ಹೈದರಾಬಾದ್ : 2007ರಲ್ಲಿ ನಡೆದಿದ್ದ ಹೈದರಾಬಾದ್ ಅವಳಿ ಬ್ಲಾಸ್ಟ್ ಕೇಸಿನಲ್ಲಿ ಇಂಡಿಯನ್ ಮುಜಾಹಿದೀನ್ ಕಾರ್ಯಕರ್ತರೆಂದು ತಿಳಿಯಲಾಗಿರುವ ಅನೀಕ್ ಶಫೀಕ್ ಸಯೀದ್ ಮತ್ತು ಇಸ್ಮಾಯಿಲ್ ಚೌಧರಿ ಅವರನ್ನು ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಅಪರಾಧಿಗಳೆಂದರೆ ಘೋಷಿಸಿದ್ದು ಸೆ.10ರ ಸೋಮವಾರದಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
ಈ ಪ್ರಕರಣದ ಇನ್ನೂ ಇಬ್ಬರು ಆರೋಪಿಗಳನ್ನು ನ್ಯಾಯಾಲಯವು ಖುಲಾಸೆ ಮಾಡಿದೆ. ಇವರಲ್ಲದೆ ಇನ್ನೂ ಮೂವರು ಆರೋಪಿಗಳು ಈಗಲೂ ತಲೆ ಮರೆಸಿಕೊಂಡಿದ್ದಾರೆ.
11 ವರ್ಷಗಳ ಹಿಂದೆ ಹೈದರಾಬಾದಿನ ಗೋಕುಲ್ ಚ್ಯಾಟ್ ಮತ್ತು ಲುಂಬಿನಿ ಪಾರ್ಕ್‌ನಲ್ಲಿ ಅವಳಿ ಬಾಂಬ್ ಸ್ಫೋಟ ನಡೆದಿತ್ತು. 42 ಜನರು ಮೃತಪಟ್ಟಿದ್ದರು; 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಕೇಸಿಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿತ್ತು. ಅವರೆಂದರೆ ಮೊಹಮ್ಮದ್ ಸಾದಿಕ್, ಅನ್ಸಾರ್ ಅಹ್ಮದ್ ಬಾದ್‌ಶಾ ಶೇಕ್, ಅಕ್‌ಬರ್ ಇಸ್ಮಾಯಿಲ್ ಮತ್ತು ಅನೀಕ್ ಶಫೀಕ್ ಸೈಯದ್.
ಈ ಎಲ್ಲ ಬಂಧಿತರು ಇಂಡಿಯನ್ ಮುಜಾಹಿದೀನ್ ಕಾರ್ಯಕರ್ತರಾಗಿದ್ದರು.