Advertisement
ರವಿ ಚಕ್ರವರ್ತಿ: ತೆರಿಗೆ ಕಟ್ಟದೇ ಸರ್ಕಾರಕ್ಕೆ ವಂಚಿಸುವವರನ್ನ ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಿ. ಹಾಗೆಯೇ ಎಲ್ಲಾ ರಾಜ್ಯಗಳಿಗೂ ತೆರಿಗೆಯ ಪಾಲನ್ನ ಸಮರ್ಪಕವಾಗಿ ಹಂಚಬೇಕಲ್ಲವೇ. ಕೆಲವು ರಾಜ್ಯಗಳಿಗೆ ಬೇಕಾಬಿಟ್ಟಿ ತೆರಿಗೆ ಪಾಲನ್ನ ಹಂಚುವುದು ಎಷ್ಟರ ಮಟ್ಟಿಗೆ ಸರಿ.
Related Articles
Advertisement
ನರಸಿಂಹ ಮೂರ್ತಿ ಎನ್ ಎಂ: ದೇಶದ ಆರ್ಥಿಕ ಮೂಲವಾಗಿರುವ ಮಧ್ಯಮ ವರ್ಗದವರಿಂದ ತೆರಿಗೆ ವಸೂಲು ಮಾಡೀ ಮಾಡೀ ವಿವಿಧ ಭಾಗ್ಯಗಳ ಹೆಸರಿನಲ್ಲಿ ಲೂಟಿಕೋರರು ಚನ್ನಾಗಿ ಉಣ್ಣುತ್ತಾರೆ. ಎಷ್ಟೇ ತೆರಿಗೆ ಕಟ್ಟಿದರೂ ಸಾಲದು. ಮದ್ಯಮ ವರ್ಗದವರು ಕಷ್ಟ ಪಟ್ಟು ದುಡಿದು ತೆರಿಗೆ ಕಟ್ಟಿ ದೇಶದ ಶ್ರೀಮಂತರನ್ನು ಮತ್ತು ಬಡವರನ್ನು ಸಾಕಬೇಕಾಗಿದೆ. ಲಕ್ಷಾದೀಶರಾದರೂ ಬಡತನ ರೇಖೆಗಿಂತ ಕೆಳಗಿರುವ ಕೆಲ ಬಡವರಿಂದ ಕಡ್ಡಾಯವಾಗಿ ತೆರಿಗೆ ವಸೂಲಿ ಮಾಡಿ
ಗಾಯತ್ರಿ ರಮೇಶ್: ತೆರಿಗೆ ದರ ತುಂಬಾ ಅತಿಯಾಯಿತು 10 ಲಕ್ಷಕ್ಕೂ ಹೆಚ್ಚಿನ ಆದಾಯಕ್ಕೆ ಶೇ 30 ತೆರಿಗೆ ಇದೆ. ಮತ್ತೆ ಅದಕ್ಕೆ ಸರಚಾರ್ಜ 3 %. ಅಂದರೆ ನಿಮ್ಮ ಆದಾಯ ರೂ ಒಂದು ಕೋಟಿ ಇದ್ದರೆ ರೂ 33 ಲಕ್ಷ ತೆರಿಗೆ ಕಟ್ಟಬೇಕು. ಎಂತಹವರಿಗೂ ಇದು ಬೇಸರದ ವಿಷಯ. ಅದಕ್ಕಾಗಿ ತೆರಿಗೆ ಕಟ್ಟುವುದಿಲ್ಲ ಅಥವಾ ತೆರಿಗೆ ತಪ್ಪಿಸುವ ಮಾರ್ಗ ಹುಡುಕುತ್ತಾರೆ. ಇದಲ್ಲದೆ ನಮ್ಮ ತೆರಿಗೆ ಹಣವನ್ನು ಎಲ್ಲಾ ರಾಜಕಾರಣಿಗಳೂ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಪಕ್ಷಬೇದ ಇಲ್ಲ. ತೆರಿಗೆ ಹಣವನ್ನು ಲೂಟಿ ಮಾಡುತ್ತಾರೆ. ಇವರ ಸಂಬಳ ಮತ್ತು ಇತರೆ ಖರ್ಚುಗಳಿಗಾಗಿ ಕೋಟಿಗಟ್ಟಲೆ ಹಣ ಖರ್ಚಾಗುತ್ತದೆ. ಅಲ್ಲದೆ ಅಭಿವೃದ್ಧಿ ಕಾರ್ಯಗಳಲ್ಲೂ ಸಹ % ತೆಗೆದುಕೊಳ್ಳುತ್ತಾರೆ.. ಈ ಎಲ್ಲಾ ಕಾರಣಗಳಿಂದ ತೆರಿಗೆ ಸಂಗ್ರಹ ಕಡಿಮೆಯಾಗಿದೆ.