Advertisement

Rupee: 2,000 ನೋಟು: ಗಡುವು ವಿಸ್ತರಣೆ?

12:25 AM Sep 30, 2023 | Team Udayavani |

ಹೊಸದಿಲ್ಲಿ: 2,000ರೂ. ಮುಖಬೆಲೆಯ ನೋಟುಗಳನ್ನು ಹಿಂದಿರುಗಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ನೀಡಿರುವ ಗಡುವನ್ನು ಅಕ್ಟೋಬರ್‌ ತಿಂಗಳ ಕೊನೆಯವರೆಗೆ ವಿಸ್ತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮೇ 19ರಂದೇ 2,000 ನೋಟುಗಳ ಚಲಾವಣೆ ನಿಲ್ಲಿಸುವುದಾಗಿ ಘೋಷಿಸಿದ್ದ ಆರ್‌ಬಿಐ ಜನರು ತಮ್ಮ ಬಳಿ ಇರುವ ನೋಟುಗಳನ್ನು ಹಿಂದಿರುಗಿಸಿ, ಬದಲಿಸಿಕೊಳ್ಳಲು ಸೆಪ್ಟಂಬರ್‌ 30ರ ಗಡುವು ನೀಡಿತ್ತು.

Advertisement

ಆದಾಗ್ಯೂ ಸೆ.1ರ ವೇಳೆಗೆ 240 ಶತಕೋಟಿ ರೂ.ಗಳಷ್ಟು ಮೊತ್ತದ 2,000 ಮುಖಬೆಲೆಯ ನೋಟುಗಳು ಇನ್ನೂ ಚಲಾವಣೆಯಲ್ಲಿವೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿತ್ತು. ಇದರೊಂದಿಗೆ ಅನಿವಾಸಿ ಭಾರತೀಯ ರಿಗೂ ಅನುವಾಗುವಂತೆ ಗಡುವನ್ನು ಒಂದು ತಿಂಗಳು ವಿಸ್ತರಿಸಬಹುದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next