Advertisement

2024 US Polls: ವಿವೇಕ್‌ ಅಧ್ಯಕ್ಷರಾದರೆ ಎಲಾನ್‌ ಮಸ್ಕ್ ಸಲಹೆಗಾರ!

07:59 PM Aug 28, 2023 | Team Udayavani |

ವಾಷಿಂಗ್ಟನ್‌: “2024ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸಿದರೆ, ಟೆಸ್ಲಾ ಸಂಸ್ಥೆಯ ಮುಖ್ಯಸ್ಥರಾದ ಎಲಾನ್‌ ಮಸ್ಕ್ ಅವರು ನನ್ನ ಆಡಳಿತ ಸಲಹೆಗಾರಬೇಕೆಂದು ಬಯಸುತ್ತೇನೆ’ ಹೀಗೆಂದು ರಿಪಬ್ಲಿಕನ್‌ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಯಾಗಲು ಬಯಸಿರುವ ವಿವೇಕ್‌ ರಾಮಸ್ವಾಮಿ ಹೇಳಿದ್ದಾರೆ. ಲೋವಾದ ಟೌನ್‌ಹಾಲ್‌ನಲ್ಲಿ ಮಾಧ್ಯಮಗಳೊಂದಿಗೆ ವಿವೇಕ್‌ ಸಂವಾದ ನಡೆಸಿದ್ದಾರೆ.

Advertisement

ಈ ವೇಳೆ ಅವರನ್ನು ದೇಶಕ್ಕೆ ಉತ್ತಮ ಆಡಳಿತ ನೀಡಬೇಕಾದರೆ ನಿಮ್ಮ ಸಲಹಾ ಮಂಡಳಿಯಲ್ಲಿ ಯಾರು ಇರಬೇಕೆಂದು ಬಯಸುತ್ತೀರಿ ಎಂದು ಪ್ರಶ್ನಿಸಲಾಗಿದೆ. ಉತ್ತರಿಸಿದ ವಿವೇಕ್‌, ಇತ್ತೀಚಿನ ದಿನಗಳಲ್ಲಿ ನಾನು ಎಲಾನ್‌ ಮಸ್ಕ್ ಅವರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡಿದ್ದೇನೆ, ಅವರೇ ಆಡಳಿತ ಸಲಹೆಗಾರರಾದರೆ ವಿಶೇಷ ಸಲಹೆಗಳು ಸಿಗುತ್ತವೆ ಎಂದಿದ್ದಾರೆ. ಇತ್ತೀಚೆಗಷ್ಟೆ ಮಸ್ಕ್ ಕೂಡ ವಿವೇಕ್‌ ಅವರನ್ನು ಭರವಸೆಯ ಅಭ್ಯರ್ಥಿ ಎಂದು ಶ್ಲಾಘಿಸಿದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next