Advertisement

2 ಸಾವಿರ ಜನ ಪ್ರಯಾಣ

11:38 AM Jun 23, 2018 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಸಾಮರ್ಥ್ಯ ಶನಿವಾರದಿಂದ ದುಪ್ಪಟ್ಟುಗೊಳ್ಳಲಿದ್ದು, 2000 ಜನ ಒಮ್ಮೆಲೆ ಪ್ರಯಾಣಿಸಬಹುದು! ಪ್ರಸ್ತುತ ಮೂರು ಬೋಗಿಗಳ ರೈಲಿನಲ್ಲಿ ಅಬ್ಬಬ್ಟಾ ಎಂದರೆ 975 ಜನ ಪ್ರಯಾಣಿಸಬಹುದು. ಆದರೆ, ಆರು ಬೋಗಿಗಳ ರೈಲಿನ ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ 2004. ಹೆಚ್ಚುವರಿ ಬೋಗಿಗಳನ್ನು ಒಳಗೊಂಡ ಈ ರೈಲು ಸಂಚಾರಕ್ಕೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಚಾಲನೆ ನೀಡಿದರು. 

Advertisement

ಹೆಚ್ಚು ಸಂಚಾರದಟ್ಟಣೆ ಇರುವ ಮಾರ್ಗದಲ್ಲಿ ಅಂದರೆ ಇಂದಿರಾನಗರದಿಂದ ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವೆ ಈ ನೂತನ ಆರು ಬೋಗಿಗಳ ಮೆಟ್ರೋ ರೈಲು ಕಾರ್ಯಾಚರಣೆ ನಡೆಸಲಿದೆ. ಉಳಿದಂತೆ ಯಥಾಪ್ರಕಾರ ಮೂರು ಬೋಗಿಗಳ ರೈಲು ಸಂಚಾರ ಇರಲಿದೆ ಎಂದು ಬಿಎಂಆರ್‌ಸಿಲ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬೋಗಿಗಳ ಸಂಖ್ಯೆ ದುಪ್ಪಟ್ಟಾಗುವುದರಿಂದ ಮೆಟ್ರೋ ವೇಗದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಗಂಟೆಗೆ ಗರಿಷ್ಠ 80 ಕಿ.ಮೀ. ವೇಗದಲ್ಲಿಯೂ ಈ ರೈಲು ಸಂಚರಿಸುತ್ತದೆ ಎಂದು ತಾಂತ್ರಿಕ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next