Advertisement

2020ರ ವರ್ಷಾಚರಣೆ 2021ರಲ್ಲಿ ಕಾಣಲಿಲ್ಲ

12:28 PM Jan 01, 2021 | Team Udayavani |

ಬೆಂಗಳೂರು: ಕೋವಿಡ್ ಮಹಾಮಾರಿಯಿಂದ 2021ರ ಹೊಸ ವರ್ಷಾಚರಣೆ ಸಂಭ್ರಮಕ್ಕೆ ಸಂಪೂರ್ಣ ಬ್ರೇಕ್‌ ಬಿದ್ದಿದೆ. ಸಾರ್ವಜನಿಕರು ಮನೆ, ಹೋಟೆಲ್‌ಗಳಿಗಷ್ಟೇ ಸೀಮಿತವಾಗಿದ್ದಾರೆ.

Advertisement

ಸಿಬಿಡಿ ವ್ಯಾಪ್ತಿಗೆ ಬರುವ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ಸ್ಟ್ರೀಟ್‌, ಸೆಂಟ್‌ ಮಾರ್ಕ್ಸ್ ರಸ್ತೆ, ರೆಸ್ಟ್‌ಹೌಸ್‌ ರಸ್ತೆ ಮತ್ತು ರೆಸಿಡೆನ್ಸಿರಸ್ತೆಗಳಲ್ಲಿ ರಾತ್ರಿಎಂಟು ಗಂಟೆಯಿಂದಲೇ ವಾಹನ ಸಂಚಾರಸಂಪೂರ್ಣ ಬಂದ್‌ ಮಾಡಲಾಗಿತ್ತು. ಈ ಭಾಗದ ಹೋಟೆಲ್‌ಗಳಲ್ಲಿ ಮೊದಲೇ ಟಿಕೆಟ್‌ ಕಾಯ್ದಿರಿಸಿದ್ದ ಮಂದಿಗೆ ಮಾತ್ರ ವಾಹನಗಳನ್ನು ಪಾರ್ಕಿಂಗ್‌ಮಾಡಿ ನಡೆದುಕೊಂಡು ಹೋಗಲು ಅವಕಾಶ ನೀಡಲಾಗಿತ್ತು. ಇನ್ನೂ ಇಂದಿರಾನಗರ, ಕೋರಮಂಗಲ ಸೇರಿ ನಗರದ ಎಲ್ಲ ಕ್ಲಬ್‌, ಹೋಟೆಲ್‌ಗಳಲ್ಲಿಯೂ ಇದೇ ಪರಿಸ್ಥಿತಿ ಇತ್ತು. ಮುಂಗಡ ಪಾಸ್‌ ಪಡೆದು ಹೋಗುವವರು ನೋಂದಣಿಪುಸ್ತಕದಲ್ಲಿ ವಿಳಾಸ, ಮೊಬೈಲ್‌ ನಂಬರ್‌, ಸಹಿ ಹಾಕಿ ತೆರಳುತ್ತಿದ್ದದ್ದು ಕಂಡು ಬಂತು.

ಸಂಚಾರ ದಟ್ಟಣೆ : ನಗರದಲ್ಲಿ ನಿಷೇಧಾಜ್ಞೆ ಜತೆಗೆ ಸಂಚಾರ ಮಾರ್ಗ ಬದಲಾವಣೆ ಹಿನ್ನೆಲೆ ನಗರದ ಕೆಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿರ್ಮಾಣವಾಗಿತ್ತು. ಕಬ್ಬನ್‌ ರಸ್ತೆ, ಡಿಕ್ಕನ್‌ ರಸ್ತೆ, ಟ್ರಿನಿಟಿ ವೃತ್ತ ಸೇರಿ ಕೆಲ ರಸ್ತೆಗಳಲ್ಲಿಭಾರೀ ಸಂಚಾರ ದಟ್ಟಣೆ ಉಂಟಾಗಿದ್ದು, ಗಂಟೆಗೂ ಅಧಿಕ ಕಾಲ ವಾಹನ ಸವಾರರು ಟ್ರಾಫಿಕ್‌ನಲ್ಲೇ ನಿಂತು ಹೈರಾಣಾದರು.

ನಿರಂತರ ಗಸ್ತು ತಿರುಗಿದರು… :

ನಗರದ ಸಂಚಾರ ಸೇರಿ ಎಲ್ಲಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 15000 ಅಧಿಕಾರಿ- ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ಇದರೊಂದಿಗೆ ಹಿರಿಯ ಪೊಲೀಸ್‌ ಅಧಿಕಾರಿಗಳು ಸೇರಿ ಹೊಯ್ಸಳ, ಗಸ್ತು ಪೊಲೀಸರು ಎಲ್ಲೆಡೆ ನಿರಂತರವಾಗಿ ಗಸ್ತು ತಿರುಗುತ್ತಿದ್ದು, ಹೋಟೆಲ್‌ನಿಂದ ಗ್ರಾಹಕರು ಹೊರಬಾರದಂತೆ ನೋಡಿಕೊಳ್ಳುವಂತೆ ಮಾಲಿಕರಿಗೆ ಸೂಚಿಸಿದ್ದರು. ಹೀಗಾಗಿ ಯಾರೂ ಹೊರಬಾರದೆ ಹೋಟೆಲ್‌ ಆವರಣದಲ್ಲೇ ಹೊಸವರ್ಷಾಚರಣೆ ಆಚರಿಸಿಕೊಂಡು ಮನೆಗೆ ತೆರಳಿದರು. ಈ ಮಧ್ಯೆ ತಡರಾತ್ರಿ ಕೆಲವೆಡೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡಲು ಮುಂದಾದ ಚಾಲಕರನ್ನು ವಶಕ್ಕೆ ಪಡೆದು ಕಾನೂನು ಕ್ರಮಕೈಗೊಳ್ಳಲಾಯಿತು.

Advertisement

ವಾಹನ ತಪಾಸಣೆ :

ರಾತ್ರಿ 10 ಗಂಟೆಯಿಂದಲೇ ನೈಸ್‌ ರಸ್ತೆ ಸೇರಿ ನಗರದ ಎಲ್ಲೆಡೆ ನಿಯೋಜಿಸಲಾಗಿರುವ ಚೆಕ್‌ ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ನಡೆಸಲಾಯಿತು. 191 ಕಡೆ ನಾಕಾಬಂದಿ ಹಾಕಲಾಗಿದ್ದು, 60 ಸೆಕ್ಟರ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಜತೆಗೆ ಮಹಿಳೆಯರ ರಕ್ಷಣೆಗೆ ಆದ್ಯತೆ ನೀಡಿರುವ ಪೊಲೀಸರು ಪ್ರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮಹಿಳಾಸಹಾಯವಾಣಿ ಕೇಂದ್ರ ತೆರೆಯಲಾಗಿತ್ತು. ಅಲ್ಲದೆ, ನಗರದ 45 ಮೇಲ್ಸೇತುವೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು.

ರಂಗು ಪಡೆದಿತ್ತು 2020 :  ಕಳೆದ ಹೊಸ ವರ್ಷಾಚರಣೆ(2020) ಸಂದರ್ಭದಲ್ಲಿ ರಂಗುರಂಗಿನ ದೀಪಗಳು,ಜನಜಂಗುಳಿಯೊಂದಿಗೆ ಬೆಂಗಳೂರಿನ ರಸ್ತೆಗಳುಕಂಗೊಳಿಸುತ್ತಿದ್ದವು. ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ,ಚರ್ಚ್‌ಸ್ಟ್ರೀಟ್‌, ಕೋರಮಂಗಲ, ಇಂದಿರಾನಗರ ಸೇರಿ ಬೆಂಗಳೂರಿನ ಕೆಲ ರಸ್ತೆಗಳು ಪ್ರತಿ ವರ್ಷ ವಿವಿಧ ಬಣ್ಣದ ದೀಪಗಳಿಂದ ರಂಗುಪಡೆದಿದ್ದವು. ಜತೆಗೆ ಸಾವಿರಾರು ಮಂದಿ ರಸ್ತೆ ಮಧ್ಯೆ ನಿಂತು ಹೊಸವರ್ಷವನ್ನು ಭವ್ಯವಾಗಿ ಸ್ವಾಗತಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next