ಸಿಯೋಲ್: 2032ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ದಕ್ಷಿಣ ಕೊರಿಯಾ ಹಾಗೂ ಉತ್ತರ ಕೊರಿಯಾ ಜಂಟಿಯಾಗಿ ಹರಾಜಿನಲ್ಲಿ ಭಾಗವಹಿಸಲು ಮುಂದಾಗಿವೆ. ಉತ್ತರ ಕೊರಿಯದ ಅಧ್ಯಕ್ಷ ಮೂನ್ ಜೆಯಿ ಮತ್ತು ದಕ್ಷಿಣ ಕೊರಿಯದ ಸರ್ವಾಧಿಕಾರಿ ಕಿಮ್ ಜಂಗ್ ಉನ್ ಅವರ ನಡುವೆ ಮಾತುಕತೆ ನಡೆದಿದೆ.
“2032ರ ಸಮ್ಮರ್ ಒಲಿಂಪಿಕ್ಸ್‌ನ ಹರಾಜಿನಲ್ಲಿ ಜಂಟಿಯಾಗಿ ಭಾಗವಹಿಸಲು ನಿರ್ಧರಿಸಿದ್ದೇವೆ’ ಎಂದು ಉತ್ತರ ಕೊರಿಯದ ಅಧ್ಯಕ್ಷ ಮೂನ್ ತಿಳಿಸಿದ್ದಾರೆ.
“ಕಳೆದ ವಾರ ಸಿಯೋಲ್ ಮತ್ತು ಪಯೋಂಗ್ಯಾಂಗ್‌ನಲ್ಲಿ ಕೂಟ ಆಯೋಜಿಸುವ ಬಗ್ಗೆ ಪ್ರಸ್ತಾನೆ ನೀಡಲಾಗಿದೆ’ ಕಳೆದ ವಾರ ದಕ್ಷಿಣ ಕೊರಿಯದ ಕ್ರೀಡಾ ಸಚಿವ ಡು ಜೊಂಗ್ ಹ್ವಾನ್ ಹೇಳಿದ್ದರು.
ಸದ್ಯ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು (ಐಒ ಸಿ) 2032ರ ಕೂಟಕ್ಕೆ ಆಯೋಜಕರನ್ನು ನಿರ್ಧರಿಸುವ ಗೋಜಿಗೆ ಹೋಗಿಲ್ಲ. ಐಒಸಿ 2020ರ ಸಮ್ಮರ್ ಗೇಮ್ಸ್ ಟೋಕಿಯೊ, 2024ರಲ್ಲಿ ಪ್ಯಾರಿಸ್ ಹಾಗೂ 2028ರಲ್ಲಿ ಲಾಸ್ ವೇಗಾಸ್‌ಗೆ ಒಲಿಂಪಿಕ್ಸ್ ಆಯೋಜನೆಗೆ ಅವಕಾಶ ನೀಡಿದೆ.
ಇತ್ತೀಚಿನ ವರ್ಷಗಳಲ್ಲಿ ಕೊರಿಯಾ ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕೆಲವು ಅಂತಾರಾಷ್ಟ್ರೀಯ ಕೂಟಗಳಿಗೆ ದಕ್ಷಿಣ ಹಾಗೂ ಉತ್ತರ ಕೊರಿಯ ದೇಶಗಳು ಜತೆಯಾಗಿ ಪ್ರವೇಶಿಸಿವೆ. ಉತ್ತರ ಕೊರಿಯ ಕ್ರೀಡಾಪಟುಗಳನ್ನು, ಅಭಿಮಾನಿ ಗಳನ್ನು ಮತ್ತು ಉತ್ತಮ ದರ್ಜೆ ಅಧಿಕಾರಿಗಳನ್ನು ಫೆಬ್ರವರಿಯಲ್ಲಿ ದಕ್ಷಿಣ ಕೊರಿಯದಲ್ಲಿ ನಡೆದ ವಿಂಟರ್ ಗೇಮ್ಸ್‌ಗೆ ಕಳು ಹಿಸಿ ಅಚ್ಚರಿ ಮೂಡಿಸಿತ್ತು. ಎರಡು ದೇಶದ ಕ್ರೀಡಾಪಟುಗಳು ಜಂಟಿಯಾಗಿ ಕೂಟದ ಮೈದಾನಕ್ಕೆ ಆಗಮಿಸಿದ್ದರು. ವನಿತಾ ಹಾಕಿಯಲ್ಲಿ ಎರಡೂ ದೇಶಗಳ ಆಟಗಾರ್ತಿಯರನ್ನು ಹೊಂದಿದ್ದ ಕೊರಿಯಾ ತಂಡ ಸ್ಪರ್ಧಿಸಿತ್ತು.
2025ರ ಮೊದಲು ಸಮ್ಮರ್ ಒಲಿಂಪಿಕ್ ಆಯೋಜಕರನ್ನು ಆಯ್ಕೆ ಮಾಡಲಾಗುವುದಿಲ್ಲ. ಈ ಕೂಟದ ಆಯೋಜನೆಗೆ ಜರ್ಮನಿ, ಆಸ್ಟ್ರೇಲಿಯ ಈಗಾಗಲೇ ಒಲವು ತೋರಿಸಿವೆ.