Advertisement

ದ.ಕ.: 218 ಮಂದಿಗೆ ಸೋಂಕು ದೃಢ; ಮೃತಪಟ್ಟವರಿಗೆ ಸೋಂಕು ದೃಢ‌; ಮೃತರ ಸಂಖ್ಯೆ 82ಕ್ಕೆ ಏರಿಕೆ

08:10 AM Jul 24, 2020 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ 218 ಮಂದಿಗೆ ಕೊರೊನಾ ದೃಢಪಟ್ಟಿದೆ. ಇದೇ ವೇಳೆ ಬುಧವಾರ ಸಾವನ್ನಪ್ಪಿದ ಏಳು ಮಂದಿಯಲ್ಲಿ ಕೋವಿಡ್ ದೃಢಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಗುರುವಾರ ಜಿಲ್ಲೆಯಲ್ಲಿ 118 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 1,862 ಮಂದಿ ಗುಣಮುಖರಾಗಿದ್ದು, 2,253 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 4,214 ಆಗಿದೆ. ಮೃತಪಟ್ಟಿರುವ ಎಲ್ಲ ಏಳು ಮಂದಿಯ ಕೋವಿಡ್‌ ಪರೀಕ್ಷಾ ಫ‌ಲಿತಾಂಶ ಗುರುವಾರ ಕೈ ಸೇರಿದ್ದು, ಕೋವಿಡ್ ದೃಢಪಟ್ಟಿದೆ. ಆದರೆ ಮರಣದ ಕಾರಣವನ್ನು ನಿರ್ಧರಿಸಲು ಜಿಲ್ಲಾ ಮಟ್ಟದ ತಜ್ಞರ ಸಮಿತಿಯ ವರದಿ ಬರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement

ಪುತ್ತೂರು, ಕಡಬ: 10 ಪಾಸಿಟಿವ್‌
ಪುತ್ತೂರು: ಪುತ್ತೂರು, ಕಡಬ ತಾಲೂಕುಗಳಲ್ಲಿ ಗುರುವಾರ 10 ಕೊರೊನಾ ಪ್ರಕರಣ ಗಳು ದೃಢಪಟ್ಟಿವೆ. ಪುತ್ತೂರು ನಗರ ಠಾಣೆಯ 38 ವರ್ಷ ವಯಸ್ಸಿನ ಪೊಲೀಸ್‌ ಸಿಬಂದಿ, ಅವರ ತಾಯಿಯಲ್ಲಿ ಸೋಂಕು ದೃಢಪಟ್ಟಿದೆ. ಮಂಗಳೂರಿನ ಆಸ್ಪತ್ರೆಗಳಲ್ಲಿ ದಾಖಲಾಗಿ ರುವ ಕರ್ನೂರಿನ ಯುವಕ, ಕಬಕ ನಿವಾಸಿ, ವೆನ್ಲಾಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊಳ್ತಿಗೆ ಯುವಕನಲ್ಲಿ ಕೋವಿಡ್ ದೃಢಪಟ್ಟಿದೆ.

ಕಡಬ ಕುಟ್ರಾಪ್ಪಾಡಿಯ 80ರ ವೃದ್ಧೆ, ಆಕೆಯ ಪುತ್ರ, ವೆನ್ಲಾಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಣಿಯೂರು ಗ್ರಾಮದ ಪುರುಷ, ಕುದ್ಮಾರಿನ ಮಹಿಳೆ, ಯುವಕನಲ್ಲಿ ಕೊರೊನಾ ದೃಢಪಟ್ಟಿದೆ.

ನೆಟ್ಟಾರು: ಐವರಲ್ಲಿ ಸೋಂಕು
ಸುಳ್ಯ: ಮೃತಪಟ್ಟ ಬಳಿಕ ಕೊರೊನಾ ಸೋಂಕು ಪತ್ತೆಯಾಗಿದ್ದ ಬೆಳ್ಳಾರೆಯ ನೆಟ್ಟಾರು ಸಮೀಪದ ಮಹಿಳೆಯೊಬ್ಬರ ಮನೆಯ ಮೂವರು ಪುರುಷರು, ಇಬ್ಬರು ಮಹಿಳೆಯರ‌ನ್ನು ಕೊರೊನಾ ಬಾಧಿಸಿದೆ.

6 ಪೊಲೀಸರಿಗೆ ಸೋಂಕು
ಮೂಡುಬಿದಿರೆಯ 6 ಮಂದಿ ಪೊಲೀಸರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ.

Advertisement

ಮೃತಪಟ್ಟವರಿಗೆ ಕೋವಿಡ್ ಪಾಸಿಟಿವ್‌
– ದಾವಣಗೆರೆಯ 36 ವರ್ಷದ ವ್ಯಕ್ತಿ ಜು. 16ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, 22ರಂದು ಮೃತಪಟ್ಟಿದ್ದಾರೆ. ಅವರು ಸೆಪ್ಸಿಸ್‌ ಸೆಪ್ಟಿಕ್‌ ಶಾಕ್‌, ಪಿತ್ತ ಜನಕಾಂಗದ ಕಾಯಿಲೆ ಮುಂತಾದವುಗಳಿಂದ ಬಳಲುತ್ತಿದ್ದರು.

- 69 ವರ್ಷದ ಭಟ್ಕಳದ ವ್ಯಕ್ತಿ ಜು. 7ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಜು. 22ರಂದು ಮೃತಪಟ್ಟಿದ್ದಾರೆ. ಅವರು ಕ್ಯಾನ್ಸರ್‌, ಹೃದಯ ಕಾಯಿಲೆ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದರು.

- ಕೇರಳದ ಪಾಲಕ್ಕಾಡ್‌ನ‌ 52 ವರ್ಷದ ವ್ಯಕ್ತಿ ಜು. 19ರಂದು ವೆನ್ಲಾಕ್‌ ಗೆ ದಾಖಲಾಗಿದ್ದು, 22ರಂದು ಮೃತಪಟ್ಟಿದ್ದಾರೆ. ಅವರು ಡಯಾಬಿಟಿಸ್‌, ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು.

– ಮಂಗಳೂರಿನ 83ರ ವೃದ್ಧ ಜು. 13ರಂದು ವೆನ್ಲಾಕ್‌ಗೆ ದಾಖಲಾಗಿದ್ದು, 22ರಂದು ಮೃತಪಟ್ಟಿದ್ದಾರೆ. ಅಧಿಕ ರಕ್ತದೊತ್ತಡ, ಹೃದಯರೋಗ, ಮೂತ್ರಪಿಂಡ ಕಾಯಿಲೆ, ನ್ಯುಮೋನಿಯಾದಿಂದ ಬಳಲುತ್ತಿದ್ದರು.

- ಮಂಗಳೂರಿನ 73ರ ವೃದ್ಧ ಜು. 21ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, 22ರಂದು ನಿಧನ ಹೊಂದಿದ್ದರು. ಅವರು ಹೃದಯ ಕಾಯಿಲೆ, ಸಕ್ಕರೆ ಕಾಯಿಲೆ, ಹೈಪರ್‌ಟೆನ್ಶನ್‌ನಿಂದ ಬಳಲುತ್ತಿದ್ದರು.

-ಮಂಗಳೂರಿನ 58ರ ಮಹಿಳೆ ಜು. 11ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, 22ರಂದು ಮೃತಪಟ್ಟಿದ್ದರು. ಅವರು ಹೈಪರ್‌ಟೆನÒನ್‌ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದರು.

– ಬಂಟ್ವಾಳದ 52ರ ವ್ಯಕ್ತಿ ಜು. 21ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, 22ರಂದು ಮೃತಪಟ್ಟಿದ್ದಾರೆ. ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next