Advertisement

200 ಕೋಟಿ ಕ್ಲಬ್‌ಗ ದ ಕಾಶ್ಮೀರ್‌ ಫೈಲ್ಸ್‌; ಬ್ಲಾಕ್‌ಬಸ್ಟರ್‌ ಸಿನೆಮಾಗಳ ಸಾಲಿಗೆ ಸೇರ್ಪಡೆ

02:32 AM Mar 24, 2022 | Team Udayavani |

ಹೊಸದಿಲ್ಲಿ: ಕಾಶ್ಮೀರಿ ಪಂಡಿತರ ನರಮೇಧ ಘಟನೆ ಆಧರಿಸಿದ “ದ ಕಾಶ್ಮೀರ್‌ ಫೈಲ್ಸ್‌’ ಸಿನೆಮಾ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುತ್ತಿದೆ. ಜಗತ್ತಿನಾದ್ಯಂತ ಭಾರೀ ಮೆಚ್ಚುಗೆಗೆ ಪಾತ್ರವಾಗಿರುವ ಇದು ಬುಧವಾರದ ವರೆಗೆ 200 ಕೋಟಿ ರೂ.ಗಳಿಂತಲೂ ಅಧಿಕ ಮೊತ್ತ ಬಾಚಿಕೊಂಡಿದೆ.

Advertisement

ಸಿನೆಮಾ ಬಿಡುಗಡೆಯಾಗಿದ್ದ ಮೊದಲ ದಿನವೇ 3.55 ಕೋಟಿ ರೂ. ಮೊತ್ತವನ್ನು ಗಳಿಸಿತ್ತು. ಬುಧವಾರಕ್ಕೆ ಸಿನಿಮಾ ಬಿಡುಗಡೆಯಾಗಿ 13 ದಿನಗಳು ಪೂರ್ಣಗೊಂಡಿವೆ. ಕರ್ನಾಟಕ ಸಹಿತ ದೇಶಾದ್ಯಂತ ವಿವೇಕ್‌ ರಂಜನ್‌ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್‌ ಫೈಲ್ಸ್‌ ಸದ್ದು ಮಾಡುತ್ತಿದ್ದು, ಪ್ರಸಕ್ತ ಸಾಲಿನ ಬ್ಲಾಕ್‌ಬಸ್ಟರ್‌ಗಳ ಸಿನೆಮಾಗಳ ಸಾಲಿಗೆ ಸೇರಿಕೊಂಡಿದೆ.

ಸೋಮವಾರ 12.40 ಕೋಟಿ ರೂ., ಮಂಗಳವಾರ 10.50 ಕೋಟಿ ರೂ. ಮೊತ್ತವನ್ನು ದೇಶಾದ್ಯಂತ ಗಳಿಸಿತ್ತು. ಬಾಕ್ಸ್‌ ಆಫೀಸ್‌ ವಿಶ್ಲೇಷಕರ ಪ್ರಕಾರ ಬಿಡುಗಡೆಯಾದ ಎರಡು ವಾರಗಳಲ್ಲಿ ಇಷ್ಟು ಮೊತ್ತ ಸಂಗ್ರಹಿಸಿದ್ದು ದಾಖಲೆಯೇ ಸರಿ. “ಬಾಹುಬಲಿ’ ಬಿಡುಗಡೆ ಯಾದ ಎರಡು ವಾರಗಳಲ್ಲಿ 120 ಕೋಟಿ ರೂ. ಬಾಚಿಕೊಂಡಿತ್ತು. ಹೀಗಾಗಿ ಆ ಸಿನೆಮಾದ ಬಳಿಕ, ಬಿಡುಗಡೆಯಾದ 2 ವಾರಗಳಲ್ಲೇ 120 ಕೋಟಿ ರೂ. ಸಂಗ್ರಹಿಸಿದ 2ನೇ ಸಿನೆಮಾ ಇದಾಗಿದೆ.

ಇದನ್ನೂ ಓದಿ:ಇನ್‌ಸ್ಟಾಗ್ರಾಂನಲ್ಲಿ ನಾಗಚೈತನ್ಯರನ್ನು ಅನ್ ಫಾಲೋ ಮಾಡಿದ ನಟಿ ಸಮಂತಾ

ಬಾಕ್ಸಾಫೀಸ್‌ ಸಾಧನೆ
-ಬಾಹುಬಲಿ (2017) 511.30 ಕೋಟಿ ರೂ.
-ದಂಗಲ್‌(2016) 383.1ಕೋಟಿ ರೂ.
– ಸಂಜು (2018) 341 ಕೋಟಿ ರೂ.
– ಪಿಕೆ (2014) 340 ಕೋಟಿ ರೂ.
– ಟೈಗರ್‌ ಜಿಂದಾ ಹೈ (2017) 339.08 ಕೋಟಿ ರೂ.
– ಬಜರಂಗಿ ಭಾಯಿಜಾನ್‌ (2015) 320.34 ಕೋಟಿ ರೂ.
– ವಾರ್‌ (2019): 314.67 ಕೋ.ರೂ.
– ಪದ್ಮಾವತ್‌ (2018): 300 ಕೋ.ರೂ.
– ಸುಲ್ತಾನ್‌ (2016): 300.45 ಕೋ.ರೂ.

Advertisement
Advertisement

Udayavani is now on Telegram. Click here to join our channel and stay updated with the latest news.

Next