ಹೊಸದಿಲ್ಲಿ: ಸಂಸತ್ ಮೇಲೆ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರರು ದಾಳಿ ನಡೆಸಿ ಸೋಮವಾರಕ್ಕೆ 20 ವರ್ಷಗಳು ಪೂರ್ತಿಯಾಗಿವೆ.
ಹೀಗಾಗಿ, ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು ಒಂದು ನಿಮಿಷಗಳ ಕಾಲ ಮೌನ ಆಚರಿಸಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಲೋಕಸಭೆಯಲ್ಲಿ ಕಲಾಪ ಶುರುವಾಗುತ್ತಿದ್ದಂತೆಯೇ ಸ್ಪೀಕರ್ ಓಂ ಬಿರ್ಲಾ 2001 ಡಿ.13ರಂದು ನಡೆದ ಘಟನೆಯ ಬಗ್ಗೆ ಪ್ರಸ್ತಾಪಿಸಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ರಾಜ್ಯಸಭೆಯಲ್ಲಿ ಕೂಡ ಸಭಾಪತಿ ಎಂ.ವೆಂಕಯ್ಯ ನಾಯ್ಡು ಕೂಡ ಘಟನೆಯ ಬಗ್ಗೆ ಪ್ರಸ್ತಾಪಿಸಿದರು. ನಂತರ ಒಂದು ನಿಮಿಷ ಮೌನ ಆಚರಿಸಲಾಯಿತು.
ಇದನ್ನೂ ಓದಿ:ತಿರುಪತಿಯಿಂದ ತಿರುಮಲಕ್ಕೆ ಮತ್ತೊಂದು ರಸ್ತೆ
ಜತೆಗೆ ಸಂಸತ್ ಭವನದ ಮುಂಭಾಗದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಪ್ರಮುಖರು ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಿದರು. 2001ರಲ್ಲಿ ನಡೆದಿದ್ದ ಹೇಯ ಘಟನೆಯಲ್ಲಿ ಒಂಭತ್ತು ಮಂದಿ ಅಸುನೀಗಿದ್ದರು.