Advertisement

2024 ಟಿ 20 ವಿಶ್ವಕಪ್:ಅಮೆರಿಕಾ, ಕೆರಿಬಿಯನ್‌ ಕ್ರಿಕೆಟ್ ಮಂಡಳಿಗಳಿಗಳ ಸಂಭ್ರಮ

12:25 PM Nov 17, 2021 | Team Udayavani |

2024 ರ ಟ್ವೆಂಟಿ 20 ವಿಶ್ವಕಪ್‌ ಸರಣಿಗಳನ್ನು ವೆಸ್ಟ್ ಇಂಡೀಸ್ ಮತ್ತು ಅಮೆರಿಕಾದಲ್ಲಿ ನಡೆಸಲು ಐಸಿಸಿ ಕೈಗೊಂಡಿರುವ ತೀರ್ಮಾನವನ್ನು ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಮತ್ತು ಯುಎಸ್ಎ ಕ್ರಿಕೆಟ್ ಮಂಗಳವಾರ (ನವೆಂಬರ್ 16) ಸಂಭ್ರಮಿಸಿವೆ.

Advertisement

ಜಂಟಿ ಬಿಡ್ ಅನ್ನು ಆಚರಿಸಲು ಒಟ್ಟಾಗಿ ಸೇರಿಕೊಂಡಿರುವ ಮಂಡಳಿಗಳಿಗಳು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನಿರ್ಧಾರವನ್ನು ಶ್ಲಾಘಿಸಿ, ಐತಿಹಾಸಿಕ ಘೋಷಣೆಯಿಂದ ಅಮೆರಿಕಾ ಕ್ರಿಕೆಟ್ ನಲ್ಲಿ ಭಾರಿ ಪರಿವರ್ತನೆಯಾಗಿದೆ ಎಂದಿವೆ.

ಜಂಟಿ ಬಿಡ್ ಕ್ರಿಕೆಟ್ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಕ್ರಿಕೆಟ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಭಾಗವಾಗಿದ್ದು, ಇದು ಯುಎಸ್ಎಯ ಸಾಮರ್ಥ್ಯವನ್ನು ತೆರೆಯಲು ಮತ್ತು ಕ್ರೀಡೆಯ ಬೆಳವಣಿಗೆಯನ್ನು ವೇಗವಾಗಿ ಗುರುತಿಸುವ ಗುರಿಯನ್ನು ಹೊಂದಿದೆ, ಯುವ ವೆಸ್ಟ್ ಇಂಡಿಯನ್ನರ ಮುಂದಿನ ಪೀಳಿಗೆಯನ್ನು ಪ್ರೇರೇಪಿಸಲು ಮತ್ತು ಕೆರಿಬಿಯನ್‌ನಲ್ಲಿ ಕ್ರಿಕೆಟ್ ಉತ್ಸಾಹವನ್ನು ಬೆಳಗಿಸಲು, ವಿಶ್ವ ಕ್ರಿಕೆಟ್‌ನ ಪ್ರಯೋಜನಕ್ಕಾಗಿ ಈ ಎರಡು ತಂಡಗಳನ್ನು ಸಂಯೋಜಿಸಲು ಸಹಕಾರಿಯಾಗಲಿವೆ ಎಂದು ಎರಡು ಮಂಡಳಿಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

2024ರ ಆವೃತ್ತಿಯು 20 ತಂಡಗಳನ್ನು ಒಳಗೊಂಡ ಮೊದಲ ಟಿ20 ವಿಶ್ವಕಪ್ ಎನಿಸಿಕೊಳ್ಳಲಿದೆ. ವರ್ಷದ ಆರಂಭದಲ್ಲಿ ಘೋಷಿಸಲಾದ ಐಸಿಸಿ ಜಾಗತಿಕ ಯೋಜನೆಗಳ ವಿಸ್ತರಣೆಯಲ್ಲಿ, 20 ರಾಷ್ಟ್ರಗಳು 55 ಪಂದ್ಯಗಳ ಪಂದ್ಯಾವಳಿಯಲ್ಲಿ ನಾಲ್ಕು ಗುಂಪುಗಳಲ್ಲಿ ಸ್ಪರ್ಧಿಸಲಿದ್ದು, ಜೂನ್ 2024 ರಿಂದ ಪ್ರಾರಂಭವಾಗುವ ಪಂದ್ಯಾವಳಿಗಳನ್ನು 25 ದಿನಗಳ ಕಾಲ ಆಡಲಾಗುತ್ತದೆ.

ವೆಸ್ಟ್ ಇಂಡೀಸ್ 55 ಪಂದ್ಯಗಳಲ್ಲಿ ಸರಿಸುಮಾರು ಮೂರನೇ ಎರಡರಷ್ಟು ಅಂದರೆ 35 ಪಂದ್ಯಗಳ ಆತಿಥ್ಯ ವಹಿಸಲಿದ್ದು ಉಳಿದ 20ಪಂದ್ಯಗಳು ಯುಎಸ್‌ ನಲ್ಲಿ ನಡೆಯಲಿದೆ ಎಂದು ಎರಡು ಮಂಡಳಿಗಳು ಘೋಷಿಸಿವೆ. ವೆಸ್ಟ್ ಇಂಡೀಸ್‌ನ 13 ಮೈದಾನಗಳಲ್ಲಿ ಪಂದ್ಯಗಳನ್ನು ನಡೆಸಲಾಗುವುದು ಮತ್ತು ಅಮೇರಿಕನ್ ಪಂದ್ಯಗಳನ್ನು ಐಸಿಸಿ ಅನುಮೋದಿತ 5 ಸ್ಥಳಗಳಲ್ಲಿ ಆಡಲಾಗುತ್ತದೆ ಎಂದು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next