Advertisement

Kolar: ವಸತಿ ಶಾಲೆಯಲ್ಲಿ ಊಟ ಸೇವಿಸಿ 21 ಮಕ್ಕಳು ಅಸ್ವಸ್ಥ

08:34 PM Aug 09, 2024 | Team Udayavani |

ಕೋಲಾರ: ವಸತಿ ಶಾಲೆಯಲ್ಲಿ ಊಟ ಸೇವಿಸಿದ 21 ಮಂದಿ ಬಾಲಕರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಅಮ್ಮನಲ್ಲೂರು ಗ್ರಾಮದ ಸಮಾಜ ಕಲ್ಯಾಣ ಬಾಲಕರ ವಸತಿ ನಿಲಯದಲ್ಲಿ ನಡೆದಿದ್ದು, ಹಾಸ್ಟೆಲ್‌ನ ವಾರ್ಡನ್‌ ನರಸಿಂಹಯ್ಯ ಅವರನ್ನು ಅಮಾನತು ಮಾಡಲಾಗಿದೆ.

Advertisement

ಅಮ್ಮನಲ್ಲೂರು ಸಮಾಜ ಕಲ್ಯಾಣ ಹಾಸ್ಟೆಲ್‌ನಲ್ಲಿದ್ದ 21 ಮಂದಿ ಮಕ್ಕಳು ಬೆಳಗ್ಗೆ ತಿಂಡಿಗಾಗಿ ಮಾಡಿದ್ದ ದೋಸೆ ಮತ್ತು ಚಟ್ನಿಯನ್ನು ತಿಂದು ಶಾಲೆಗೆ ತೆರಳಿದ್ದರು. ಶಾಲೆಗೆ ಹೋಗುತ್ತಿದ್ದಂತೆಯೇ ಮಕ್ಕಳಲ್ಲಿ ವಾಂತಿ ಕಾಣಿಸಿಕೊಂಡಿದೆ. ಗಾಬರಿಯಾದ ಶಾಲಾ ಶಿಕ್ಷಕರು 21 ಮಕ್ಕಳನ್ನು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು ಅವರಲ್ಲಿ ತೀವ್ರ ಅಸ್ವಸ್ಥರಾದ ಐವರನ್ನು ಚಿಂತಾಮಣಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ತಿಂಡಿ ಸೇವಿಸಿದ್ದ ಅಡುಗೆ ಸಹಾಯಕಿಗೂ ವಾಂತಿಯಾಗಿದೆ. ಹಾಸ್ಟೆಲ್‌ ವಾರ್ಡನ್‌ ರಜೆ ವೇಳೆ ಅಡುಗೆ ಸಿಬ್ಬಂದಿ ಜವಾಬ್ದಾರಿ ಹೊತ್ತಿದ್ದರು ಎನ್ನಲಾಗಿದೆ.

ಆಸ್ಪತ್ರೆಗೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್‌ ಧಾವಿಸಿ ಮಕ್ಕಳ ಆರೋಗ್ಯ ವಿಚಾರಿಸಿದರು. ಬಳಿಕ ವಾರ್ಡನ್‌ ಅವರನ್ನು ಅಮಾನತು ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next