Advertisement

2021ರ ಎಪ್ರಿಲ್‌-ಮೇ ತಿಂಗಳಲ್ಲಿ ಮುಂದಿನ ಐಪಿಎಲ್‌: ಗಂಗೂಲಿ

11:16 PM Nov 07, 2020 | sudhir |

ಹೊಸದಿಲ್ಲಿ: ಕೊರೊನಾದಿಂದ ವಿಳಂಬವಾಗಿ ಮೊದಲ್ಗೊಂಡ 13ನೇ ಐಪಿಎಲ್‌ ಪಂದ್ಯಾವಳಿ ಈಗ ಮುಕ್ತಾಯದ ಹಂತದಲ್ಲಿದೆ. ಹಾಗಾದರೆ ಮುಂದಿನ ಐಪಿಎಲ್‌ ಯಾವಾಗ ನಡೆಯುತ್ತದೆ, 4-5 ತಿಂಗಳಲ್ಲೇ 14ನೇ ಐಪಿಎಲ್‌ ಶುರುವಾಗಲಿದೆಯೇ ಎಂಬುದೆಲ್ಲ ಅಭಿಮಾನಿಗಳ ಕುತೂಹಲ.

Advertisement

ಇದಕ್ಕೆ ಸಂಬಂಧಿಸಿದಂತೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, 2021ರ ಐಪಿಎಲ್‌ ಎಪ್ರಿಲ್‌-ಮೇ ತಿಂಗಳಲ್ಲಿ ಭಾರತದ ಆತಿಥ್ಯದಲ್ಲೇ ನಡೆಯಲಿದೆ ಎಂದಿದ್ದಾರೆ. ಅಕಸ್ಮಾತ್‌ ಭಾರತದಲ್ಲಿ ಇದನ್ನು ನಡೆಸಲು ಸಾಧ್ಯವಾಗದೇ ಹೋದರೆ ಯುಎಇಯನ್ನು ಏಕೈಕ ಬದಲಿ ತಾಣವಾಗಿ ಇರಿಸಿಕೊಳ್ಳಲಾಗುವುದು ಎಂಬ ಸೂಚನೆ ನೀಡಿದ್ದಾರೆ.

ಮುಂದಿನ ಒಂದೆರಡು ವರ್ಷಗಳಲ್ಲಿ ವನಿತಾ ಐಪಿಎಲ್‌ ಪಂದ್ಯಾವಳಿಯನ್ನೂ ಆಯೋಜಿಸಲಾಗುವುದು ಎಂದು ಗಂಗೂಲಿ ಇದೇ ಸಂದರ್ಭದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next