ಸ್ಕೋಡಾ ಸಂಸ್ಥೆಯು ತನ್ನ ಕೋಡಿಯಾಕ್ ಎಸ್‌ಯುವಿಯನ್ನು ಭಾರತದಲ್ಲಿ ಮರು ಬಿಡುಗಡೆ ಮಾಡಿದೆ.
ಬಿಎಸ್4 ಮಾಡೆಲ್ ಹೊಂದಿದ್ದ ಕಾರನ್ನು 2020ರಲ್ಲಿ ಬಿಎಸ್6 ಎಮಿಷನ್ ನಿಯಮ ಜಾರಿಗೆ ಬಂದ ತಕ್ಷಣ ಹಿಂಪಡೆಯಲಾಗಿತ್ತು.
ಇದೀಗ ನಿಯಮದ ಅನುಸಾರ ಸಂಸ್ಥೆ 7 ಸೀಟರ್ ಪೆಟ್ರೋಲ್ ಗಾಡಿಯನ್ನು ಬಿಡುಗಡೆ ಮಾಡಿದೆ. ಹೊಸ ಕೋಡಿಯಾಕ್ ಸ್ಟೈಲ್, ಸ್ಪೋರ್ಟ್ಲೈನ್, ಲೌರಿನ್ ಮತ್ತು ಕ್ಲೆಮೆಂಟ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ಲಭ್ಯ.
ಹಳೆ ಕೋಡಿಯಾಕ್‌ನಲ್ಲಿದ್ದ ಕ್ರಿಸ್ಟಲೈನ್ ಎಲ್‌ಇಡಿ ಹೆಡ್‌ಲೈಟ್, ಫಾಗ್ ಲ್ಯಾಂಪ್ ಸೇರಿ ಹಲವು ಸೌಲಭ್ಯವನ್ನು ಈ ಕಾರಿನಲ್ಲಿ ಬದಲಿಸಲಾಗಿದೆ.
ಇದನ್ನೂ ಓದಿ:ನನ್ನಷ್ಟು ಯೋಗ್ಯತೆ ಬಿಜೆಪಿಯಲ್ಲಿ ಯಾರಿಗಿದೆ ? ನಾನೊಬ್ಬ ಸಾಮಾನ್ಯ ಕಾರ್ಯಕರ್ತ; ಯತ್ನಾಳ್
ಒಳಾಂಗಣ ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಸುರಕ್ಷತೆಗಾಗಿ 9 ಏರ್‌ಬ್ಯಾಗ್ ಅಳವಡಿಸಲಾಗಿದೆ. ಈ ಎಸ್‌ಯುವಿ ಬೆಲೆ 34.99 ಲಕ್ಷ ರೂ.(ಎಕ್ಸ್ ಶೋರೂಂ)ನಿಂದ ಆರಂಭ.