Advertisement

2021ರ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಡ ಅನುಮಾನ?

12:29 PM May 08, 2020 | mahesh |

ಮೆಲ್ಬರ್ನ್: ಕೋವಿಡ್‌-19 ಈ ವರ್ಷದ ಎಲ್ಲ ಕ್ರೀಡಾಕೂಟಗಳನ್ನೂ ಆಪೋಶನ ತೆಗೆದುಕೊಂಡಿದೆ. ಟೋಕಿಯೊ ಒಲಿಂಪಿಕ್ಸ್‌, ಐಪಿಎಲ್‌, ಟಿ20 ವಿಶ್ವಕಪ್‌… ಎಲ್ಲದರ ಆಯೋಜನೆಗೂ ದೊಡ್ಡ ಹೊಡೆತ ಬಿದ್ದಿದೆ. 2020ರಲ್ಲಿ ವಿಶ್ವ ಮಟ್ಟದ ಯಾವುದೇ ಪಂದ್ಯಾವಳಿ ನಡೆಯುವ ಸಾಧ್ಯತೆಯಂತೂ ಸದ್ಯಕ್ಕೆ ದೂರ.

Advertisement

ಆದರೆ ಆಸ್ಟ್ರೇಲಿಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಕೋವಿಡ್ ಆರ್ಭಟ ನಿಲ್ಲದೇ ಹೋದರೆ 2021ರ ವರ್ಷಾರಂಭದ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯನ್ನೂ ರದ್ದುಗೊಳಿಸಬೇಕಾಗುತ್ತದೆ ಎಂದಿದೆ. ಈ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಕೂಟ ಜನವರಿ 18ರಿಂದ 31ರ ತನಕ ಮೆಲ್ಬರ್ನ್ನಲ್ಲಿ ನಡೆಯಬೇಕಿದೆ. ಅಂದರೆ, ಇದಕ್ಕಿನ್ನೂ 8 ತಿಂಗಳಿದೆ. ಆದರೆ “ಟೆನಿಸ್‌ ಆಸ್ಟ್ರೇಲಿಯ’ ಬಹಳ ಮುಂದಾಲೋಚನೆ ಮಾಡಿದೆ.

“ನಾವು ಎಲ್ಲ ದಿಕ್ಕುಗಳಿಂದಲೂ ಯೋಚಿಸಿ ನಿರ್ಧಾರಕ್ಕೆ ಬರಬೇಕಾಗುತ್ತದೆ. ಯಾವುದೂ ನಮ್ಮ ನಿಯಂತ್ರಣದಲ್ಲಿಲ್ಲ. ಸರಕಾರದ ಮಾರ್ಗಸೂಚಿ ಪ್ರಕಾರ ನಡೆಯಬೇಕಾಗುತ್ತದೆ. ಈ ಕೊರೊನಾ ಪ್ರಭಾವ ಎಷ್ಟು ಕಾಲ ಇದ್ದೀತೆಂದು ಹೇಳಲಾಗದು. ಆಗ ಆಸ್ಟ್ರೇಲಿಯನ್‌ ಓಪನ್‌ ಬಗ್ಗೆಯೂ ಕಠಿನ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾಗಬಹುದು’ ಎಂದು ಟೆನಿಸ್‌ ಆಸ್ಟ್ರೇಲಿಯದ ವಕ್ತಾರರೊಬ್ಬರು ಹೇಳಿದ್ದಾರೆ.

ಅಂದಹಾಗೆ ಈ ವರ್ಷ ನಡೆದದ್ದು ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಮಾತ್ರ. ಫ್ರೆಂಚ್‌ ಓಪನ್‌ ಪಂದ್ಯಾವಳಿ ಸೆಪ್ಟಂಬರ್‌ ತನಕ ಮುಂದೂಡಲ್ಪಟ್ಟಿದೆ. ವಿಂಬಲ್ಡನ್‌ ಟೂರ್ನಿ ದ್ವಿತೀಯ ವಿಶ್ವಯುದ್ಧದ ಬಳಿಕ ಮೊದಲ ಸಲ ರದ್ದುಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next