Advertisement
2020ರ ಏ. 1ರಿಂದ ಎನ್‌ಪಿಆರ್ ನೋಂದಣಿ ಪ್ರಕ್ರಿಯೆಯು ಆರಂಭಗೊಳ್ಳಲಿದ್ದು, ಸೆ. 30ರಂದು ಮುಕ್ತಾಯಗೊಳ್ಳಲಿದೆ. ಭಾರತದ ಪ್ರತಿ ಮಹಾನಗರ, ನಗರ, ಪಟ್ಟಣ, ಹಳ್ಳಿ ಹಾಗೂ ಹೋಬಳಿಗಳ ಮಟ್ಟದಲ್ಲಿರುವ ಎಲ್ಲಾ ನಾಗರಿಕರ ಮಾಹಿತಿಗಳು ಒಂದೇ ನೋಂದಣಿಯಲ್ಲಿ ಇರಬೇಕೆಂಬ ಆಶಯದಿಂದ ಈ ದೇಶವ್ಯಾಪಿ ಎನ್‌ಪಿಆರ್‌ಗೆ ಚಾಲನೆ ನೀಡಲಾಗುತ್ತದೆ. ಎಲ್ಲಾ ನಾಗರಿಕರ ಮಾಹಿತಿಗಳು ಅವರ ಜನಸಂಖ್ಯಾ ಮಾಹಿತಿಯಷ್ಟೇ ಆಗಿರದೆ, ಅವರ ಬಯೋಮೆಟ್ರಿಕ್ ಮಾಹಿತಿಗಳನ್ನೂ ಒಳಗೊಂಡಿರುತ್ತದೆ.
ಇನ್ನು, 2003ರ ಪೌರತ್ವ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ವಿತರಣೆ) ನಿಯಮಗಳ ಅನುಸಾರವೇ ಎನ್‌ಪಿಆರ್ ಅನ್ನು ದೇಶವ್ಯಾಪಿ ವಿಸ್ತರಿಸಲಾಗುತ್ತದೆ. ನೋಂದಣಿಗೊಂಡ ಎಲ್ಲಾ ನಾಗರಿಕರ ಮಾಹಿತಿಗಳು, ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿಯಲ್ಲಿ (ಎನ್‌ಆರ್‌ಐಸಿ) ಸಂಗ್ರಹಿಸಲಾಗುತ್ತದೆ ಎಂದು ಹೇಳಲಾಗಿದೆ.