ಕಾಸರಗೋಡು: ರಾಜ್ಯ ಸರಕಾರ ಈ ಬಾರಿ ಅವಧಿಗೆ ಮುನ್ನ 200 ನೂತನ ಸೇತುವೆಗಳ ನಿರ್ಮಾಣ ಕಾಮಗಾರಿ ಪೂರ್ಣ ಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಜಿ. ಸುಧಾಕರನ್ ಹೇಳಿದರು.
ಕಿಳಿಯಂನಲ್ಲಿ ಶನಿವಾರ ಕಿಳಿಯಂ- ವರಂಞೂರ್ ರಸ್ತೆಯ ಪುನರ್ ನಿರ್ಮಾಣ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಯಾವ ಸರಕಾರವೂ ನಡೆಸದಷ್ಟು ಅಭಿವೃದ್ಧಿ ಚಟುವಟಿಕೆಗಳು ಈ ಸರಕಾರದ ಅವಧಿಯಲ್ಲಿ ನಡೆಯುತ್ತಿವೆ. ಕಾಂಞಂಗಾಡ್ ವಿಧಾನಸಭೆ ಕ್ಷೇತ್ರದಲ್ಲಿ ನಡೆದಿರುವ ಪ್ರಗತಿಗಳು ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿಗೆ ನಿದರ್ಶನಗಳಾಗಿವೆ. ರಾಜ್ಯದಲ್ಲಿ ಮಲೆನಾಡ ಹೆದ್ದಾರಿ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಕರಾವಳಿ ಹೆದ್ದಾರಿ ನಿರ್ಮಾಣ ಮೂಲಕ ಪ್ರವಾಸೋದ್ಯಮ ವಲಯಕ್ಕೆ ಹೆಚ್ಚುವರಿ ಪ್ರಯೋಜನ ವಾಗಲಿದೆ. 60 ಸಾವಿರ ಕೋಟಿ ರೂ. ಕಿಫಿºಯಲ್ಲಿ ಅಳವಡಿಸಿ ವಿವಿಧ ಯೋಜನೆ ಗಳಿಗೆ ವಿಭಜಿಸಿ ನೀಡಲಾಗಿದೆ. ನೀಲೇಶ್ವರ, ಪಳ್ಳಿಕ್ಕರೆ ಮೇಲ್ಸೇತುವೆ, ಕಾಂಞಂಗಾಡ್ ರೈಲ್ವೇ ಮೇಲೇÕತುವೆ ನಿರ್ಮಾಣ ಚಟುವಟಿಕೆಗಳು ಆರಂಭಗೊಂಡಿವೆ ಎಂದವರು ತಿಳಿಸಿದರು.
ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಪಿ. ಕರುಣಾಕರನ್ ಮುಖ್ಯ ಅತಿಥಿಯಾಗಿದ್ದರು. ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷ ಪಿ.ರಾಜನ್, ವಿವಿಧ ಗ್ರಾ. ಪಂ.ಗಳ ಅಧ್ಯಕ್ಷರಾದ ಎ. ವಿಧುಬಾಲ, ಸಿ. ಕುಂಞಿಕಣ್ಣನ್, ವಿವಿಧ ಕ್ಷೇತ್ರಗಳ ಗಣ್ಯರಾದ ವಿ. ಬಾಲಕೃಷ್ಣನ್, ವಿ. ಸುಧಾಕರನ್, ಷೈಮಾ ಬೆನ್ನಿ, ಪಿ. ಚಂದ್ರನ್, ಕೆ. ಭೂಪೇಶ್, ಪಿ. ಪ್ರಕಾಶ್, ಪಿ.ವಿ. ರವಿ, ಕಾತ್ಯಾìಯಿನಿ ಕಣ್ಣನ್, ನ್ಯಾಯವಾದಿ ಕೆ.ಕೆ. ನಾರಾಯಣನ್, ಎನ್. ಪುಷ್ಪರಾಜನ್, ಕೆ. ಲಕ್ಷ್ಮಣನ್, ಎಸ್.ಕೆ. ಚಂದ್ರನ್, ಯು.ವಿ. ಮಹಮ್ಮದ್ ಕುಂಞಿ ಮೊದಲಾದವರು ಉಪಸ್ಥಿತರಿದ್ದರು.
ರಾಜ್ಯ ರಸ್ತೆ ನಿಧಿ ಮಂಡಳಿ ಪ್ರಧಾನ ಎಂಜಿನಿಯರ್ ವಿ.ವಿ.ಬಿನು ವರದಿ ವಾಚಿಸಿದರು. ಟಿ.ಕೆ.ರವಿ ಸ್ವಾಗತಿಸಿದರು. ಕಾಸರಗೋಡು ಲೋಕೋಪಯೋಗಿ ವಿಭಾಗದ ಕಾರ್ಯಕಾರಿ ಎಂಜಿನಿಯರ್ ಕೆ.ಪಿ. ವಿನೋದ್ ಕುಮಾರ್ ವಂದಿಸಿದರು.
ತ್ವರಿತಗತಿ ಕಾಮಗಾರಿ
ಕಾಮಗಾರಿಗಳೆಲ್ಲವೂ ತ್ವರಿತಗತಿಯಲ್ಲಿ ನಡೆ ಯುತ್ತಿದ್ದು, ಬಹುತೇಕ ಸೇತುವೆಗಳ ನಿರ್ಮಾಣ ಅಂತಿಮ ಹಂತದಲ್ಲಿವೆ. 23.18 ಕೋಟಿ ರೂ.ಗಳನ್ನು ಕಿಳಿಯಂನಿಂದ ಕಮ್ಮಾಡಂ ವರೆಗಿನ ರಸ್ತೆಗಾಗಿ ಮೀಸಲಿರಿಸ ಲಾಗಿದೆ. 18 ತಿಂಗಳ ಅವಧಿಯಲ್ಲಿ ಇದು ಪೂರ್ಣಗೊಳ್ಳಲಿದೆ.
– ಜಿ. ಸುಧಾಕರನ್ ಲೋಕೋಪಯೋಗಿ ಸಚಿವ