Advertisement
ಮೈಸೂರು ಹೊರಭಾಗದಲ್ಲಿರುವ ಬೆಳವಾಡಿ ಯಲ್ಲಿನ ಚಾಮುಂಡೇಶರ್ವರಿ ನಗರದಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, 2023ರ ಚುನಾವಣೆ ನನ್ನ ಕೊನೆಯ ಹೋರಾಟವಾಗಿದ್ದು, ಸ್ವತಂತ್ರವಾಗಿ ನಮಗೆ ಅಧಿಕಾರಕೊಟ್ಟರೆ ಪಂಚರತ್ನ ಕಾರ್ಯಕ್ರಮಗಳಾದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 1 ರಿಂದ 12ನೇ ತರಗತಿವರೆಗೆ ಸುಸಜ್ಜಿತ ಆಂಗ್ಲ ಮಾಧ್ಯಮ ಶಾಲೆ, 30 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ, ರೈತರಿಗಾಗಿ ಕೋಲ್ಡ್ ಸ್ಟೋರೇಜ್, ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಮತ್ತು ವಸತಿಸೌಲಭ್ಯ ಮಾಡಿಕೊಡುತ್ತೇನೆ. ನಾನು ಪುಕ್ಕಟ್ಟೆ ಅಕ್ಕಿ ಕೊಡುವುದಿಲ್ಲ.
Related Articles
Advertisement
ಜಾಹೀರಾತುಗಳಲ್ಲಿ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ನೂರು ರೂ. ದಾಟಿದೆ. ಜನ ತಲೆ ಕೆಡಸಿಕೊಳ್ಳುತ್ತಿಲ್ಲ. ದಯವಿಟ್ಟು ನನ್ನ ಮೇಲೆ ನಂಬಿಕೆ ಇಟ್ಟು 5 ವರ್ಷ ಸ್ವತಂತ್ರ ಆಡಳಿತ ನೀಡಿ. ನಿಮ್ಮ ಋಣ ತೀರಿಸುತ್ತೇನೆ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬೆಳವಾಡಿ ಗ್ರಾಪಂ ಮಾಜಿ ಅಧ್ಯಕ್ಷ ಶಿವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಶಾಸಕರಾದ ಕೆ. ಮಹದೇವ, ಅಶ್ವಿನ್‌ಕುಮಾರ್, ವಿಧಾನ ಪರಿಷತ್ ಸದಸ್ಯ ರಮೇಶ್‌ಗೌಡ, ಜಿಪಂ ಮಾಜಿ ಅಧ್ಯಕ್ಷೆ ಭಾಗ್ಯಶಿವಮೂರ್ತಿ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಎಚ್.ಕೆ. ರಾಮು, ವಿವೇಕಾನಂದ, ಉಮಾಶಂಕರ್, ಮಾಜಿ ಮೇಯರ್ ರವಿಕುಮಾರ್, ಲಕ್ಷ್ಮೀಶಿವಣ್ಣ, ಜಿಪಂ ಮಾಜಿ ಸದಸ್ಯ ರಾದ ಬೀರಿಹುಂಡಿ ಬಸವಣ್ಣ, ಮಾದೇಗೌಡ, ಎಂ.ಟಿ. ರವಿಕುಮಾರ್, ಎಂ.ಪಿ. ನಾಗರಾಜ್, ಕಿತ್ತೂರು ಮಂಜು ನಾಥ್, ಮೆಲ್ಲಹಳ್ಳಿ ಮಹಾದೇವಸ್ವಾಮಿ ಇತರರಿದ್ದರು.
ಸಿಎಂ ಆಗಿದ್ದಾಗ ನನಗೆ ಹಿಂಸೆ ಆಯಿತು: ಎಚ್ಟಿಕೆ ಇದುವರೆಗೂ ಬಿಜೆಪಿ, ಕಾಂಗ್ರೆಸ್ ಆಡಳಿತವನ್ನು ನೋಡಿದ್ದೀರಿ. ನರೇಂದ್ರ ಮೋದಿಯವರ ಆಡ ಳಿತವನ್ನು ಅನುಭವಿಸಿದ್ದೀರಿ. ಯಾರು ಪ್ರಾಮಾ ಣಿಕವಾಗಿ ನಿಮ್ಮ ಕಷ್ಟ-ಸುಖಗಳಿಗೆ ಸ್ಪಂದಿಸು ತ್ತಾರೋ ಅಂತಹವರಿಗೆ ಮತ ನೀಡಿ. ಸ್ಥಳೀಯ ರಾಜಕೀಯದ ಬಗ್ಗೆ ಮಾತನಾಡಲು ಹೋಗುವು ದಿಲ್ಲ. ನಮಗೆ ಸ್ವತಂತ್ರವಾಗಿ ಅಧಿಕಾರ ಸಿಗಲಿಲ್ಲ. ನನ್ನ ದುರದೃಷ್ಟ ಮುಖ್ಯಮಂತ್ರಿ ಯಾದಾಗ ನನಗೆ ಹಿಂಸೆಯೇ ಆಗಿತ್ತು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಷಾದಿಸಿದರು.
ಬಿಎಸ್‌ವೈ ಕಡಿವಾಣಕ್ಕೆ ಐಟಿ ದಾಳಿ-
ಮೈಸೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತರ ಮನೆ ಮೇಲೆ ಐಟಿ ದಾಳಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ಚಾಮುಂಡೇಶ್ವರಿ ದೇವಿಯ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡಿದ್ದರಿಂದಲೇ ಐಟಿ ರೇಡ್ ಆಗಿದೆ. ಸಿದ್ದರಾಮಯ್ಯ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಯಡಿಯೂರಪ್ಪ ಭೇಟಿ ಸಹ ಅದರ ಭಾಗವಾಗಿದೆ. ಈ ಭೇಟಿ ಬಗ್ಗೆ ಕೇಂದ್ರಕ್ಕೂ ಮಾಹಿತಿ ಸಿಕ್ಕಿದೆ.
ಅದಕ್ಕಾಗಿ ಯಡಿಯೂರಪ್ಪ ಅವರನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಐಟಿ ದಾಳಿ ನಡೆದಿದೆ. ಈ ಐಟಿ ದಾಳಿ ಹಿಂದೆ ಸ್ಪಷ್ಟವಾಗಿ ರಾಜಕೀಯ ಉದ್ದೇಶ ಇದೆ. ಇದರ ಬಗ್ಗೆ ಅನುಮಾನ ಇಲ್ಲ ಎಂದು ದೂರಿದರು. ಸಿದ್ದರಾಮಯ್ಯಗೆ ಪಾಠ ಕಲಿಸುವ ಸಲುವಾಗಿಯೇ ಸಿಂಧಗಿ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಹಾಕಿದ್ದೇವೆ. ಸಿಂಧಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಲೆಕ್ಕಕ್ಕೆ ಇಲ್ಲ. ಅಲ್ಲಿ ಕಾಂಗ್ರೆಸ್ ಯಾವಾಗಲೂ 3ನೇ ಸ್ಥಾನದಲ್ಲಿದೆ.
ಅವರೇನಿದ್ದರೂ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಪೈಪೋಟಿ. ನಾವು ಯೋಚಿಸಿ ಅಭ್ಯರ್ಥಿ ಹಾಕಿದ್ದೇವೆ ಎಂದು ಅವರು, ಸಿದ್ದರಾಮಯ್ಯ ಯಾವ ದೊಣ್ಣೆನಾಯಕ ಅಂತಾ ಅವರು ಹೇಳಿದ ಅಭ್ಯರ್ಥಿ ಹಾಕಬೇಕು. 2 ಕ್ಷೇತ್ರದಲ್ಲಿ ಜೆಡಿಎಸ್ ಗಂಭೀರವಾಗಿ ಸ್ಪರ್ಧೆ ಮಾಡಲಿದೆ ಎಂದರು. ಕಾಂಗ್ರೆಸ್‌ನ ಮಹಾನ್ ನಾಯಕರು ಇತ್ತೀಚೆಗೆ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಅಭ್ಯರ್ಥಿ ಕೊರತೆ ಇಲ್ಲ.
ಕಾಂಗ್ರೆಸ್‌ನವರೆ ನಮ್ಮ ಅಭ್ಯರ್ಥಿಯನ್ನ ಹೈಜಾಕ್ ಮಾಡಿ ಟಿಕೆಟ್ ಕೊಟ್ಟಿದ್ದಾರೆ. ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂಬುದು ನಮ್ಮ ನಿರ್ಧಾರ ಆಗಿತ್ತು. ಈ ಹಿಂದೆಯೂ ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದೇವೆ ಎಂದರು. ಮಂಡ್ಯ, ರಾಮನಗರ, ಮೈಸೂರಿನಲ್ಲಿ ಅಲ್ಪ ಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿ. ಉಪ ಚುನಾ ವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳ ಕಣಕ್ಕಿಳಿಸಿರು ವುದರ ಹಿಂದೆ ರಾಜಕೀಯ ದುರುದ್ದೇಶ ವಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಗೂಟದ ಕಾರಿಗಾಗಿ 23 ಜನ ನಿಮ್ಮ ಪಕ್ಷದ ಸಚಿವರನ್ನು ಬೀದಿಗೆ ತಂದಿರಿ.
ಯಡಿಯೂರಪ್ಪ ಸರ್ಕಾರ ಬರಲು ನಿಮ್ಮ ಪಾತ್ರ ಎಷ್ಟಿದೆ ಎಂಬುದು ನನಗೆ ಗೊತ್ತಿದೆ. ಅಧಿಕಾರಕ್ಕಾಗಿ ನೀವು ಎಷ್ಟೆಟ್ಟು ಕುತಂತ್ರ ಮಾಡುತ್ತೀರಾ ಅನ್ನೋದು ನನಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು. ನರಸಿಂಹರಾಜ ಕ್ಷೇತ್ರದಲ್ಲಿ ಈಗಾಗಲೇ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟಿ ದ್ದೇವೆ. ನನಗೆ ಸರಿ ಅನ್ನಿಸುವ ಅಭ್ಯರ್ಥಿಗೆ ನಾನು ಟಿಕೆಟ್ ಕೊಡುತ್ತೇನೆ. ಯಾವುದೋ ದೊಣ್ಣೆನಾಯಕನ ಅಪ್ಪಣೆ ನನಗೆ ಬೇಕಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು.