ಬೆಂಗಳೂರು : ಇಂದು ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸ್ಟೋಟವಾಗಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 21,794 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,59,158ಕ್ಕೆ ಏರಿದೆ.
ಇಂದು ಸಂಖ್ಯೆ ಆರೋಗ್ಯ ಇಲಾಖೆ ಹೊರಡಿಸಿರುವ ಅಂಕಿ ಸಂಖ್ಯೆಗಳ ಪ್ರಕಾರ ರಾಜ್ಯದಲ್ಲಿ ಕೋವಿಡ್ ಮಹಾಮಾರಿಗೆ 149 ಜನರು ಸಾವನ್ನಪ್ಪಿದ್ದಾರೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-125, ಬಳ್ಳಾರಿ-406, ಬೆಳಗಾವಿ-186, ಬೆಂಗಳೂರು ಗ್ರಾಮಾಂತರ -513, ಬೆಂಗಳೂರು ನಗರ -13782, ಬೀದರ್- 151, ಚಾಮರಾಜನಗರ -99, ಚಿಕ್ಕಬಳ್ಳಾಪುರ- 217, ಚಿಕ್ಕಮಗಳೂರು -115, ಚಿತ್ರದುರ್ಗ- 121, ದಕ್ಷಿಣ ಕನ್ನಡ -482, ದಾವಣಗೆರೆ- 136, ಧಾರವಾಡ -288, ಗದಗ- 73, ಹಾಸನ- 410, ಹಾವೇರಿ-37, ಕಲಬುರಗಿ-818, ಕೊಡಗು-65, ಕೋಲಾರ- 284, ಕೊಪ್ಪಳ-103, ಮಂಡ್ಯ-413, ಮೈಸೂರು -699, ರಾಯಚೂರು-243, ರಾಮನಗರ-114, ಶಿವಮೊಗ್ಗ-202, ತುಮಕೂರು-1055, ಉಡುಪಿ-109, ಉತ್ತರ ಕನ್ನಡ-106, ವಿಜಯಪುರ-358,ಯಾದಗಿರಿ-84
ಬೆಂಗಳೂರಿನಲ್ಲೇ ಹೆಚ್ಚು :
ಇಂದು ಬಿಡುಗಡೆಯಾಗಿರುವ ಕೋವಿಡ್ ಹೊಸ ಪ್ರಕರಣಗಳ ಪಟ್ಟಿಯಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ಸಿಲಿಕಾನ್ ಸಿಟಿಯಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 13782 ಪ್ರಕಣಗಳು ಪತ್ತೆಯಾಗಿವೆ.