ಹೊಸದಿಲ್ಲಿ : ಭಾರತದ ಆನುಭವಿ ಕ್ರಿಕೆಟ್ ಆಟಗಾರ್ತಿ, ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ನಿವೃತ್ತಿಯ ಮುನ್ಸೂಚನೆ ನೀಡಿದ್ದಾರೆ. ನ್ಯೂಜಿಲ್ಯಾಂಡ್‌ನಲ್ಲಿ ನಡೆಯುವ 2022ರ ಏಕದಿನ ವಿಶ್ವಕಪ್ ಟೂರ್ನಿ ಬಳಿಕ ನೇಪಥ್ಯಕ್ಕೆ ಸರಿಯುವ ಯೋಜನೆಯಲ್ಲಿದ್ದೇನೆ ಎಂದಿದ್ದಾರೆ.
“21 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದೇನೆ. ನೇಪಥ್ಯಕ್ಕೆ ಸರಿಯುವ ಸಮಯ ಬಂದಿದೆ. 2022ರ ಏಕದಿನ ವಿಶ್ವಕಪ್ ನನ್ನ ಮುಂದಿರುವ ಅಂತಿಮ ನಿಲ್ದಾಣ’ ಎಂಬುದಾಗಿ 38 ವರ್ಷದ ಮಿಥಾಲಿ ಹೇಳಿದರು.
ಬೋರಿಯ ಮಜುಂದಾರ್ ಮತ್ತು ಗೌತಮ್ ಭಟ್ಟಾಚಾರ್ಯ ಬರೆದ “1971: ದಿ ಬಿಗಿನಿಂಗ್ ಆಫ್ ಇಂಡಿಯಾಸ್ ಕ್ರಿಕೆಟಿಂಗ್ ಗ್ರೇಟ್‌ನೆಸ್’ ಪುಸ್ತಕ ಬಿಡುಗಡೆಯ ವರ್ಚುವಲ್ ಸಮಾರಂಭದ ವೇಳೆ ಮಿಥಾಲಿ ತಮ್ಮ ಭವಿಷ್ಯದ ನಿರ್ಧಾರದ ಕುರಿತು ಹೇಳಿಕೊಂಡರು.
ಇದನ್ನೂ ಓದಿ :ಅಮೆರಿಕನ್ ಎಕ್ಸ್‌ಪ್ರೆಸ್ ಮತ್ತು ಡೈನರ್ಸ್ ಕ್ಲಬ್ ಕಾರ್ಡ್‌ಗಳ ಮಾರಾಟಕ್ಕೆ RBI ಕಡಿವಾಣ
ವನಿತಾ ಏಕದಿನ ಕ್ರಿಕೆಟ್‌ನಲ್ಲಿ 7 ಸಾವಿರ ರನ್ ಪೂರೈಸಿದ ಏಕೈಕ ಆಟಗಾರ್ತಿ ಎಂಬುದು ಮಿಥಾಲಿ ರಾಜ್ ಹೆಗ್ಗಳಿಕೆಯಾಗಿದೆ.