Advertisement

ಟಗರು ಖದರು –ಯೋಗ್ಯನಾದ ಅಯೋಗ್ಯ

06:00 AM Dec 07, 2018 | |

ರೌಂಡ್‌; ಚಿತ್ರನೋಟ- ಕನ್ನಡ ಚಿತ್ರರಂಗಕ್ಕೆ ಇದು ದಾಖಲೆ ವರ್ಷ!!

Advertisement

ಅಂತೂ ಇಂತೂ ನಿರೀಕ್ಷೆ ಸುಳ್ಳಾಗಲಿಲ್ಲ. ಅಂದುಕೊಂಡಂತೆಯೇ ಎಲ್ಲವೂ ನಡೆದಿದೆ. ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ 190 ಪ್ಲಸ್‌ ಚಿತ್ರಗಳು ಬಿಡುಗಡೆಯಾಗುವ ಮೂಲಕ ಹೊಸ ದಾಖಲೆಯಾಗಿತ್ತು. ಈ ವರ್ಷದ ಡಿಸೆಂಬರ್‌ 7ರವರೆಗೆ ಒಂದು ಕೊಡವ ಭಾಷೆಯ ಒಂದು ಚಿತ್ರ ಸೇರಿದಂತೆ ಬಿಡುಗಡೆಯಾಗಿರುವ ಕನ್ನಡ ಚಿತ್ರಗಳ ಲೆಕ್ಕ ಹಾಕಿದರೆ, 224 ಚಿತ್ರಗಳು ಅಧಿಕೃತವಾಗಿ ಕಾಣಸಿಗುತ್ತವೆ. ಈ ವರ್ಷ ಪೂರ್ಣಗೊಳ್ಳಲು ಇನ್ನೂ ಮೂರು ವಾರಗಳು ಬಾಕಿ ಉಳಿದಿವೆ. ಅಲ್ಲಿಗೆ, ಕಡಿಮೆ ಅಂದರೂ 10 ಚಿತ್ರಗಳು ಬಿಡುಗೆಯಾಗಬಹುದೇನೋ? ಅವುಗಳನ್ನೂ ಲೆಕ್ಕಕ್ಕೆ ಸೇರಿಸಿಕೊಂಡರೆ, ಈ ವರ್ಷ ಚಿತ್ರಗಳ ಬಿಡುಗಡೆಯ ಸಂಖ್ಯೆ ಮತ್ತೂಂದು ಹೊಸ ದಾಖಲೆ ಎಂಬುದಂತೂ ನಿಜ. ಇನ್ನು, ಇದಲ್ಲದೆ, ಇದುವರೆಗೆ ತುಳು ಭಾಷೆಯ 9 ಚಿತ್ರಗಳೂ ತೆರೆಗೆ ಬಂದಿವೆ ಎಂಬುದು ಗಮನಕ್ಕಿರಲಿ. ಕನ್ನಡ ಚಿತ್ರಗಳ ಬಿಡುಗಡೆ ಸಾಲಿಗೆ ತುಳು ಭಾಷೆಯ ಚಿತ್ರಗಳನ್ನೂ ವರ್ಷದ ಅಂತ್ಯದಲ್ಲಿ ಲೆಕ್ಕಿಸಿದರೆ 245 ರ ಸಂಖ್ಯೆಯ ಗಡಿ ತಲುಪಿದರೆ ಅಚ್ಚರಿ ಇಲ್ಲ. ಅಷ್ಟರ ಮಟ್ಟಿಗೆ 2018, ಕನ್ನಡ ಚಿತ್ರರಂಗದ ಪಾಲಿಗೆ ದಾಖಲೆಯ ವರ್ಷವಷ್ಟೇ ಅಲ್ಲ, ಮಹತ್ವದ ವರ್ಷವೂ ಹೌದು. ಇಲ್ಲಿರುವ ಬಿಡುಗಡೆ ಚಿತ್ರಗಳ ಲೆಕ್ಕದಲ್ಲಿ ಅಚೀಚೆ ಒಂದೆರೆಡು ಅಂಕೆ ಹೆಚ್ಚಿರಬಹುದು, ಕಮ್ಮಿ ಇರಬಹುದು. ಆದರೆ, ಅಧಿಕೃತ ದಾಖಲೆ ಪ್ರಕಾರ ಮೇಲ್ಕಾಣಿಸಿರುವ ಸಂಖ್ಯೆ ಪಕ್ಕಾ.

ಇನ್ನು, ಈ ವರ್ಷ ಹೇಗಿತ್ತು ಎಂದು ವಿಶ್ಲೇಷಿಸುವುದು ಅಷ್ಟು ಸುಲಭವಂತೂ ಅಲ್ಲ. ಅದಕ್ಕೆ ಒಂದು ಸಂಪೂರ್ಣ ಸಂಚಿಕೆಯೂ ಸಾಲದು. ಅಂದಹಾಗೆ, ಆ ವಿಶ್ಲೇಷಣೆಯ ಮೊದಲ ಹಂತವಾಗಿ ಇಂದಿನವರೆಗೆ ಬಿಡುಗಡೆಯಾದ ಕನ್ನಡ, ಕೊಡವ, ತುಳು ಭಾಷೆಯ ಪಟ್ಟಿ ಇಲ್ಲಿದೆ. ಅದರಲ್ಲೂ ಯಶಸ್ವಿ ಚಿತ್ರ, ಏಳಲಿಲ್ಲ ಬೀಳಲಿಲ್ಲ, ನಿರೀಕ್ಷೆಗೆ ನಿಲುಕದ ಚಿತ್ರಗಳು, ಪ್ರಯೋಗಾತ್ಮಕ, ಕಲಾತ್ಮಕ ಚಿತ್ರಗಳು, ಮಕ್ಕಳ ಸಿನಿಮಾ, ಹಾರರ್‌, ರಿಮೇಕ್‌ ಹಾಗೂ ಭಕ್ತಿ ಪ್ರಧಾನ ಚಿತ್ರಗಳು… ಹೀಗೆ ಒಂದೊಂದು ಪಟ್ಟಿ ವಿಂಗಡಿಸಿ, ಅಲ್ಲಿ ಚಿತ್ರಗಳ ಹೆಸರನ್ನು ನಮೂದಿಸಲಾಗಿದೆ. ಇದು ಸದ್ಯಕ್ಕೆ ಸಿಕ್ಕಿರುವ ಮಾಹಿತಿಯಷ್ಟೇ. ಇದೇ ಪರಿಪೂರ್ಣವೂ ಅಲ್ಲ. ಇನ್ನೂ ಅದೆಷ್ಟು ಚಿತ್ರಗಳು ಬಿಡುಗಡೆಯಾಗುತ್ತವೆಯೋ ಕಾದು ನೋಡಬೇಕಿದೆ. ಅದೆಷ್ಟೋ ಚಿತ್ರಗಳು ಈಗಾಗಲೇ ಸದ್ದಿಲ್ಲದೆ, ಸುದ್ದಿಯಾಗದೆ ಬಿಡುಗಡೆಯಾಗಿರುವ ಸಾಧ್ಯತೆಯೂ ಇದೆ. ಕಣ್ತಪ್ಪಿ ಬಿಡುಗಡೆಗೊಂಡ ಚಿತ್ರಗಳನ್ನಿಲ್ಲಿ ಲೆಕ್ಕ ಹಾಕಿಲ್ಲ. ಅಂಥವು ಬಿಡುಗಡೆ ಪಟ್ಟಿಯಲ್ಲೂ ದಾಖಲಾಗಿಲ್ಲ. ಅಂಥದ್ದೊಂದು “ಚಿತ್ರನೋಟ’ದ ಸಣ್ಣ ಪ್ರಯತ್ನ ಇಲ್ಲಿ ಮಾಡಲಾಗಿದೆ.

ವಿಶೇಷವಾಗಿ ಇಲ್ಲೊಂದು ಅಂಶ ಗಮನಿಸಬೇಕು. ಈ ಬಾರಿ ಸ್ಟಾರ್ಗಳಿಗಿಂತ ಹೊಸಬರ ಅಬ್ಬರ ಜೋರಾಗಿತ್ತು. ಹೊಸಬರೇ ಹೆಚ್ಚು ಚಿತ್ರಗಳನ್ನು ತಯಾರು ಮಾಡುವ ಮೂಲಕ ತಾವೇ ಮುಂದೆ ಎಂದು ಸಾಬೀತುಪಡಿಸಿದ್ದಾರೆ. ಆದರೆ, ಗೆಲುವಿನಲ್ಲಿ, ಹಣ ಗಳಿಸುವಲ್ಲಿ ಸ್ಟಾರ್ಗಳ ಜೊತೆಗೆ ನಾವೂ ಇದ್ದೇವೆ ಅನ್ನುವುದನ್ನೂ ಬೆರಳೆಣಿಕೆ ಮಂದಿಯಷ್ಟೇ ಕಾಣಸಿಗುತ್ತಾರೆ. ವಿಶೇಷವಾಗಿ ಈ ವರ್ಷ ಹೊಸಬರದ್ದೇ ಕಾರುಬಾರು. ಸ್ಟಾರ್ಗಳದ್ದು ಸ್ವಲ್ಪ ಏರು-ಪೇರು. ಇನ್ನು, ಇಲ್ಲಿ ಕೊಟ್ಟಿರುವ “ಏಳಲ್ಲಿಲ್ಲ ಬೀಳಲಿಲ್ಲ’ ಪಟ್ಟಿಯಲ್ಲಿ ಚಿತ್ರಗಳು ಹಣ ಮಾಡಿರಬಹುದು, ಹೆಸರು ಮಾಡದೇ ಇರಬಹುದು, ಇನ್ನು ಹೆಸರು ಮಾಡಿದ್ದರೂ, ಹಣ ಮಾಡಲು ವಿಫ‌ಲವಾದಹಾಗೂ ತಕ್ಕಮಟ್ಟಿಗೆ ನಿರ್ಮಾಪಕರಿಗೆ ನೆಮ್ಮದಿ ತಂದ ಸಿನಿಮಾಗಳನ್ನು ಹೆಸರಿಸಲಾಗಿದೆ. ಅದನ್ನು ಹೆಚ್ಚಾ ಅಲ್ಲ, ಕಮ್ಮಿಯೂ ಅಲ್ಲ ಅಂತ ಪರಿಗಣಿಸಬೇಕಿದೆ. ಅದೇನೆ ಇರಲಿ, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಮೊಟ್ಟದಲ್ಲಿ ಬಿಡುಗಡೆ ಆಗಿರುವುದು ವಿಶೇಷವಂತೂ ಹೌದು. ಆ ಕುರಿತು ವರ್ಷವಿಡೀ ಚಿತ್ರರಂಗವನ್ನು ರಂಗಾಗಿಸಿದ, ರಂಗೇರಿಸದ ಚಿತ್ರಗಳ ವಿವರ ಇಲ್ಲಿದೆ. ಈ ವರ್ಷ ಸ್ಟಾರ್‌ಗಳಲ್ಲಿ ಹಿಟ್‌ ಸಿನಿಮಾ ಕೊಟ್ಟವರೆಂದರೆ ಶಿವರಾಜಕುಮಾರ್‌ ಎಂದು ಹೇಳಬಹುದು. ಜೊತೆಗೆ ಅನೇಕ ಸ್ಟಾರ್‌ಗಳ ಸಿನಿಮಾಗಳು ಈ ವರ್ಷ ಬಿಡುಗಡೆಯಾಗಿಲ್ಲ ಕೂಡ. ಜೊತೆಗೆ ಮಕ್ಕಳ ಚಿತ್ರ ಎಂದು ಬಿಂಬಿತವಾದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ದೊಡ್ಡ ಮಟ್ಟದಲ್ಲಿ ಹಿಟ್‌ ಆದರೆ, “ರ್‍ಯಾಂಬೋ-2′, “ಗುಳುr-‘, “ಅಯೋಗ್ಯ’ ಚಿತ್ರಗಳು ಕೂಡಾ ಈ ವರ್ಷದ ಹಿಟ್‌ಲಿಸ್ಟ್‌ನಲ್ಲಿ ಸಿಗುತ್ತವೆ. 

ಯಶಸ್ವಿ ಚಿತ್ರ
 ಟಗರು, ಸರ್ಕಾರಿ ಶಾಲೆ, ಗುಳುr, ಅಯೋಗ್ಯ, ರ್‍ಯಾಂಬೋ 2

Advertisement

ಏಳಲಿಲ್ಲ, ಬೀಳಲಿಲ್ಲ
– ಸಂಹಾರ, ಜಾನಿ ಜಾನಿ ಯೆಸ್‌ ಪಪ್ಪಾ, ಅಮ್ಮ ಐ ಲವ್‌ ಯೂ, ಹಂಬಲ್‌ ಪೊಲಿಟಿಷಿಯನ್‌ ನೋಗ್‌ರಾಜ್‌, ಕನಕ,  ರಾಜು ಕನ್ನಡ ಮೀಡಿಯಂ, ದಿ ವಿಲನ್‌, ವಿಕ್ಟರಿ- 2, ಕೃಷ್ಣ ತುಳಸಿ, ಕನ್ನಡಕ್ಕಾಗಿ ಒಂದನ್ನು ಒತ್ತಿ, ಟೆರರಿಸ್ಟ್‌, ಒಂದಲ್ಲಾ ಎರಡಲ್ಲಾ, ಆ ಕರಾಳ ರಾತ್ರಿ, ನಡುವೆ ಅಂತರವಿರಲಿ, ತಾರಕಾಸುರ

ನಿರೀಕ್ಷೆಗೆ ನಿಲುಕದ ಚಿತ್ರಗಳು
– ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಚೂರಿಕಟ್ಟೆ, ಪ್ರೇಮಬರಹ, ರಾಜರಥ, ಬಕಾಸುರ, ಲೈಫ್ ಜೊತೆಗೊಂದ್‌ ಸೆಲ್ಫಿ, ತಾಯಿಗೆ ತಕ್ಕ ಮಗ

ಪ್ರಯೋಗಾತ್ಮಕ, ಕಲಾತ್ಮಕ ಚಿತ್ರಗಳು
– ಜವ, ಇದೀಗ ಬಂದ ಸುದ್ದಿ, ಹೆಬ್ಬೆಟ್‌ ರಾಮಕ್ಕ, ಕಾನೂರಾಯಣ, ಕಿಚ್ಚು, ರಾಮಧಾನ್ಯ, ಹಸಿರು ರಿಬ್ಬನ್‌, ಕಥೆಯೊಂದು ಶುರುವಾಗಿದೆ, ಸಾವಿತ್ರಿಭಾಯಿಪುಲೆ,  ಅಮ್ಮಚ್ಚಿ ಎಂಬ ನೆನಪು

ತುಳು ಚಿತ್ರಗಳು
– ಭಲೇ ಪುದರ್‌ ದೀಕಾ ಈ ಪ್ರೀತಿಗ್‌, ಅಪ್ಪೆ ಟೀಚರ್‌, ತೊಟ್ಟಿಲ್‌, ಪೆಟ್‌ ಕಮ್ಮಿ, ಅಮ್ಮೆರ್‌ ಪೊಲೀಸಾ, ಪಡ್ಡಾಯಿ, ಪತ್ತೀಸ್‌ ಗ್ಯಾಂಗ್‌, ಮೈ ನೇಮ್‌ ಇಸ್‌ ಅಣ್ಣಪ್ಪ, ಕರ್ಣೆ, ಉಮಿಲ್‌

ಮಕ್ಕಳ ಸಿನಿಮಾ
– ಬೈಸಿಕಲ್‌ ಬಾಯ್ಸ, 1098, ನವೀಲಕಿನ್ನರಿ, ಸಮ್ಮರ್‌ ಹಾಲಿಡೇಸ್‌, ರಾಮರಾಜ್ಯ, ಸಾಹಸಿ ಮಕ್ಕಳು, ಜೀರ್ಜಿಂಬೆ

ರೀಮೇಕ್‌ / ಬೇರೆ ಭಾಷೆಯಿಂದ ಸ್ಫೂರ್ತಿಗೊಂಡ ಚಿತ್ರಗಳು
– ಕುಮಾರಿ 21 ಎಫ್, ಹೊಟ್ಟೆಗಾಗಿ, ಅಂಬಿ ನಿಂಗೆ ವಯಸ್ಸಾಯೊ, ಜಗತ್‌ ಕಿಲಾಡಿ, 8 ಎಂಎಂ, ಬೃಹಸ್ಪತಿ, ಸಂಹಾರ, ಹುಚ್ಚ 2, ಧ್ವಜ, ಅಮ್ಮ ಐ ಲವ್‌ ಯೂ,  ಲೌಡ್‌ ಸ್ಪೀಕರ್‌, ನಡುವೆ ಅಂತರವಿರಲಿ, ಕಿಸ್ಮತ್‌

ಭಕ್ತಿಪ್ರಧಾನ
– ಕ್ರಾಂತಿಯೋಗಿ ಮಹಾದೇವರು, ವಿಶ್ವರಾಧ್ಯರು, ಹಾಸನಾಂಬೆ

ಹಾರರ್‌ ಸಿನಿಮಾಗಳು
ಮಂಜರಿ, 3000, ಅತೃಪ್ತ, ಜಯಮಹಲ್‌, ನಾಗವಲ್ಲಿ ವರ್ಸಸ್‌ ಆಪ್ತಮಿತ್ರರು, ಕೆಲವು ದಿನಗಳ ನಂತರ, ಚಿಟ್ಟೆ, ಟ್ರಂಕ್‌, ಅಮವಾಸೆ, ಅರ್ಕಾವತ್‌, ಮನೆ ನಂಬರ್‌ 67, ವರ್ಣಮಯ, ಅಭಿಸಾರಿಕೆ, ಸದ್ದು

ಡಿಸೆಂಬರ್‌ ನಿರೀಕ್ಷೆಯಲ್ಲಿ
ವರ್ಷಾರಂಭದಲ್ಲಿ ಒಂದಷ್ಟು ಚಿತ್ರಗಳು ನಿರೀಕ್ಷೆ ಹುಟ್ಟಿಸಿದ್ದರೆ ಈಗ ವರ್ಷದಲ್ಲಿ ಕೊನೆಯಲ್ಲಿ ಅಂದರೆ ಡಿಸೆಂಬರ್‌ನಲ್ಲಿ ಚಿತ್ರವೊಂದು ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಅದು ಯಶ್‌ ನಾಯಕರಾಗಿರುವ “ಕೆಜಿಎಫ್’. ಡಿಸೆಂಬರ್‌ 21ಕ್ಕೆ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಈ ವರ್ಷದ ಬೇರೆಲ್ಲಾ ಸಿನಿಮಾಗಳ ದಾಖಲೆಗಳನ್ನು “ಕೆಜಿಎಫ್’ ಮುರಿದು ಮುನ್ನುಗ್ಗುತ್ತಾ ಎಂಬ ಕುತೂಹಲ ಚಿತ್ರಪ್ರೇಮಿಗಳಲ್ಲಿದೆ. ಇದರ ಜೊತೆಗೆ ಇನ್ನೂ ಮೂರು ವಾರಗಳಲ್ಲಿ ಬಿಡುಗಡೆಯಾಗಲಿರುವ ಬೇರೆ ಸಿನಿಮಾಗಳು ಏನೇನೋ ಕಮಾಲ್‌ ಮಾಡುತ್ತವೋ ಕಾದು ನೋಡಬೇಕು.

ಸಿನಿಮಾ ಪಟ್ಟಿ
ಜನವರಿ-13
ನಮ್ಮವರು, ಬೃಹಸ್ಪತಿ, ಪುನಾರಂಭ, ಪಾನಿಪುರಿ, ಹಂಬಲ್‌ ಪೊಲಿಟಿಷಿಯನ್‌ ನೋಗ್‌ರಾಜ್‌, ಮರಿ ಟೈಗರ್‌, 3 ಗಂಟೆ 30 ನಿಮಿಷ, 30 ಸೆಕೆಂಡ್‌, ಬಾಕಿಮನೆ (ಕೊಡವ), ನೀನಿಲ್ಲದ ಮಳೆ, ರಾಜು ಕನ್ನಡ ಮೀಡಿಯಂ, ಚೂರಿಕಟ್ಟೆ, ಐ ಡ್ಯಾಶ್‌ ಯು, ಕನಕ

ಫೆಬ್ರವರಿ- 25
ಆ ಒಂದು ದಿನ, ದೇವರಂಥ ಮನುಷ್ಯ, ಜಂತರ್‌ ಮಂತರ್‌, ಜವ, ರಾಜಸಿಂಹ, ಸಂಜೀವ, ಮಂಜರಿ, ಅಮಲು, ನಾನು ಲವ್ವರ್‌ ಆಫ್ ಜಾನು, ಪ್ರೇಮ ಬರಹ, ರಘುವೀರ, ರಿಯಲ್‌ ಟು ರಿಯಲ್‌, ಸಂಹಾರ, ಗೂಗಲ್‌, ಜನ ಗಣ ಮನ, ಕಂಟ್ರಿ ಬಾಯ್ಸ, ಮಿ.ಎಲ್‌ಎಲ್‌ಬಿ, ಶಂಖನಾದ, ತುಂತುರು, ದ್ವೆ„ತ, ಗಂಡ ಊರಿಗ್‌ ಹೋದಾಗ, ರಂಗ್‌ಬಿರಂಗಿ, ರಂಕಲ್‌ ರಾಟೆ, ಟಗರು, ಮಳೆಗಾಲ.

ಮಾರ್ಚ್‌-19
3000, ಚಿನ್ನದ ಗೊಂಬೆ, ಪ್ರೀತಿಯ ರಾಯಭಾರಿ, ಸರ್ಕಾರ್‌, ಇದಂ ಪ್ರೇಮಂ ಜೀವನಂ, ಅನ್ನಂ ಪರಬ್ರಹ್ಮ ಸ್ವರೂಪಂ, ದಂಡುಪಾಳ್ಯ, ನನ್ನಿಷ್ಟ, ಮುತ್ತಿನ ಪಲ್ಲಕ್ಕಿ, ಓ ಪ್ರೇಮವೆ, ಅತೃಪ್ತ, ಮುಖ್ಯಮಂತ್ರಿ ಕಳೆದೋದ್ನಪ್ಪೋ, ರಾಜರಥ, ಯೋಗಿ ದುನಿಯಾ, ಗುಳುr, ಹೀಗೊಂದು ದಿನ, ಇದೀಗ ಬಂದ ಸುದ್ದಿ, ಜಾನಿ ಜಾನಿ ಯೆಸ್‌ ಪಪ್ಪಾ, ಸಾಕ್ಷಿ.

ಏಪ್ರಿಲ್‌-22
ಅಂದಗಾರ, ಹುಚ್ಚ-2, ಜಯಮಹಲ್‌, ಮದುವೆ ದಿಬ್ಬಣ, ನಂಜುಂಡಿ ಕಲ್ಯಾಣ, ಯುಎನ್‌2, ವರ್ತಮಾನ, ದಳಪತಿ, ನಾಗವಲ್ಲಿ ವರ್ಸಸ್‌ ಆಪ್ತಮಿತ್ರರು, ಸೀಜರ್‌, ವಿಶ್ವಾರಾಧ್ಯರು, 6 ಟು 6, ಎಟಿಎಂ, ಕೃಷ್ಣ ತುಳಸಿ, ರುಕ್ಕು, ಸಾಗುವ ದಾರಿಯಲ್ಲಿ, ಅಮ್ಮ ನಿನಗಾಗಿ, ಬಕಾಸುರ, ಧ್ವಜ, ಡೇಸ್‌ ಆಫ್ ಬೋರಾಪುರ, ಹೆಬ್ಬೆಟ್‌ ರಾಮಕ್ಕ, ಕಾನೂರಾಯಣ.

ಮೇ- 12
ಭೂತಯ್ಯನ ಮೊಮ್ಮಗ, ಕಿಚ್ಚು, ಹಲೋ ಮಾಮ, ಎಡಕಲ್ಲು ಗುಡ್ಡದ ಮೇಲೆ, ಪಾರ್ಥ ಸಾರಥಿ, ರ್‍ಯಾಂಬೋ-2, ಸದ್ದು, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಓಳ್‌ ಮುನ್ಸಾಮಿ, ರಾಜ ಲವ್ಸ್‌ ರಾಧೆ, ರಾಮಧಾನ್ಯ, ಯಾರ್‌ ಯಾರ್‌ ಗೋರಿಮೇಲೆ.

ಜೂನ್‌-24
ಸೆಕೆಂಡ್‌ ಹಾಫ್, ಆದರ್ಶ,  ಬೈಸಿಕಲ್‌ ಬಾಯ್ಸ, ಪರಿಧಿ, ಜೆ, ನವಿಲ ಕಿನ್ನರಿ, ವೆನಿಲ್ಲಾ, ಶತಾಯ ಗತಾಯ, ಶಿವು-ಪಾರು, ಅಮ್ಮ ಐ ಲವ್‌ ಯು, ಕಟ್ಟು ಕಥೆ, ಮೇಘ ಅಲಿಯಾಸ್‌ ಮ್ಯಾಗಿ, ಅರಣ್ಯ ಕಾಂಡ, ಕೆಲವು ದಿನಗಳ ನಂತರ, ಮಸ್ತ್ ಕಲಂದರ್‌, ಮಿಸ್ಟರ್‌ ಚೀಟರ್‌ ರಾಮಚಾರಿ, ಸೂರ್ಯ ಇವ ವೃಕ್ಷಮಿತ್ರ, 121, ಚಿಟ್ಟೆ, ಹೈಪರ್‌, ಕುಲ್ಫಿ, 1098, ವಿ -2, ನ್ಯಾಯ ಹರಾಜಿಗಿದೆ.

ಜುಲೈ  (23)
6ನೇ ಮೈಲಿ, ಅಸತೋಮ ಸದ್ಗಮಯ, ದಾಂಗಡಿ, ಕನ್ನಡಕ್ಕಾಗಿ ಒಂದನ್ನು ಒತ್ತಿ, ಕ್ರಾಂತಿಯೋಗಿ ಮಹಾದೇವರು, ಕುಚಿಕು ಕುಚಿಕು, ಪರಸಂಗ, ವಜ್ರ, ಆ ಕರಾಳ ರಾತ್ರಿ, ಅಥರ್ವ, ಡಬಲ್‌ ಇಂಜಿನ್‌, ಹಸಿರು ರಿಬ್ಬನ್‌, ಲವ್‌ಯೂ 2, ಎಂಎಂಸಿಎಚ್‌, ಟ್ರಂಕ್‌, ಕೀಚಕರು, ನವೋದಯ ಡೇಸ್‌,ನೀ ನನ್ನ ಉಸಿರು, ಸಮರ್ಥ, ಅಯ್ಯೋ ರಾಮ, ಮೊಗ್ಯಾಂಬೋ, ಪ್ರಯಾಣಿಕರ ಗಮನಕ್ಕೆ, ಸಂಕಷ್ಟಕರ ಗಣಪತಿ

ಅಗಸ್ಟ್‌ (34)
ಕಥೆಯೊಂದು ಶುರುವಾಗಿದೆ, ಕುಮಾರಿ 21, ಸ್ಟೇಟ್‌ಮೆಂಟ್‌, ಥಿಯರಿ, ವಾಸು ನಾನ್‌ ಪಕ್ಕಾ ಕಮರ್ಷಿಯಲ್‌, ಅತಂತ್ರ, ಅಭಿಸಾರಿಕೆ, ಹೊಸ ಕ್ಲೈಮ್ಯಾಕ್ಸ್‌, ಕತ್ತಲೆ ಕೋಣೆ, ಲೌಡ್‌ ಸ್ಪೀಕರ್‌, ಪಾದರಸ, ಪುಟ್ಟರಾಜು ಲವರ್‌ ಆಫ್ ಶಶಿಕಲಾ,  ರಾಮರಾಜ್ಯ, ಸಾವಿತ್ರಿಭಾಯಿಪುಲೆ, ವಂದನಾ, ಅಮಾವಾಸೆ,  ಅಯೋಗ್ಯ, ದಿವಂಗತ ಮಂಜುನಾಥನ ಗೆಳೆಯರು, ಒಂಥರಾ ಬಣ್ಣಗಳು, ಒಂದಲ್ಲ ಎರಡಲ್ಲಾ, ಕವಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಲೈಫ್ ಜೊತೆಗೊಂದ್‌ ಸೆಲ್ಫಿ, ಮೇ 1, ಮುಕ್ತಿ, ಧೂಳಿಪಟ, ಅಭಯಹಸ್ತ, ಚೌಕುರು ಗೇಟ್‌, ಮೇಸ್ತ್ರಿ, ತ್ರಾಟಕ, ಉದ್ದಿಶ್ಯ, ಆರೋಹಣ, ಗುಡ್‌ಬೈ, ಅರ್ಕಾವತ್‌

ಸೆಪ್ಟೆಂಬರ್‌ (09)
ಬಿಂದಾಸ್‌ ಗೂಗ್ಲಿ, ಮನೋರಥ, ಪತಿಬೇಕು.ಕಾಂ. ಗಡ್ಡಪ್ಪನ್‌ ದುನಿಯಾ, ಇರುವುದೆಲ್ಲವ ಬಿಟ್ಟು, ಮನೆ ನಂ. 67, ಅಂಬಿ ನಿಂಗೆ ವಯಸ್ಸಾಯೊ¤à, ಅವನೊಬ್ಬನೇ, ಕಿನಾರೆ

ಅಕ್ಟೋಬರ್‌ (09)
ಎ ಪ್ಲಸ್‌, ಆದಿ ಪುರಾಣ, ಖೊಟ್ಟಿ ಪೈಸೆ, ನಡುವೆ ಅಂತವಿರಲಿ, ಸ್ನೇಹವೇ ಪ್ರೀತಿ, ದಿ ಟೆರರಿಸ್ಟ್‌, ದಿ ವಿಲನ್‌, ಮೈನಸ್‌ ಥ್ರಿà ಪ್ಲಸ್‌ ಒನ್‌, ರುದ್ರಾಕ್ಷಿಪುರ

ನವೆಂಬರ್‌ 9 (26)
ಅಮ್ಮಚ್ಚಿಯೆಂಬ ನೆನಪು, ಜೀವನ ಯಜ°, ಕನ್ನಡ ದೇಶದೊಳ್‌, ಹಾಸನಾಂಬೆ ಮಹಿಮೆ, ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ, ವಿಕ್ಟರಿ -2, ಸಾಹಸಿ ಮಕ್ಕಳು, ಗಲ್ಲಿ ಬೇಕರಿ, ಜಗತ್‌ ಕಿಲಾಡಿ, ಮನಸಿನ ಮರೆಯಲಿ, ಎಂಎಲ್‌ಎ, 8 ಎಂಎಂ, ಪುಟ ನಂ 109, ಸುರ್‌ ಸುರ್‌ ಬತ್ತಿ, ತಾಯಿಗೆ ತಕ್ಕ ಮಗ, ಆ್ಯಪಲ್‌ ಕೇಕ್‌, ಕಿಸ್ಮತ್‌, ನೀವು ಕರೆ ಮಾಡಿದ ಚಂದಾದಾರರು, ಒಂದು ಸಣ್ಣ ಬ್ರೇಕ್‌ನ ನಂತರ, ಫ್ರೆಂಡ್ಲಿ ಬೇಬಿ, ರಾಹಿ, ತಾರಕಾಸುರ, ವರ್ಣಮಯ, ಗಾಂಚಲಿ, ಲೂಟಿ, ಕರ್ಷಣಂ

ಡಿಸೆಂಬರ್‌ (6)
ಆರೆಂಜ್‌, ಮಟಾಶ್‌, ಭೈರವ ಗೀತ, ಮುಂದಿನ ಬದಲಾವಣೆ, ಚರಂತಿ, ಅಜ್ಜ

ಯಾರೂ ಕೈ ಹಿಡಿಯಲಿಲ್ಲ
ಮೊದಲ ಚಿತ್ರವಾದ್ದರಿಂದ, ಮೇಕಿಂಗ್‌ನಲ್ಲಿ ಅನುಭವ ಕಮ್ಮಿ. ಆದರೆ, ಈ ಚಿತ್ರದಲ್ಲಿ ಎಲ್ಲವನ್ನೂ ಕಲಿತೆ. ಚಿತ್ರದ ಮೇಕಿಂಗ್‌ಗಿಂತ ಅದನ್ನು ರಿಲೀಸ್‌ ಮಾಡುವುದೇ ದೊಡ್ಡ ಸವಾಲಾಗಿತ್ತು. ಚಿತ್ರರಂಗದಲ್ಲಿ ಯಾರೂ ಕೈ ಹಿಡಿಯಲಿಲ್ಲ. ಹೊಸಬರಿಗೆ ಇದೊಂದು ಸಮಸ್ಯೆ. ಹಾಗಂತ, ನಮ್ಮ ಚಿತ್ರ ಸೋತಿಲ್ಲ. ಮುಂದಿನ ವರ್ಷ ಮತ್ತೆರಡು ಚಿತ್ರ ಮಾಡುವ ಯೋಜನೆಯಿದೆ. 
– ಆರ್‌. ಶಿವಕುಮಾರ್‌, ನಿರ್ದೇಶಕ, ನಿರ್ಮಾಪಕ “ಮುಖ್ಯಮಂತ್ರಿ ಕಳದೋದ್ನಪ್ಪೊ’.

ರಿಲೀಸ್‌ಗೂ ಮಹತ್ವ ಕೊಡಬೇಕಿತ್ತು
ಜಯಮಹಲ್‌’ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಮಾಡಿದ್ದರಿಂದಲೋ, ಏನೋ.., ಅದು ಸಂಪೂರ್ಣ ಕನ್ನಡ ಚಿತ್ರ ಎನಿಸಿಕೊಳ್ಳಲಿಲ್ಲ. ಆದರೆ, ಮೊದಲ ಸಲ ನಿರ್ದೇಶಕನಾದ ನನಗೆ ಆ ಚಿತ್ರ ಸಾಕಷ್ಟು ಅನುಭವ ಕೊಟ್ಟಿತು. ಒಂದು ಚಿತ್ರದ ಮೇಕಿಂಗ್‌ಗೆ ಎಷ್ಟು ಮಹತ್ವ ಕೊಡುತ್ತೇವೋ, ಅದನ್ನು ರಿಲೀಸ್‌ ಮಾಡುವಾಗಲೂ ಅಷ್ಟೇ ಮಹತ್ವ ಕೊಡಬೇಕು. ಹಾಗಾದಾಗ ಮಾತ್ರ ಚಿತ್ರವನ್ನು ಗೆಲ್ಲಿಸಲು ಸಾಧ್ಯ. ರಿಲೀಸ್‌ಗೆ ಹೆಚ್ಚು ಮಹತ್ವ ಕೊಡಬೇಕಿತ್ತು.’
– ಹೃದಯ ಶಿವ, ನಿರ್ದೇಶಕ, “ಜಯಮಹಲ್‌’.

ಅಂದುಕೊಂಡಂತೆ ಬಿಡುಗಡೆಯಾದರೆ ಅದೇ ಸಕ್ಸಸ್‌
“ತಂತ್ರಜ್ಞರೇ ಸೇರಿ ಚಿತ್ರ ನಿರ್ಮಾಣ ಮಾಡೋಣ ಅಂದುಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಿದೆವು. ಚಿತ್ರ ಕೂಡ ನಾವಂದುಕೊಂಡಂತೆ ಬಂದಿತ್ತು. ಆದರೆ, ಯಾವುದೇ ಸ್ಟಾರ್ ಇಲ್ಲದಿದ್ದರಿಂದ, ಚಿತ್ರ ಚೆನ್ನಾಗಿದ್ದರೂ ರಿಲೀಸ್‌ ಮಾಡಲು ಕಷ್ಟವಾಯ್ತು. ಚಿತ್ರ ಅಂದುಕೊಂಡಂತೆ ರಿಲೀಸ್‌ ಆಗದಿದ್ದರಿಂದ ಆರ್ಥಿಕವಾಗಿ ನಷ್ಟವಾಯಿತು. ಆದರೂ ಚಿತ್ರ ಒಂದಷ್ಟು ಅನುಭವಗಳನ್ನು ಕೊಟ್ಟಿತು. ಚಿತ್ರ ಎಷ್ಟೇ ಚೆನ್ನಾಗಿದ್ರೂ, ಅದು ಸರಿಯಾಗಿ ರಿಲೀಸ್‌ ಆಗದಿದ್ರೆ ನಿಜವಾದ ಸಕ್ಸಸ್‌ ಸಿಗೋದು ಕಷ್ಟ’ 
– ರಘುವರ್ಧನ್‌, ನಿರ್ದೇಶಕ, “ಮಿಸ್ಟರ್‌ ಎಲ್‌ಎಲ್‌ಬಿ’

ಪ್ರೇಕ್ಷಕರಿಗೆ ತಲುಪಿಲ್ಲವೆಂಬ ಬೇಸರವಿದೆ
“ನಾವು ಚಿತ್ರ ರಿಲೀಸ್‌ ಮಾಡಿದಾಗ, ಎಲೆಕ್ಷನ್ಸ್‌, ಪರೀಕ್ಷೆಗಳು, ಯುಎಫ್ಓ-ಕ್ಯೂಬ್‌ ಸಮಸ್ಯೆಗಳು, ಒಂದೇ ವಾರ ಏಳೆಂಟು ಚಿತ್ರಗಳು ಬಿಡುಗಡೆಯಾಗುತ್ತಿದ್ದರಿಂದ ಥಿಯೇಟರ್‌ ಸಮಸ್ಯೆ ಹೀಗೆ ಹಲವು ಅಡೆತಡೆ  ಇದ್ದುದರಿಂದ ಚಿತ್ರ ಹೆಚ್ಚು ಜನರನ್ನು ತಲುಪಲಾಗಲಿಲ್ಲ. ಹಾಗಾಗಿ ಥಿಯೇಟರ್‌ ಕಲೆಕ್ಷನ್‌ ಕಡಿಮೆಯಾಯ್ತು. ಆದ್ರೆ ಚಿತ್ರಕ್ಕೆ ಸಿಕ್ಕ ಉತ್ತಮ ಪ್ರತಿಕ್ರಿಯೆಗಳಿಂದ ಚಿತ್ರದ ಡಿಜಿಟಲ್‌ ರೈಟ್ಸ್‌, ಡಬ್ಬಿಂಗ್‌ ರೈಟ್ಸ್‌ ಒಳ್ಳೆಯ ಮೊತ್ತಕ್ಕೆ ಸೇಲ್‌ ಆಯ್ತು. ಒಳ್ಳೆ ಚಿತ್ರ ಮಾಡಿದರೂ ಪ್ರೇಕ್ಷಕರನ್ನು ತಲುಪಲಿಲ್ಲ ಎಂಬ ಬೇಸರವಿದೆ’ 
-ಮುತ್ತು, ನಿರ್ದೇಶಕ “ಪ್ರೀತಿಯ ರಾಯಭಾರಿ’

ಕಷ್ಟಪಟ್ಟು 25 ದಿನ … 
“ಟ್ರಂಕ್‌’ ನನಗೆ ಮೊದಲ ಚಿತ್ರವಾಗಿದ್ದರಿಂದ, ಚಿತ್ರದ ಬಜೆಟ್‌, ಕಾಸ್ಟಿಂಗ್‌, ಮೇಕಿಂಗ್‌ ಎಲ್ಲದರಲ್ಲೂ ಸಾಕಷ್ಟು ಇತಿಮಿತಿಗಳಿದ್ದವು. ಕೊನೆಗೆ ಅಂತೂ ನಾವಂದುಕೊಂಡಂತೆ ಇಡೀ ಚಿತ್ರವನ್ನು 38 ಲಕ್ಷದಲ್ಲಿ ಮುಗಿಸಿದೆವು. ರಿಲೀಸ್‌ ಆದ ನಂತರ ಚಿತ್ರಕ್ಕೆ ಸರಿಯಾದ ಥಿಯೇಟರ್‌ಗಳು ಸಿಗದಿದ್ದರಿಂದ ಆಡಿಯನ್ಸ್‌ ನೋಡಲಿಲ್ಲ. ಆದ್ರೂ ಸಿಕ್ಕ ಥಿಯೇಟರ್ನಲ್ಲಿ ಚಿತ್ರ 25 ದಿನ ಪೂರೈಸಿತು. ಚಿತ್ರದ ಥಿಯೇಟರ್‌ ಕಲೆಕ್ಷನ್‌, ಹಿಂದಿ ಡಬ್ಬಿಂಗ್‌ ರೈಟ್ಸ್‌ ಎಲ್ಲವೂ ನಿರ್ಮಾಪಕರಿಗೆ ಒಂದಷ್ಟು ಗಳಿಕೆ ತಂದುಕೊಟ್ಟಿತು.
– ರಿಷಿಕಾ ಶರ್ಮ, “ಟ್ರಂಕ್‌’ ಚಿತ್ರದ ನಿರ್ದೇಶಕಿ

ಕಳೆ ಜಾಸ್ತಿ ಇದ್ರೆ ಬೆಳೆ ಕಾಣಲ್ಲ …
ಆರಂಭದಲ್ಲಿ ಜೊತೆಗಿದ್ದ ಕೆಲವರು ಹಿಂದೆ ಸರಿದಿದ್ದರಿಂದ, ನಿರ್ದೇಶಕನಾಗಿದ್ದ ನಾನು ಅನಿವಾರ್ಯವಾಗಿ “ಚಿಟ್ಟೆ ‘ಚಿತ್ರವನ್ನು ನಿರ್ಮಿಸಬೇಕಾಗಿ ಬಂತು. ಚಿತ್ರ ನನಗೆ ತೃಪ್ತಿ ನೀಡಿದೆ. ಚಿತ್ರರಂಗದಲ್ಲಿ ನನ್ನನ್ನು ನಾನು ಕಂಡುಕೊಳ್ಳುವಂತೆ ಮಾಡಿದೆ. ಒಳ್ಳೆಯ ಚಿತ್ರ ಜನರನ್ನ ತಲುಪಿಲ್ಲವಲ್ಲ ಎಂಬ ನೋವಿದೆ. ಹೊಲದಲ್ಲಿ ಬೆಳೆಗಿಂತ ಕಳೆ ಜಾಸ್ತಿಯಿದ್ರೆ ಬೆಳೆ ಕಾಣಲ್ಲ. ಹಾಗೆ ಚಿತ್ರರಂಗದಲ್ಲಿ ವಾರಕ್ಕೆ ಏಳೆಂಟು ಚಿತ್ರಗಳು ಬರುವಾಗ ಅದರ ನಡುವೆ ಬರುವ ಒಂದೆರಡು ಚಿತ್ರಗಳೂ ಜನರಿಗೆ ಕಾಣಿಸುವುದಿಲ್ಲ.
– ಎಂ.ಎಲ್‌ ಪ್ರಸನ್ನ, “ಚಿಟ್ಟೆ ‘ ಚಿತ್ರದ ನಿರ್ದೇಶಕ

ಟೀಮ್‌ ಸುಚಿತ್ರಾ

Advertisement

Udayavani is now on Telegram. Click here to join our channel and stay updated with the latest news.

Next