Advertisement
ಈ ನಡುವೆ ಆಂಧ್ರಪ್ರದೇಶದ ಶ್ರೀಕಾಕುಳಂ, ವಿಶಾಖ ಪಟ್ಟಣಂ, ವಿಜಯನಗರಂ ಜಿಲ್ಲೆಗಳು, ತೆಲಂಗಾಣ ಹಾಗೂ ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಐಎಂಡಿ ತಜ್ಞರು ಹೇಳಿದ್ದಾರೆ. ಇವುಗಳಲ್ಲಿ ಶ್ರೀಕಾಕುಳಂ, ವಿಶಾಖಪಟ್ಟಣಂ, ವಿಜಯ ನಗರಂ ಜಿಲ್ಲೆಗಳಲ್ಲಿ ಡಿ. 3 ಮತ್ತು 4ರ ಅವಧಿಯಲ್ಲಿ 64.5 ಮಿ.ಮೀ.ನಿಂದ 115.5 ಮಿ.ಮೀ.ನಷ್ಟು ಮಳೆ ಯಾಗುವ ಸಾಧ್ಯತೆಯಿದ್ದು, ಈ ಪ್ರಾಂತ್ಯಗಳಿಗೆ ಎಲ್ಲೋ ಅಲರ್ಟ್ ನೀಡಲಾಗಿದೆ.ಇದೇ ಅವಧಿಯಲ್ಲಿ, ಒಡಿಶಾದ ಪುರಿ, ಗಜಪತಿ, ಗಂಜಾಮ್, ಕುರ್ದಾ, ಕೇಂದ್ರಪಾರಾ, ಭದ್ರಕ್, ಬಾಲಾಸೋರ್, ಕಟಕ್ ಹಾಗೂ ನಯಾಗಢ್ ಜಿಲ್ಲೆಗಳಲ್ಲಿ ಡಿ. 3 ಮತ್ತು 4ರಂದು 115.4ರಿಂದ 204.4 ಮಿ.ಮೀ.ನಷ್ಟು ಮಳೆ ಬೀಳಲಿರುವ ಸಾಧ್ಯತೆಯಿದ್ದು, ಈ ಭಾಗಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
Related Articles
ಗಂಟೆಗೆ 90ರಿಂದ 100 ಕಿ.ಮೀ. ವೇಗ: ಡಿ. 3ರಂದು ಏಳುವ ಚಂಡಮಾರುತವು, ಡಿ. 4ರಂದು ಆಂಧ್ರ, ತೆಲಂಗಾಣ, ಒಡಿಶಾದ ಪೂರ್ವ ಭಾಗಗಳಿಗೆ ಅಪ್ಪಳಿಸಲಿದೆ. ವೇಗವಾಗಿ ಬೀಸುವ ಬಿರುಗಾಳಿ ಸಹಿತ ಮಳೆಯು ಗಂಟೆಗೆ 90ರಿಂದ 100 ಕಿ.ಮೀ. ವೇಗದಲ್ಲಿ ಸಾಗಲಿದೆ ಎಂದು ಹೇಳಲಾಗಿದೆ.
Advertisement
ಇದನ್ನೂ ಓದಿ:ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟು
ಸುರಕ್ಷತ ಕ್ರಮಗಳನ್ನು ಕೈಗೊಳ್ಳಿ: ಮೋದಿ ಸೂಚನೆಚಂಡಮಾರುತ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಗುರುವಾರ ಹೊಸದಿಲ್ಲಿ ಯಲ್ಲಿ ನಡೆದಿದ್ದು, ಎಲ್ಲ ರೀತಿಯ ಮುನ್ನೆಚ್ಚರಿ ಕೆಗಳನ್ನು ಕೈಗೊಳ್ಳಬೇಕೆಂದು ಮೋದಿಯವರು ಎಲ್ಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಲಾವೃತವಾಗುವ ಜಾಗ ಗಳನ್ನು ಮೊದಲೇ ಗುರುತಿಸಿ, ಅಲ್ಲಿನ ಜನ ರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿ ಸಬೇಕು ಹಾಗೂ ಅವರಿಗೆ ಮೂಲ ಸೌಕರ್ಯ, ಆಹಾರ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅವರು ಹೇಳಿದ್ದಾರೆ. ಭರವಸೆ: ಚಂಡಮಾರುತವನ್ನು ಸಮರ್ಥ ವಾಗಿ ಎದುರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಎಲ್ಲ ರೀತಿಯ ಬೆಂಬಲವನ್ನೂ ನೀಡಲಿದೆ ಎಂದು ಮೋದಿ ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ರಾಜ್ಯಗಳಿಗೆ ಇದೇ ವೇಳೆ ಭರವಸೆ ನೀಡಿದ್ದಾರೆ.