Advertisement

ಮತ್ತೆ 10 ಸಿಂಹಗಳ ಸಾವು

08:35 AM Oct 03, 2018 | Karthik A |

ರಾಜ್‌ಕೋಟ್‌/ಅಹಮದಾಬಾದ್‌: ಗುಜರಾತ್‌ನ ಗಿರ್‌ ಸಿಂಹ ಅಭಯಾರಣ್ಯದಿಂದ ಜಸಾಧಾರ್‌ ಪ್ರಾಣಿ ಸೇವಾ ಕೇಂದ್ರಕ್ಕೆ ತರಲಾಗಿದ್ದ ಹತ್ತು ಸಿಂಹಗಳು ಅಸುನೀಗಿವೆ. ಅವುಗಳೆಲ್ಲವೂ ಏಷ್ಯಾಟಿಕ್‌ ವಲಯಕ್ಕೆ ಸೇರಿದ ಅಪರೂಪದ ಸಿಂಹಗಳಾಗಿವೆ. ಹೀಗಾಗಿ ಇದುವರೆಗೆ ಅಸುನೀಗಿದ ಸಿಂಹಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಸೆ.20ರಿಂದ 30ರ ನಡುವಿನ ದಿನಗಳಲ್ಲಿ ಒಂದೊಂದಾಗಿ ಕೊನೆಯುಸಿರೆಳೆದಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Advertisement

ಇದಕ್ಕೂ ಮೊದಲು ಸೆ.12ರಿಂದ 16ರ ನಡುವೆ 11 ಸಿಂಹಗಳು ಕ್ಯಾನಿ ಡಿಸ್ಟೆಂಪರ್‌ ವೈರಸ್‌ ನಿಂದಾಗಿ (ಸಿಡಿವಿ) ಅಸುನೀಗಿವೆ. ಅರಣ್ಯ ಪ್ರದೇಶದಲ್ಲಿ ನಾಯಿಗಳಿಂದಾಗಿ ಈ ವೈರಸ್‌ ಹರಡುತ್ತದೆ. 1994ರಲ್ಲಿ ತಾಂಜೇನಿಯಾದಲ್ಲಿರುವ ಸೆರೆಂಗೆಟಿ ಸಿಂಹ ಅಭಯಾರಣ್ಯದಲ್ಲಿ ಇದೇ ವೈರಸ್‌ನಿಂದಾಗಿ 1 ಸಾವಿರ ಸಿಂಹಗಳು ಸಾವಿಗೀಡಾಗಿದ್ದವು. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ ನಾಯಿಗಳು, ದನಗಳು, ಹುಲ್ಲುಗಾವಲುಗಳಲ್ಲಿರುವ ಉಣ್ಣಿಯಿಂದ (ticks) ಈ ಸೋಂಕು ಹಬ್ಬುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೆಮಾರ್ಡಿಯಿಂದ 31 ಸಿಂಹಗಳನ್ನು ಜಂವಾಲಾ ಸಂರಕ್ಷಣಾ ಕೇಂದ್ರಕ್ಕೆ ವರ್ಗಾಯಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next