Advertisement

ಗಣಿತ ಪರೀಕ್ಷೆಗೆ 20,804 ವಿದ್ಯಾರ್ಥಿಗಳು ಹಾಜರ್‌

09:33 AM Jun 28, 2020 | Suhan S |

ದಾವಣಗೆರೆ: ಜಿಲ್ಲೆಯ 93 ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ ನಡೆದ ಎಸ್ಸೆಸ್ಸೆಲ್ಸಿ ಗಣಿತ ವಿಷಯದ ಪರೀಕ್ಷೆಗೆ 20,804 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

Advertisement

ಒಟ್ಟು 21,991 ನೋಂದಾಯಿತ ವಿದ್ಯಾರ್ಥಿಗಳಲ್ಲಿ 20,804 ವಿದ್ಯಾರ್ಥಿಗಳು ಹಾಜರಾಗಿದ್ದರು. 1,247 ವಿದ್ಯಾರ್ಥಿಗಳು ಗೈರಾಗಿದ್ದರು. ಪರೀಕ್ಷಾ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ವರದಿಯಾಗಿಲ್ಲ. ಚನ್ನಗಿರಿಯಲ್ಲಿ 3,974 ವಿದ್ಯಾರ್ಥಿಗಳಲ್ಲಿ 3,719, ದಾವಣಗೆರೆ ಉತ್ತರದಲ್ಲಿ 3,341 ವಿದ್ಯಾರ್ಥಿಗಳಲ್ಲಿ 3,242, ದಾವಣಗೆರೆ ದಕ್ಷಿಣದಲ್ಲಿ 6,234 ವಿದ್ಯಾರ್ಥಿಗಳಲ್ಲಿ 5,299, ಹರಿಹರದಲ್ಲಿ 3,22 ವಿದ್ಯಾರ್ಥಿಗಳಲ್ಲಿ 3,059, ಜಗಳೂರಿನಲ್ಲಿ 2,312 ವಿದ್ಯಾರ್ಥಿಗಳಲ್ಲಿ 2,206 ವಿದ್ಯಾರ್ಥಿಗಳು ಹಾಜರಾಗಿದ್ದರು. ಹೊನ್ನಾಳಿ ತಾಲೂಕಿನಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ಗೈರಾಗಿಲ್ಲ. ನೋಂದಣಿಯಾದ ಎಲ್ಲಾ 2,908 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಜಿಲ್ಲೆಯ ವಿವಿಧ ಕಂಟೇನ್ಮೆಂಟ್‌ ಝೋನ್‌ನ 96 ವಿದ್ಯಾರ್ಥಿಗಳಲ್ಲಿ 80 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಚನ್ನಗಿರಿಯಲ್ಲಿ 7, ದಾವಣಗೆರೆ ಉತ್ತರದಲ್ಲಿ 21, ದಾವಣಗೆರೆ ದಕ್ಷಿಣದಲ್ಲಿ 23, ಹರಿಹರದಲ್ಲಿ 28, ಹೊನ್ನಾಳಿಯಲ್ಲಿ ಒಬ್ಬ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿದ್ದರು. ಅನಾರೋಗ್ಯದ ಕಾರಣದಿಂದ ದಾವಣಗೆರೆ ದಕ್ಷಿಣ ವಲಯದಲ್ಲಿ ಓರ್ವ ವಿದ್ಯಾರ್ಥಿ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದರು. ಸರ್ಕಾರಿ ಮತ್ತು ಖಾಸಗಿ ವಸತಿ ನಿಲಯಗಳಲ್ಲಿನ 167 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ 86 ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. 375 ವಲಸೆ ವಿದ್ಯಾರ್ಥಿಗಳಲ್ಲಿ 373 ವಿದ್ಯಾರ್ಥಿಗಳು ಹಾಜರಾಗಿದ್ದರೆ, ಇಬ್ಬರು ಗೈರು ಹಾಜರಾಗಿದ್ದರು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next