Advertisement
ಇದರೊಂದಿಗೆ ದಾಖಲೆಯ 778 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
Related Articles
Advertisement
ರಾಜಧಾನಿಯಲ್ಲಿ 1,148 ಮಂದಿಗೆ ಸೋಂಕುಬುಧವಾರದ 2,062 ಸೋಂಕಿತರ ಪೈಕಿ ರಾಜಧಾನಿ ಬೆಂಗಳೂರಿನವರು 1,148 ಮಂದಿ ಇದ್ದು, ಯಾರೊಬ್ಬರದ್ದು, ಸೋಂಕಿನ ಹಿನ್ನೆಲೆ (ಹೇಗೆ, ಯಾರಿಂದ, ಯಾವ ಸಂಪರ್ಕದಿಂದ) ಪತ್ತೆಯಾಗಿಲ್ಲ. 24 ಸೋಂಕಿತರು ಸಾವಿಗೀಡಾಗಿದ್ದು, ಇದು ನಗರದಲ್ಲಿ ಈವರೆಗೆ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದೆ. ಈ ಮೂಲಕ ನಗರದ ಸೋಂಕು ಪ್ರಕರಣಗಳ ಸಂಖ್ಯೆ 12,509ಕ್ಕೆ, ಸಾವಿಗೀಡಾದವರ ಸಂಖ್ಯೆ 177ಕ್ಕೆ ಹೆಚ್ಚಳವಾಗಿದೆ. ಸೋಂಕು ಹೆಚ್ಚಳದಿಂದ ಸೋಂಕಿತರ ಆರೈಕೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಸಿಗೆ ಸಿದ್ಧಪಡಿಸಲು ಬಿಬಿಎಂಪಿ ಮುಂದಾಗಿದೆ. ಉಳಿದಂತೆ ದಕ್ಷಿಣ ಕನ್ನಡ 183 ಮಂದಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯು 1500 ಗಡಿದಾಟಿದೆ. ಸದ್ಯ 1534 ಸೋಂಕು ಪ್ರಕರಣಗಳಿದ್ದು, 650 ಮಂದಿ ಗುಣಮುಖರಾಗಿದ್ದು, 23 ಸೋಂಕಿತರು ಮೃತಪಟ್ಟಿದ್ದಾರೆ. ಒಂದೇ ದಿನ ಐಸಿಯುಗೆ 173 ಸೋಂಕಿತರು
ರಾಜ್ಯದ ವಿವಿಧೆಡೆ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಒಂದೇ ದಿನ 191 ಸೋಂಕಿತರು ತುರ್ತು ನಿಗಾ ಘಟಕ (ಐಸಿಯು)ಗೆ ಸ್ಥಳಾಂತರಗೊಂದಿದ್ದಾರೆ. ಮಂಗಳವಾರದ ಅಂತ್ಯಕ್ಕೆ 279 ಸೋಂಕಿತರು ಐಸಿಯುನಲ್ಲಿದ್ದರು. ಬುಧವಾರ 452ಕ್ಕೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿಯೇ 115 ಮಂದಿ ಸ್ಥಳಾಂತರಗೊಂಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 290, ಧಾರವಾಡದಲ್ಲಿ 21, ರಾಯಚೂರು 18, ಬಳ್ಳಾರಿ 14, ಕಲಬುರಗಿ 13, ಮೈಸೂರು, ಬೀದರ್ ತಲಾ 11, ಮಂಡ್ಯ 10 ಮಂದಿ ಐಸಿಯುನಲ್ಲಿದ್ದಾರೆ. ಬುಧವಾರ ಜಿಲ್ಲಾವಾರು ಸೋಂಕಿತರು:
ಬೆಂಗಳೂರು 1,148, ದಕ್ಷಿಣ ಕನ್ನಡ 183, ದಾವಣಗೆರೆ 89, ಕಲಬುರಗಿ 66, ಬೆಳಗಾವಿ, ಮೈಸೂರು ತಲಾ 59, ಬೆಂಗಳೂರು ಗ್ರಾಮಾಂತರ 37, ರಾಮನಗರ 34, ಚಿಕ್ಕಬಳ್ಳಾಪುರ 32, ಉಡುಪಿ, ಹಾವೇರಿ ತಲಾ 31, ಬೀದರ್ 29, ಬೆಳಗಾವಿ 27, ಹಾಸನ 26, ಬಾಗಲಕೋಟೆ, ತುಮಕೂರು ತಲಾ 24, ಚಿಕ್ಕಮಗಳೂರು 23, ಉಡುಪಿ 20, ಉತ್ತರ ಕನ್ನಡ 19, ದಾವಣಗೆರೆ 18, ರಾಯಚೂರು, ಶಿವಮೊಗ್ಗ ತಲಾ 17, ಕೋಲಾರ 16, ಯಾದಗಿರಿ, ಕೊಪ್ಪಳ ತಲಾ 11, ಗದಗ 5, ವಿಜಯಪುರ 4, ಚಿತ್ರದುರ್ಗದಲ್ಲಿ 2. ಒಟ್ಟು -2062 ಬುಧವಾರ ಸೋಂಕಿತರ ಸಾವು
ಬೆಂಗಳೂರು 24, ಧಾರವಾಡ 6, ಬಳ್ಳಾರಿ 4, ಚಿಕ್ಕಬಳ್ಳಾಪುರ, ರಾಯಚೂರು ತಲಾ 3, ತುಮಕೂರು, ಮೈಸೂರು, ಧಾರವಾಡ, ವಿಜಯಪುರ ತಲಾ 2, ಹಾಸನ, ಕಲಬುರಗಿ, ಬೀದರ್, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರಲ್ಲಿ ತಲಾ ಒಬ್ಬರು ಸೋಂಕಿನಿಂದ ಬಲಿಯಾಗಿದ್ದಾರೆ. ಒಟ್ಟು -54. ಇದನ್ನು ಓದಿ… ಉಡುಪಿ ಜಿಲ್ಲೆಯಲ್ಲಿ 31 ಜನರಿಗೆ ಸೋಂಕು ದೃಢ! 1421ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ
ಚಿಕ್ಕಬಳ್ಳಾಪುರ: ಒಂದೇ ದಿನ 32 ಹೊಸ ಪ್ರಕರಣ! ಜಿಲ್ಲೆಯಲ್ಲಿ 300ಕ್ಕೆ ಏರಿದ ಸೋಂಕಿತರ ಸಂಖ್ಯೆ