Advertisement
ಇವುಗಳಲ್ಲಿ ಇದೀಗ ನಾವು ಏಷ್ಯಾ ವಿಭಾಗದಲ್ಲಿ ಒಟ್ಟು 13 ಚಿತ್ರಗಳು ನಾಮಿನೇಟ್ ಆಗಿದ್ದು ಅವುಗಳ ಪಟ್ಟಿಯನ್ನು ಇಲ್ಲಿ ನೋಡೊಣ. ಈ ವಿಭಾಗದಲ್ಲಿ ಮೂರು ಭಾರತೀಯ ಚಿತ್ರಗಳಿವೆ, ಅವುಗಳೆಂದರೆ ಸುಮಿತ್ರಾ ಬಾವೆ ನಿರ್ದೇಶನದ ಮರಾಠಿ ಚಿತ್ರ ‘ದಿತಿ’, ಲಿಜೋ ಜೋಸ್ ಪೆಳ್ಳಿಶ್ಯೇರಿ ನಿರ್ದೇಶನದ ತಮಿಳು ಚಿತ್ರ ‘ಜಲ್ಲಿಕಟ್ಟು’ ಹಾಗೂ ವಿನಯ್ ಭಾರಧ್ವಜ್ ನಿರ್ದೇಶನದ ಕನ್ನಡ ಚಿತ್ರ ‘ಮುಂದಿನ ನಿಲ್ದಾಣ’.
ಎಂ.ಡಿ. ಆಶ್ರಫುಲ್ ಆಲಂ ನಿರ್ದೇಶಿಸಿರುವ ಬಾಂಗ್ಲಾ ಚಿತ್ರ ‘ಅಮ್ರಾ ಏಕ್ತಾ ಸಿನೆಮಾ ಬನಾಬೋ’, ಶಾಹೇದ್ ಅಹ್ಮದ್ಲೌ ನಿರ್ದೇಶನದ ಇರಾನ್ ಚಿತ್ರ ‘ಸಿನೇಮಾ ಡಾಂಕಿ’, ಹಮೇದ್ ತೆಹ್ರಾನಿ ನಿರ್ದೇಶನದ ಇರಾನಿ ಚಿತ್ರ ‘ಡಯಾಪಸನ್’, ನೌಪೋಲ್ ಥಾಮ್ರೋನ್ ಗ್ರಟ್ಟನರಿಟ್ ನಿರ್ದೇಶನದ ಥಾಯ್ ಚಿತ್ರ ‘ಹೌ ಟು ಟಿಂಗ್ ಟಿಂಗ್ ಯಾಂಗ್ ರೈ ಮೈ ಹೈ ಲಿಯೂ ತೆರ್ (ಓಲ್ಡ್ ಹ್ಯಾಪ್ಪೀ ಇಯರ್ಸ್), ರೊನಾಲ್ಡೋ ಸಿ. ಕಾರ್ಬಲ್ಲೋ ನಿರ್ದೇಶನದಲ್ಲಿ ಮೂಡಿಬಂದಿರುವ ಫಿಲಿಫೈನ್ಸ್ ಚಿತ್ರ ಜೀಸೂಸ, ಜುನ್ ರೋಬ್ಲೆಸ್ ಲಾನಾ ನಿರ್ದೇಶನದ ಫಿಲಿಫೈನ್ಸ್ ಚಿತ್ರ ‘ಕಲೀಲ್ 15’, ಮಕಾರ್ತೂರ್ ಅಲೆಝಾಂಡ್ರೆ ನಿರ್ದೇಶನದ ಫಿಲಿಫೈನ್ಸ್ ಚಿತ್ರ ‘ಕಪುಟೋಲ್’ (ಫ್ರ್ಯಾಗ್ನೆನ್ಸಿ), ರುಸ್ತೆಂ ಅಬ್ದ್ರಶೆವ್ ನಿರ್ದೇಶನದ ‘ಖಝಾಕ್ ಖನಾಟೆ’ (ದಿ ಗೋಲ್ಡನ್ ಥ್ರೋನ್), ರುಬಾಯಿಯಾತ್ ಹುಸೈನ್ ನಿರ್ದೇಶನದ ಬಾಂಗ್ಲಾ ಚಿತ್ರ ‘ಮೇಡ್ ಇನ್ ಬಾಂಗ್ಲಾದೇಶ್’, ಶ್ರೀಲಂಕಾದ ಇಂಡಿಕಾ ಫೆರ್ಡಿನಂಡೋ ನಿರ್ದೇಶನದ ‘ವೇದಿ ನೋವಾದಿನ ಲಮಾಯ್’ (ಬುಲೆಟ್ ಪ್ರೂಫ್ ಚಿಲ್ಡ್ರನ್)