂದೆ ಬ್ಯಾಂಕ್ ನಷ್ಟದಲ್ಲಿದ್ದಾಗ ಶೇ.82 ಇದ್ದ ಅನುತ್ಪಾದಕ ಆಸ್ತಿಗಳು ಈಗ ಕೇವಲ ಶೇ.0.83ಕ್ಕೆ ಇಳಿದಿದೆ. ರಿಸರ್ವ್ ಬ್ಯಾಂಕ್‌ನ ಸೂಚನೆ ಯಂತೆಕೋವಿಡ್-19 ಹಿನ್ನೆಲೆಯಲ್ಲಿ ಈ ಸಾಲಿನಲ್ಲಿ ಸದಸ್ಯರಿಗೆ ಡಿವಿಡೆಂಡ್ (ಲಾಭಾಂಶ) ನೀಡಲಾಗುತ್ತಿಲ್ಲ. ಬ್ಯಾಂಕ್‌ನ ಷೇರು ಬಂಡವಾಳ ಹಾಗೂ ವಹಿವಾಟು ತೃಪ್ತಿಕರವಾಗಿಲ್ಲ. ಷೇರು ಮೌಲ್ಯವನ್ನು ಹೆಚ್ಚಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಸದಸ್ಯರು ಹೆಚ್ಚಿನ ಹಣವನ್ನು ಬ್ಯಾಂಕ್‌ನ ವಹಿವಾಟು ಗ ಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬ್ಯಾಂಕ್ ಮತ್ತಷ್ಟು ಏಳಿಗೆಯಾಗುವಂತೆ ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಜಿ.ಮಂಜುನಾಥ್, ಪ್ರಭಾರಿ ವ್ಯವಸ್ಥಾಪಕರಾದ ಎ.ಎಸ್.ಪುಷ್ಪ ಲತಾ, ನಿರ್ದೇಶಕರಾದ ಎ.ಆರ್.ಶಿವಕುಮಾರ್, ಪಿ.ಸಿ.ವೆಂಕಟೇಶ್, ಎ.ಎಸ್.ಕೇಶವ, ಕೆ.ಜಿ. ಗೋಪಾಲ್, ಡಿ.ಪ್ರಶಾಂತ್ ಕುಮಾರ್, ನಾರಾ ಯಣ್.ಎನ್.ನಾಯ್ಡು , ಬಿ.ಆರ್.ಉಮಾ ಕಾಂತ್, ಎ.ಗಿರಿಜಾ, ವೃತ್ತಿಪರ ನಿರ್ದೇಶಕರಾದ ಎ. ಆರ್.ನಾಗರಾಜನ್, ಕೆ.ಎಂ.ಕೃಷ್ಣಮೂರ್ತಿ, ಹಾಜರಿದ್ದರು.