Advertisement

ಐದೇ ದಿನದಲ್ಲಿ 210 ಕೋವಿಡ್ ಪಾಸಿಟಿವ್‌

03:09 PM Jul 06, 2020 | Suhan S |

ಧಾರವಾಡ: ಜಿಲ್ಲೆಯಲ್ಲಿ ರವಿವಾರವೂ ವ್ಯಕ್ತಿಯೊಬ್ಬರು ಕೋವಿಡ್ ದಿಂದ ಸಾವನ್ನಪ್ಪಿದ್ದು, ಮತ್ತೆ 45 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 555ಕ್ಕೆ ಏರಿಕೆ ಕಂಡಿದೆ.

Advertisement

ನೆಗಡಿ, ಕೆಮ್ಮು ಮತ್ತು ತೀವ್ರ ಜ್ವರದ ಲಕ್ಷಣವುಳ್ಳ ಹುಬ್ಬಳ್ಳಿ ಗುರುನಾಥನಗರ ನಿವಾಸಿ 67 ವರ್ಷದ ವೃದ್ಧೆ (ಪಿ-23273) ಮೃತಪಟ್ಟಿದ್ದು, ಈ ಮಹಿಳೆಗೆ ಸೋಂಕು ಇರುವುದು ರವಿವಾರ ದೃಢಪಟ್ಟಿದೆ. ಸೋಂಕಿನ ಸಂಪರ್ಕ ಹಾಗೂ ಪ್ರಯಾಣ ಹಿನ್ನೆಲೆ ಇಲ್ಲದ ಈ ಮಹಿಳೆಗೆ ಸೋಂಕಿನ ಲಕ್ಷಣ ಕಂಡುಬಂದ ಕೂಡಲೇ ಜು. 1ರಂದು ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಜು. 5ರಂದು ಬೆಳಗ್ಗೆ 9:45 ಗಂಟೆಗೆ ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಇನ್ನೂ ಜು. 1ರಿಂದ 5ರ ವರೆಗೆ ಬರೀ 5 ದಿನಗಳಲ್ಲಿ 210 ಜನರಲ್ಲಿ ಸೋಂಕು ದೃಢಪಟ್ಟಿದೆ.

1ರಂದು 35, 2ರಂದು 47, 3ರಂದು 38, 4ರಂದು 45 (3 ಸಾವು) ಹಾಗೂ ರವಿವಾರ ಮತ್ತೆ 45 ಜನರಲ್ಲಿ ಸೋಂಕು ಪತ್ತೆ ಆಗಿದೆ. ರವಿವಾರ ಪತ್ತೆಯಾದ 45 ಜನ ಸೋಂಕಿತರಲ್ಲಿ ಸೋಂಕಿತರ ಸಂಪರ್ಕದಿಂದ 15 ಜನರಿಗೆ ಸೋಂಕು ಹರಡಿದ್ದರೆ, 9 ಜನ ಸೋಂಕಿತರ ಸಂಪರ್ಕದ ಮೂಲ ಪತ್ತೆ ಆಗಬೇಕಿದೆ. ಇನ್ನೂ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರ ಲಕ್ಷಣದ ತಪಾಸಣೆಯಿಂದ 18 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದಲ್ಲದೇ ರವಿವಾರ 22 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಗುಣಮುಖರಾದವರ ಸಂಖ್ಯೆ 238ಕ್ಕೆ ಏರಿಕೆಯಾಗಿ ಸಕ್ರಿಯ ಸೋಂಕಿತರ ಸಂಖ್ಯೆ 305ಕ್ಕೆ ಬಂದು ನಿಲ್ಲುವಂತಾಗಿದೆ.

ಸಂಪರ್ಕದ ನಂಜು: ಧಾರವಾಡ ಕೆಸಿ ಪಾರ್ಕ್‌ ಹಿಂಭಾಗದ ಅರಣ್ಯ ಇಲಾಖೆ ವಸತಿ ಗೃಹದ ನಿವಾಸಿ ಪಿ-14527 ಸಂಪರ್ಕದಿಂದ ಅದೇ ವಸತಿ ಗೃಹದ ನಿವಾಸಿಗಳಾದ 34 ವರ್ಷದ ಮಹಿಳೆ (ಪಿ-23238), 64 ವರ್ಷದ ಮಹಿಳೆ (ಪಿ-  23239), 50 ವರ್ಷದ ಮಹಿಳೆ (ಪಿ-23240), 7 ವರ್ಷದ ಬಾಲಕ (ಪಿ-23241), 3 ವರ್ಷದ ಬಾಲಕಿಗೂ (ಪಿ-23241) ಸೋಂಕು ಹರಡಿದೆ.

ಧಾರವಾಡದ ಮಿಚಿಗನ್‌ ಕಾಂಪೌಂಡ್‌ ಲೋಬೋ ಅಪಾರ್ಟ್‌ಮೆಂಟ್‌ ನಿವಾಸಿ ಪಿ-9416 ಸಂಪರ್ಕದಿಂದ ಮೆಹಬೂಬ್‌ ನಗರದ 53 ವರ್ಷದ ಮಹಿಳೆ (ಪಿ-23230), ಪಿ-11397 ಸಂಪರ್ಕದಿಂದ ಹುಬ್ಬಳ್ಳಿ ಜನ್ನತ್‌ ನಗರ ನಿವಾಸಿ 33 ವರ್ಷದ ಮಹಿಳೆ (ಪಿ-23235), ಧಾರವಾಡದ ಉಳವಿ ಬಸವೇಶ್ವರ ಗುಡ್ಡದ ನಿವಾಸಿ ಪಿ-16925 ಸಂಪರ್ಕದಿಂದ ಅದೇ ಪ್ರದೇಶದ 55 ವರ್ಷದ ಪುರುಷ (ಪಿ-23255), ಧಾರವಾಡದ ಕೋರ್ಟ್‌ ಸರ್ಕಲ್‌ನ ಅಂಚೆಕಚೇರಿ ಹತ್ತಿರದ ಭೋವಿ ಗಲ್ಲಿ ನಿವಾಸಿ ಪಿ-13475 ಸಂಪರ್ಕದಿಂದ ಮದಿಹಾಳದ ಆದಿಶಕ್ತಿ ಕಾಲೋನಿ 17 ವರ್ಷದ ಯುವಕನಲ್ಲಿ (ಪಿ-23258) ಸೋಂಕು ಪತ್ತೆಯಾಗಿದೆ. ಹುಬ್ಬಳ್ಳಿಯ ಯಲ್ಲಾಪುರ ಓಣಿಯ ಪಾಟೀಲ ಗಲ್ಲಿ ನಿವಾಸಿ ಪಿ-20050 ಸಂಪರ್ಕದಿಂದ ಹುಬ್ಬಳ್ಳಿ ಜನ್ನತ್‌ ನಗರ ನಿವಾಸಿ 29 ವರ್ಷದ ಪುರುಷ (ಪಿ-23237), ಹುಬ್ಬಳ್ಳಿ ಕೇಶ್ವಾಪುರದ ಪಿ-15606 (40 ವರ್ಷ, ಮಹಿಳೆ), ಪಿ-15607 ಸಂಪರ್ಕದಿಂದ 57 ವರ್ಷದ ಪುರುಷ (ಪಿ-23251), ಹುಬ್ಬಳ್ಳಿಯ ಗಣೇಶಪೇಟೆಯ ಬಿಂದರಗಿ ಓಣಿಯ ಪಿ-10805 ಸಂಪರ್ಕದಿಂದ ಹಳೆಹುಬ್ಬಳ್ಳಿ ಸದರ್‌ ಸೋಫಾ ನಿವಾಸಿ 64 ವರ್ಷದ ಪುರುಷ (ಪಿ-23271) ಹಾಗೂ ನವಲಗುಂದ ತಾಲೂಕಿನ ಶಿರಕೋಳದ ಪಿ-18713 ಸಂಪರ್ಕದಿಂದ 40 ವರ್ಷದ ಪುರುಷ (ಪಿ-23260), ಪಿ-18713 ಸಂಪರ್ಕದಿಂದ 55 ವರ್ಷದ ಮಹಿಳೆಗೆ (ಪಿ-23274) ಸೋಂಕು ಹರಡಿದೆ.

Advertisement

ಸಂಪರ್ಕ ಪತ್ತೆಗೆ ಹುಡುಕಾಟ: ಹುಬ್ಬಳ್ಳಿ ಗಿರಣಿಚಾಳ ನಿವಾಸಿ 88 ವರ್ಷದ ವೃದ್ಧ (ಪಿ-23232), ಹುಬ್ಬಳ್ಳಿ ಎಂ.ಡಿ. ಕಾಲೋನಿ ನಿವಾಸಿ 33 ವರ್ಷದ ಪುರುಷ (ಪಿ-23243), ಹುಬ್ಬಳ್ಳಿ ಎನ್‌. ಎ.ನಗರ 4ನೇ ಕ್ರಾಸ್‌ ನಿವಾಸಿ 28 ವರ್ಷದ ಪುರುಷ (ಪಿ-23244), ಹುಬ್ಬಳ್ಳಿ ಶಾಂತಿನಿಕೇತನ ಕಾಲೋನಿ 8ನೇ ಕ್ರಾಸ್‌ ನಿವಾಸಿ 50 ವರ್ಷದ ಪುರುಷ (ಪಿ-23245), ಹುಬ್ಬಳ್ಳಿ ಕೆಎಸ್‌ಆರ್‌ ಟಿಸಿ ಕ್ವಾರ್ಟರ್‌ ನಿವಾಸಿಗಳಾದ 41 ವರ್ಷದ ಪುರುಷ (ಪಿ-23246), 36 ವರ್ಷದ ಮಹಿಳೆ (ಪಿ-23247), ಹುಬ್ಬಳ್ಳಿ ಯಲ್ಲಾಪುರ ಓಣಿ ನಿವಾಸಿ 6 ವರ್ಷದ ಬಾಲಕಿ (ಪಿ-23249), ಹುಬ್ಬಳ್ಳಿ ನೇಕಾರ ನಗರ ನಿವಾಸಿ 21 ವರ್ಷದ ಮಹಿಳೆ (ಪಿ-23250), ಹುಬ್ಬಳ್ಳಿ ನಗರದ ಗದಗ ರಸ್ತೆ ವೆನುಂತನ್‌ ಕಾಲೋನಿ ನಿವಾಸಿ 22 ವರ್ಷದ ಮಹಿಳೆ (ಪಿ-23267), ಗದುಗಿನ ರಾಮನಗರದ ನಿವಾಸಿ 45 ವರ್ಷದ ಮಹಿಳೆಯಲ್ಲಿ (ಪಿ-23272) ಸೋಂಕು ಪತ್ತೆಯಾಗಿದೆ. ಈ ಸೋಂಕಿತರ ಸಂಪರ್ಕದ ಮೂಲ ಪತ್ತೆ ಹಚ್ಚಲಾಗುತ್ತಿದೆ.

ಅಂತರ್ಜಿಲ್ಲಾ ಪ್ರವಾಸ: ಬಾಗಲಕೋಟೆ ಜಿಲ್ಲಾ ಪ್ರಯಾಣ ಹಿನ್ನೆಲೆಯ ಧಾರವಾಡದ ಮುದಿ ಮಾರುತಿ ಗುಡಿ ಓಣಿ ನಿವಾಸಿ 41 ವರ್ಷದ ಪುರುಷ (ಪಿ-23253), ಬಳ್ಳಾರಿ ಜಿಲ್ಲಾ ಪ್ರಯಾಣ ಹಿನ್ನೆಲೆಯ ಧಾರವಾಡ ತಾಲೂಕು ತಡಕೋಡ ತಿಮ್ಮಾಪುರ ಓಣಿ ನಿವಾಸಿ 48 ವರ್ಷದ ಪುರುಷ (ಪಿ-23261), ಹುಬ್ಬಳ್ಳಿ ಅರುಣ ಕಾಲೋನಿ ಅಮನ್‌ ರೆಸಿಡೆನ್ಸಿಯ 36 ವರ್ಷದ ಪುರುಷನಲ್ಲಿ(ಪಿ-23264) ಸೋಂಕುದೃಢಪಟ್ಟಿದೆ.

ತಪಾಸಣೆಯಲ್ಲಿ ದೃಢ: ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದ ಹುಬ್ಬಳ್ಳಿ ತಾಜ್‌ ನಗರ ನಿವಾಸಿ 21 ವರ್ಷದ ಪುರುಷ (ಪಿ-23231), ಹುಬ್ಬಳ್ಳಿ ಕೇಶ್ವಾಪುರ ಯುರೇಕಾ ಕಾಲೋನಿ ನಿವಾಸಿ 50 ವರ್ಷದ ಪುರುಷ (ಪಿ-23233), ಹಳೆಹುಬ್ಬಳ್ಳಿ ನಿವಾಸಿ 63 ವರ್ಷದ ಪುರುಷ (ಪಿ -23234), ಹುಬ್ಬಳ್ಳಿ ಲಕ್ಷ್ಮೀ ಕಾಲೋನಿ ನಿವಾಸಿ 24 ವರ್ಷದ ಪುರುಷ (ಪಿ -23236), ಹುಬ್ಬಳ್ಳಿ ಲೋಹಿಯಾ ನಗರದ ರಾಮಲಿಂಗೇಶ್ವರ ನಗರ ನಿವಾಸಿ 72 ವರ್ಷದ ವೃದ್ಧ (ಪಿ-23248), ಹುಬ್ಬಳ್ಳಿ ಕ್ಲಬ್‌ ರಸ್ತೆ ನಿವಾಸಿ 35 ವರ್ಷದ ಪುರುಷ (ಪಿ-23252), ಧಾರವಾಡದ ಕಂಕೂರ ನಿವಾಸಿ 30 ವರ್ಷದ ಪುರುಷ (ಪಿ-23254), ಧಾರವಾಡದ ಎಂ.ಆರ್‌. ನಗರ ನಿವಾಸಿ 33 ವರ್ಷದ ಪುರುಷ (ಪಿ-23256), ಕಲಘಟಗಿ ತಾಲೂಕು ನಿಂಗನಕೊಪ್ಪ ನಿವಾಸಿ 70 ವರ್ಷದ ಪುರುಷ (ಪಿ-23257), ನವಲೂರಿನ 40 ವರ್ಷದ ಪುರುಷ (ಪಿ-23260), ಹುಬ್ಬಳ್ಳಿ ನಗರದ ಗದಗ ರಸ್ತೆಯ ಚೇತನಾ ಕಾಲೋನಿ ನಿವಾಸಿಗಳಾದ 26 ವರ್ಷದ ಮಹಿಳೆ (ಪಿ-23262), 58 ವರ್ಷದ ಪುರುಷ (ಪಿ-23263), 67 ವರ್ಷದ ಪುರುಷ (ಪಿ-23265), 28 ವರ್ಷದ ಪುರುಷ (ಪಿ-23266), ಧಾರವಾಡ ಕೆಲಗೇರಿಯ ಗುಡ್ಡದಮಠ ಪ್ಲಾಟ್‌ ನಿವಾಸಿ 34 ವರ್ಷದ ಪುರುಷ (ಪಿ-23268), ಶ್ರೀನಗರ 7ನೇ ಕ್ರಾಸ್‌ ನಿವಾಸಿ 35 ವರ್ಷದ ಪುರುಷ (ಪಿ-23269), ಧಾರವಾಡ ತಾಲೂಕು ನರೇಂದ್ರ ಗ್ರಾಮದ ಮಸೂತಿ ಓಣಿ ನಿವಾಸಿ 33 ವರ್ಷದ ಮಹಿಳೆ (ಪಿ-23270) ಹಾಗೂ ಹುಬ್ಬಳ್ಳಿ ಗುರುನಾಥನಗರ ನಿವಾಸಿ 63 ವರ್ಷದ ಮಹಿಳೆಯಲ್ಲಿ (ಪಿ-23273) ಸೋಂಕು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next