Advertisement

ಮುಂಬೈನಿಂದ ರೈಲಲ್ಲಿ ಬಂದ 210 ಜನ

06:21 AM Jun 03, 2020 | Suhan S |

ವಿಜಯಪುರ: ದುಡಿಮೆ ಅರಸಿ ಮಹಾರಾಷ್ಟ್ರದ ವಿವಿಧ ಕಡೆಗಳಲ್ಲಿ ಗುಳೆ ಹೋಗಿದ್ದ ಜಿಲ್ಲೆಯ 210 ಜನರು ಮಂಗಳವಾರ ಮುಂಬೈ-ಗದಗ ರೈಲು ಮೂಲಕ ನಗರಕ್ಕೆ ಬಂದಿಳಿದರು.

Advertisement

ಬೆಳಗ್ಗೆ 7:30ಕ್ಕೆ ಆಗಮಿಸಿದ ಎಲ್ಲ ಕಾರ್ಮಿಕರನ್ನು ಜಿಲ್ಲಾಡಳಿತ ಬಸ್‌ ಮೂಲಕ ಆಯಾ ತಾಲೂಕಿನ ಕ್ವಾರಂಟೈನ್‌ ಕೇಂದ್ರಕ್ಕೆ ಕಳಿಸುವ ವ್ಯವಸ್ಥೆ ಮಾಡಿತು. ಮುಂಬೈನಿಂದ ಜಿಲ್ಲೆಗೆ ಮರಳಿದ ಕಾರ್ಮಿಕರಲ್ಲಿ ವಿಜಯಪುರ ತಾಲೂಕಿನ 95, ಇಂಡಿ ತಾಲೂಕಿನ 40, ಸಿಂದಗಿ ತಾಲೂಕಿನ  28, ಮುದ್ದೇಬಿಹಾಳ ತಾಲೂಕಿನ 18 ಹಾಗೂ ಬಸವನಬಾಗೇವಾಡಿ ತಾಲೂಕಿನ 29 ಜನರು ಸೇರಿ ಜಿಲ್ಲೆಗೆ ಮರಳಿದ ಎಲ್ಲ ವಲಸಿಗರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದೆ. ರೈಲ್ವೆ ನಿಲ್ದಾಣದಲ್ಲಿ ಕಾರ್ಮಿಕರನ್ನು ಬರ ಮಾಡಿಕೊಂಡು ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಹರ್ಷಾಶಟ್ಟಿ, ಮುಂಬೈಯಿಂದ ಜಿಲ್ಲೆಗೆ ಮರಳಿದವರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗುತ್ತಿದೆ. ಇದಕ್ಕೂ ಮೊದಲು ಆರೋಗ್ಯ ಪರೀಕ್ಷೆ ನಡೆಸಲಿದ್ದೇವೆ. 7 ದಿನ ಸಾಂಸ್ಥಿಕ ಕ್ವಾರಂಟೈನ್‌ ಸಂದರ್ಭದಲ್ಲಿ ಕೋವಿಡ್‌ ರೋಗ ಲಕ್ಷಣ ಕಂಡುಬಂದವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ರೋಗ ಲಕ್ಷಣ ಇಲ್ಲದವರನ್ನು 7 ದಿನ ನಿಗಾದ ಬಳಿಕ ಹೋಂ ಕ್ವಾರಂಟೈನ್‌ಗೆ ಕಳಿಸಲಾಗುತ್ತದೆ ಎಂದರು.

ಮುಂಬೈ ರೈಲಿನಿಂದ ವಿಜಯಪುರ ನಿಲ್ದಾಣದಲ್ಲಿ ಇಳಿದವರಲ್ಲಿ ನೆರೆಯ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಜನರು ಸೇರಿದ್ದಾರೆ. ಇವರನ್ನು ಆಯಾ ಜಿಲ್ಲೆಗೆ ಕಳುಹಿಸಿಕೊಡಲು ಬಸ್‌ ವ್ಯವಸ್ಥೆ ಹಾಗೂ ಆಹಾರ ಕಿಟ್‌ ವ್ಯವಸ್ಥೆ ಮಾಡಲಾಗಿದೆ ಎಂದರು.

ತಹಶೀಲ್ದಾರ್‌ ಮೋಹನಕುಮಾರಿ, ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಡಿವೈಎಸ್‌ಪಿ ಲಕ್ಷ್ಮೀನಾರಾಯಣ ಸೇರಿದಂತೆ ಇತರ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next