Advertisement

ಪರಿಸರ ಸ್ನೇಹಿ “ಇಫ್ತಾರ್‌’

06:00 AM May 23, 2018 | Team Udayavani |

ತಿರುವನಂತಪುರ: ರಂಜಾನ್‌ ಹಬ್ಬದ ಮಾಸಾಚರಣೆಯಲ್ಲಿ ಆಯೋಜಿಸಲಾಗುವ ಇಫ್ತಾರ್‌ ಕೂಟಕ್ಕೆ ಭಾರೀ ಮಹತ್ವವಿದೆ. ಇಂಥ ಕೂಟವನ್ನು ನೂರಾರು ವರ್ಷಗಳಿಂದ ಆಯೋಜಿಸುತ್ತಿರುವ ಕೇರಳದ ರಾಜಧಾನಿಯ ಹೃದಯ ಭಾಗದಲ್ಲಿರುವ ಪಟ್ಟಾಲಪಲ್ಲಿ ಜುಮಾ ಮಸೀದಿ ಈಗ ಆ ಭಾಗದ ಜನರ ಆಕರ್ಷಣೆಯ ಕೇಂದ್ರವಾಗಿದೆ. 

Advertisement

ರಂಜಾನ್‌ ಉಪವಾಸ ಅಂತ್ಯಗೊಳಿಸಿದ ನಂತರ ವಿತರಿಸಲಾಗುವ ಆಹಾರದಲ್ಲಿ “ಔಷಧ ಗಂಜಿ’ ಅತಿ ಜನ ಪ್ರಿಯವಾದದ್ದು. ಮರಗೆಣಸು ಅಥವಾ ಹೆಸರು ಕಾಳುಗಳಿಂದ ತಯಾರಿಸುವ ಔಷಧ ಗಂಜಿ ಜತೆಗೆ, ಖರ್ಜೂರ, ಇನ್ನಿತರ ಹಣ್ಣು ಹಂಪಲು ವಿತರಿಸಲಾಗುತ್ತದೆ. ಪ್ರತಿದಿನ 900ರಿಂದ 1,200ದಷ್ಟು ಸಮಾಜದ ನಾನಾ ವರ್ಗಗಳ ಜನರು, ಧರ್ಮ, ಜಾತಿ, ಮತಗಳ ಹಂಗಿಲ್ಲದೆ ಇಲ್ಲಿ ಆಹಾರ ಸೇವಿಸುವುದು ಈ ಮಸೀದಿಯ ಹೆಗ್ಗಳಿಕೆ. ಮುಸ್ಲಿಂ ಮಹಿಳೆಯರಿಗೆ ತಮ್ಮ ಉಪವಾಸ ಅಂತ್ಯಗೊಳಿಸಲು ಪ್ರಾರ್ಥನೆ ಸಲ್ಲಿ ಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿರುವುದು ಇಲ್ಲಿನ ಮತ್ತೂಂದು ವಿಶೇಷ.  
ಆಹಾರ ತಯಾರಿಕೆಯಿಂದ ವಿತರಣೆವರೆಗೆ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಔಷಧ ಗಂಜಿಯನ್ನು ಪಾರ್ಸೆಲ್‌ ಪಡೆಯಲು ಬರುವವರೂ ಪ್ಲಾಸ್ಟಿಕ್‌ ಬ್ಯಾಕ್‌ ಹೊರತಾಗಿ ಪರಿಸರ ಸ್ನೇಹಿ ಪರಿಕರಗಳನ್ನೇ ತರಬೇಕಿದೆ. 

1813ರಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿರುವ ಈ ಮಸೀದಿಗೆ 2 ಶತಮಾನಗಳ ಇತಿಹಾಸವಿದೆ. ಆಹಾರ ತಯಾರಿಕೆ ಕಟ್ಟಿಗೆ ಒಲೆಯ ಮೇಲೇ ಆಗುತ್ತದೆ. ಇಲ್ಲಿ ಎಲ್ಲವೂ ಪರಿಸರ ಸ್ನೇಹಿ ವ್ಯವಸ್ಥೆಯಿದೆ. ಪ್ಲಾಸ್ಟಿಕ್‌ ಬಳಕೆ ನಮ್ಮಲ್ಲಿ ಎಳ್ಳಷ್ಟೂ ಇಲ್ಲ. 
 ಮೌಲ್ವಿ ವಿ.ಪಿ. ಸುಹೈಬ್‌, ಮಸೀದಿ ಆಡಳಿತಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next