Advertisement

Politics: 2024ರ ವಾರಾಣಸಿ ಲೋಕ ಸಮರದಲ್ಲಿ- ಮೋದಿ V/s ನಿತೀಶ್‌/ಪ್ರಿಯಾಂಕಾ/ಕೇಜ್ರಿ?

12:20 AM Dec 21, 2023 | Team Udayavani |

ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವು ದರ ಜತೆಗೆ ಪ್ರಧಾನಿ ಮೋದಿ ಅವರಿಗೆ ಅವರ ಸ್ವಕ್ಷೇತ್ರ ವಾರಾಣಸಿಯಲ್ಲೇ ಸೋಲು ಣಿಸಲು ವಿಪಕ್ಷಗಳ ಒಕ್ಕೂಟ ಐಎನ್‌ಡಿಐಎ ತಂತ್ರ ರೂಪಿಸಿದೆ. ಇದಕ್ಕಾಗಿ ಮೋದಿ ಎದುರು ಕಣಕ್ಕಿಳಿಸಲು ಬಿಹಾರ ಸಿಎಂ ನಿತೀಶ್‌ ಕುಮಾರ್‌, ಕಾಂಗ್ರೆಸ್‌ ಪ್ರಧಾನ ಕಾರ್ಯ ದರ್ಶಿ ಪ್ರಿಯಾಂಕಾ ವಾದ್ರಾ ಹಾಗೂ ದಿಲ್ಲಿ ಸಿಎಂ ಕೇಜ್ರಿವಾಲ್‌ ಹೆಸರನ್ನು ಪ್ರಸ್ತಾವಿಸಿವೆ ಎಂದು ಮೂಲಗಳು ತಿಳಿಸಿವೆ.

Advertisement

ನಿತೀಶ್‌ ಅವರೇ ಮೋದಿ ಎದುರು ಸ್ಪರ್ಧಿಸುವುದು ಉತ್ತಮ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಅದೇ ರೀತಿ ಖರ್ಗೆ ಅವರನ್ನು ಪಿಎಂ ಅಭ್ಯರ್ಥಿ ಮಾಡಬೇಕು ಎಂದಿದ್ದ ಪ.ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಅವರು ಮೋದಿ ಎದುರು ಪ್ರಿಯಾಂಕಾರನ್ನೇ ಕಣಕ್ಕಿಳಿ ಸುವುದು ಉತ್ತಮ ವೆಂದು ಸಲಹೆ ನೀಡಿದ್ದಾರೆ. ಇನ್ನೊಂದೆಡೆ ಈಗಾಗಲೇ ಮೋದಿ ಎದುರು ಸ್ಪರ್ಧಿ ಸಿದ್ದ ಕೇಜ್ರಿವಾಲ್‌ರನ್ನೇ ಮತ್ತೆ ಕಣಕ್ಕಿಳಿಸುವುದು ಸೂಕ್ತ ಎಂಬ ಅಭಿಪ್ರಾಯವೂ ವ್ಯಕ್ತವಾ ಗಿದ್ದು, ಒಕ್ಕೂಟ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next