Advertisement

Drought: ಬರಪೀಡಿತ ಪಟ್ಟಿಗೆ ಮತ್ತೆ 21 ತಾಲೂಕು

11:45 PM Oct 19, 2023 | Team Udayavani |

ಬೆಂಗಳೂರು: ಮುಂಗಾರು ಕೊರತೆಯಿಂದ ರಾಜ್ಯದ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದ ಸರಕಾರ, 2ನೇ ಹಂತದಲ್ಲಿ 21 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿದೆ. ಈ ಪೈಕಿ 17 ತೀವ್ರ ಬರಪೀಡಿತ ಹಾಗೂ 4 ಸಾಧಾರಣ ಬರಪೀಡಿತ ತಾಲೂಕುಗಳಿವೆ.

Advertisement

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ರಾಜ್ಯದಲ್ಲಿ ಒಟ್ಟಾರೆ 216 ತಾಲೂಕುಗಳು ಬರಬಾಧಿತ ಪ್ರದೇಶಗಳ ವ್ಯಾಪ್ತಿಗೆ ಸೇರಿದ್ದು, ಸುಮಾರು 33,770 ಕೋಟಿ ರೂ. ಮೌಲ್ಯದ ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟವಾಗಿದೆ. ಕೇಂದ್ರದಿಂದ 4,414 ಕೋಟಿ ರೂ. ಕೃಷಿ ಬೆಳೆ ನಷ್ಟ ಪರಿಹಾರ, ಪಶು ಆಹಾರಕ್ಕೆ 355 ಕೋ. ರೂ., ಕುಡಿಯುವ ನೀರು ಪೂರೈಕೆಗೆ 554 ಕೋ. ರೂ. ಸಹಿತ ಒಟ್ಟು 17,901.73 ಕೋ. ರೂ. ನೆರವನ್ನೂ ಕೇಳುತ್ತೇವೆ. ಕೇಂದ್ರ ಸಚಿವರ ಭೇಟಿಗೆ ಅವಕಾಶ ಸಿಗದಿರುವ ಬಗ್ಗೆ ಸಂಪುಟದಲ್ಲಿ ಚರ್ಚಿಸಿದ್ದು, ದಿಲ್ಲಿಗೇ ಹೋಗಿ ಕೇಂದ್ರ ಮಂತ್ರಿಗಳ ಭೇಟಿಗೆ ಪ್ರಯತ್ನಿಸುವಂತೆ ಕೃಷಿ ಸಚಿವ ಕೃಷ್ಣ ಬೈರೇಗೌಡರಿಗೆ ಸೂಚಿಸಲಾಗಿದೆ.

ತೀವ್ರ ಬರಪೀಡಿತ ತಾಲೂಕುಗಳು
ಬೆಳಗಾವಿ, ಖಾನಾಪುರ, ಚಾಮರಾಜನಗರ, ಅಳ್ನಾವರ, ಅಣ್ಣಿಗೇರಿ, ಕಲಘಟಗಿ, ಮುಂಡರಗಿ, ಹಾಸನ, ಆಲೂರು, ಅರಸೀಕೆರೆ, ಬ್ಯಾಡಗಿ, ಹಾನಗಲ್‌, ಶಿಗ್ಗಾಂವಿ, ಪೊನ್ನಂಪೇಟೆ, ಕೆ.ಆರ್‌. ನಗರ, ಹೆಬ್ರಿ, ದಾಂಡೇಲಿ.

ಸಾಧಾರಣ ಬರಪೀಡಿತ ತಾಲೂಕು
ಯಳಂದೂರು, ಮೂಡಿಗೆರೆ, ತರೀಕೆರೆ, ಸಿದ್ದಾಪುರ.

Advertisement

Udayavani is now on Telegram. Click here to join our channel and stay updated with the latest news.

Next