Advertisement

21 ವರ್ಷದ ಯುವತಿಗೆ ಕೋವಿಡ್‌ 19 ಸೋಂಕು!

06:47 AM Jun 23, 2020 | Lakshmi GovindaRaj |

ವಿಜಯಪುರ: ಪಟ್ಟಣದಲ್ಲಿ 21 ವರ್ಷದ ಯುವತಿಗೆ ಕೋವಿಡ್‌ 19 ಸೋಂಕು ಧೃಡಪಟ್ಟಿದೆ. ಪಟ್ಟಣದ ಧರ್ಮರಾಯ ಸ್ವಾಮಿ ದೇವಾಲಯ ರಸ್ತೆಯ ನಿವಾಸಿ 21 ವರ್ಷದ ಯುವತಿ ಹೊಟ್ಟೆ ನೋವಿನ ಕಾರಣದಿಂದ ಜೂನ್‌ 20ರಂದು  ದೇವನಹಳ್ಳಿಯ ಲೀನಾ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದು, ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅಲ್ಲಿ ರಕ್ತದ ಮಾದರಿ ಮತ್ತು ಇತರೆ ಪರೀಕ್ಷೆ ಮಾಡಿದಾಗ ಕೋವಿಡ್‌ 19 ಸೋಂಕು ದೃಢಪಟ್ಟಿದೆ.

Advertisement

ಯುವತಿಯ ತಂದೆ, ತಾಯಿ ಮತ್ತು ಸಹೋದರನನ್ನು ದೇವನಹಳ್ಳಿ ಕ್ವಾರಂಟೈನ್‌ ಕೇಂದ್ರದಲ್ಲಿ ಇರಿಸಲಾಗಿದೆ. ಎಂ.ಎಸ್‌. ರಾಮಯ್ಯ ಆಸ್ಪತ್ರೆಯ ಆರು ಜನ ಸಿಬ್ಬಂದಿಯನ್ನು ಆಸ್ತತ್ರೆಯ ಹಾಸ್ಟೆಲ್‌ ನಲ್ಲಿ  ಕ್ವಾರಂಟೈನ್‌ ಮಾಡಲಾಗಿದೆ. ಯುವತಿಯು ವಾಸ ವಿದ್ದ ವಿಜಯಪುರದ 11ನೇ ವಾರ್ಡ್‌ನ ಧರ್ಮರಾಯಸ್ವಾಮಿ ದೇವಾಲಯ ರಸ್ತೆಯನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಸಂಜಯ್‌ ತಿಳಿಸಿದರು.

ವಲಸೆ ಕಾರ್ಮಿಕರ ಮಾಹಿತಿ ಸಂಗ್ರಹಣೆಗೆ ಆದೇಶ: ಕೋವಿಡ್‌-19 ತಡೆಗಟ್ಟುವ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಿಗೆ ಹೋಗಲು ಇಚ್ಛಿಸುವ ವ್ಯಕ್ತಿಗಳ ವಿವರವ  ನ್ನು ಅಪ್‌ಲೋಡ್‌ ಮಾಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಹಕಾರ  ಸಂಘಗಳ ನೋಂದಣಾಧಿಕಾರಿ ಹಾಗೂ ನಿಬಂಧಕಿ ಯಶಸ್ವಿನಿ (ಮೊ.948  1389269) ಅವರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಿ ಜಿಲ್ಲಾಧಿಕಾರಿ ಪಿ. ಎನ್‌.ರವೀಂದ್ರ ಆದೇಶಿಸಿದ್ದಾರೆ.

ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಮಸ್ಟರಿಂಗ್‌ ಸೆಂಟರ್‌ಗಳಲ್ಲಿ ಹೆಲ್ಪ್ ಡೆಸ್ಕ್ಗಳಾಗಿ ಕಾರ್ಯನಿರ್ವಹಿಸಲು ದೊಡ್ಡಬಳ್ಳಾಪುರ ತಾಲೂಕಿನ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಹರಿಪ್ರಸಾದ್‌ (ಮೊ.9964117150), ದೇವನಹಳ್ಳಿ ತಾಲೂಕಿನ ಮೆಟ್ರಿಕ್‌ ನಂತ  ರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಹನುಮಂತರಾಜು (ಮೊ. 994549 5911), ನೆಲಮಂಗಲ ತಾಲೂಕಿನ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ನೀಲಾಂಜನ ಮೂರ್ತಿ (ಮೊ. 9844995353), ಹೊಸಕೋಟೆ ತಾಲೂ ಕಿನ  ಮೆಟ್ರಿಕ್‌ ನಂತ ರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಅಶೋಕ್‌ (ಮೊ. 9900321668) ಅವರನ್ನು ನೇಮಿಸಿ ಜಿಲ್ಲಾಧಿಕಾರಿ ಪಿ. ಎನ್‌.ರವೀಂದ್ರ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next