Advertisement

2007 ಹೈದರಾಬಾದ್‌ ಬ್ಲಾಸ್ಟ್‌ : ಇಬ್ಬರಿಗೆ ನೇಣು, ಓರ್ವನಿಗೆ ಜೀವಾವಧಿ

06:56 PM Sep 10, 2018 | Team Udayavani |

ಹೊಸದಿಲ್ಲಿ : ಹೈದರಾಬಾದ್‌ ಅವಳಿ ಬಾಂಬ್‌ ನ್ಪೋಟ ಪ್ರಕರಣದ ಇಬ್ಬರು ಆರೋಪಿಗಳಾಗಿರುವ ಅನೀಕ್‌ ಸಯೀದ್‌ ಮತ್ತು ಇಸ್ಮಾಯಿಲ್‌ ಚೌಧರಿಗೆ ನ್ಯಾಯಾಲಯ ಮರಣ ದಂಡನೆಯ ಶಿಕ್ಷೆ ವಿಧಿಸಿದೆ. ಇದೇ ಪ್ರಕರಣದ ಇನ್ನೋರ್ವ ಆರೋಪಿ ತಾರೀಕ್‌ ಅಂಜುಂ ಗೆ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. 

Advertisement

ವಿಶೇಷ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ನ್ಯಾಯಾಲಯ ಇಂದು ಸೋಮವಾರ ಈ ತೀರ್ಪು ನೀಡಿತು. 

ಈ ಪ್ರಕರಣದ ಇನ್ನೂ ಇಬ್ಬರು ಆರೋಪಿಗಳನ್ನು ನ್ಯಾಯಾಲಯವು ಖುಲಾಸೆ ಮಾಡಿದೆ. ಇವರಲ್ಲದೆ ಇನ್ನೂ ಮೂವರು ಆರೋಪಿಗಳು ಈಗಲೂ ತಲೆ ಮರೆಸಿಕೊಂಡಿದ್ದಾರೆ. 

11 ವರ್ಷಗಳ ಹಿಂದೆ ಹೈದರಾಬಾದಿನ ಗೋಕುಲ್‌ ಚ್ಯಾಟ್‌ ಮತ್ತು ಲುಂಬಿನಿ ಪಾರ್ಕ್‌ನಲ್ಲಿ ಅವಳಿ ಬಾಂಬ್‌ ಸ್ಫೋಟ ನಡೆದಿತ್ತು. 42 ಜನರು ಮೃತಪಟ್ಟಿದ್ದರು; 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಕೇಸಿಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿತ್ತು. ಅವರೆಂದರೆ ಮೊಹಮ್ಮದ್‌ ಸಾದಿಕ್‌, ಅನ್ಸಾರ್‌ ಅಹ್ಮದ್‌ ಬಾದ್‌ಶಾ ಶೇಕ್‌, ಅಕ್‌ಬರ್‌ ಇಸ್ಮಾಯಿಲ್‌ ಮತ್ತು ಅನೀಕ್‌ ಶಫೀಕ್‌ ಸೈಯದ್‌. 

Advertisement

ಈ ಎಲ್ಲ ಬಂಧಿತರು ಇಂಡಿಯನ್‌ ಮುಜಾಹಿದೀನ್‌ ಕಾರ್ಯಕರ್ತರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next