Advertisement

ಬಾರ್ಬಿ ಲುಕ್‌ಗಾಗಿ 53 ಲಕ್ಷ ರೂ.!

02:19 AM May 07, 2022 | Team Udayavani |

ಸಿಡ್ನಿ: ಆಸ್ಟ್ರೇಲಿಯಾದ ಜೆಸ್ಸಿಕಾ ಎಂಬ ರೂಪದರ್ಶಿ ತಾನು ಬಾರ್ಬಿ ಗೊಂಬೆಯಂತೆ ಕಾಣಬೇಕೆಂಬ ಹಂಬಲದಿಂದ ಸುಮಾರು 53 ಲಕ್ಷ ರೂ. ಖರ್ಚು ಮಾಡಿ, ಹಲವಾರು ಶಸ್ತ್ರಚಿಕಿತ್ಸೆಗೆ ಒಳಗಾಗಿ ತನ್ನ ಮುಖ ಹಾಗೂ ದೇಹವನ್ನು ಬಾರ್ಬಿ ಗೊಂಬೆಯ ಹಾಗೆ ಮಾಡಿಕೊಂಡಿದ್ದಾಳೆ.

Advertisement

ಈಗ ತನ್ನ ಹೆಸರನ್ನು “ಜೆಸ್ಸಿ ಬನ್ನಿ’ ಎಂದು ಬದಲಾಯಿಸಿಕೊಂಡಿರುವ ಆಕೆ, “ಆಸ್ಟ್ರೇಲಿಯನ್‌ ಡೈಲಿ’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ, “ಬಾರ್ಬಿ ಗೊಂಬೆಯಂತೆ ಕಾಣುವ ಹಂಬಲದಿಂದ ನನ್ನ ದೇಹವನ್ನು ಅಗತ್ಯಕ್ಕಿಂತ ಹೆಚ್ಚು ದಪ್ಪ ಮಾಡಿಸಿಕೊಳ್ಳಲು ಹೆಚ್ಚು ಹಣ ವ್ಯಯ ಮಾಡಿದ್ದೆ.

ಇದರಿಂದ ನನ್ನ ಕುಟುಂಬದವರು ಮುನಿಸಿಕೊಂಡು ನನ್ನ ಜತೆ ಮಾತಾಡುವುದನ್ನೇ ನಿಲ್ಲಿಸಿದ್ದಾರೆ’ ಎಂದಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next