Advertisement

Adani ಕಲ್ಲಿದ್ದಲು ಕೇಸ್‌ ಶೀಘ್ರ ಇತ್ಯರ್ಥಕ್ಕೆ ಸಿಜೆಐಗೆ 21 ಸಂಘಟನೆಗಳ ಮನವಿ

01:14 AM May 25, 2024 | Team Udayavani |

ಹೊಸದಿಲ್ಲಿ: ಕಲ್ಲಿದ್ದಲು ಆಮದು ಕುರಿತು ಅದಾನಿ ಗ್ರೂಪ್‌ ಮೇಲಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರಿಗೆ 21 ಅಂತಾರಾಷ್ಟ್ರೀಯ ಸಂಘಟನೆಗಳು ಮನವಿ ಪತ್ರ ಬರೆದಿವೆ.

Advertisement

2013ರಲ್ಲಿ ಅದಾನಿ ಗ್ರೂಪ್‌ ಇಂಡೋನೇಷ್ಯಾದಿಂದ ಕಳಪೆ ಗುಣಮಟ್ಟದ ಕಲ್ಲಿದ್ದಲನ್ನು ಆಮದು ಮಾಡಿಕೊಂಡು, ಉತ್ಕೃಷ್ಟ ಗುಣಮಟ್ಟದ್ದೆಂದು ಸುಳ್ಳು ಹೇಳಿ ತಮಿಳುನಾಡಿನ ವಿದ್ಯುತ್‌ ಉತ್ಪಾದನ ಕಂಪೆನಿಗೆ ಮಾರಾಟ ಮಾಡಿದ ಆರೋಪವನ್ನು ಎದುರಿಸುತ್ತಿದೆ. ಈ ಅವ್ಯವಹಾರದ ಕುರಿತು ಕಂದಾಯ ಗುಪ್ತಚರ ನಿರ್ದೇಶನಾಲಯ ಕೇಸು ದಾಖಲಿಸಿದೆ. ಈ ಪ್ರಕರಣವನ್ನು ಆದಷ್ಟು ಬೇಗ ಇತ್ಯರ್ಥಗೊಳಿಸುವಂತೆ ಈಗ ಲಂಡನ್‌ ಮೈನಿಂಗ್‌ ನೆಟ್‌ವರ್ಕ್‌ ಸೇರಿ 21 ಸಂಘಟನೆಗಳು ಸಿಜೆಐಗೆ ಪತ್ರ ಬರೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next