Advertisement

20 ವರ್ಷಗಳಿಂದ ರಸ್ತೆಬದಿ ಗುಡಿಸಲಲ್ಲೇ ಜೀವನ

01:22 PM Mar 22, 2017 | Team Udayavani |

ಎಚ್‌.ಡಿ.ಕೋಟೆ: ದೇಶ ಗುಡಿಸಲು ರಹಿತ ವಾಗಿರಬೇಕು, ಬಡಜನತೆಯೂ ಸ್ವಂತ ಸೂರು ಹೊಂದಬೇಕು ಅನ್ನುವ ಉದ್ದೇಶದಿಂದ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಯಾದರೂ ಅರ್ಹ ಬಡವರಿಗೆ ಮಾತ್ರ ಯೋಜನೆ ತಲುಪುತ್ತಿಲ್ಲ ಅನ್ನುವುದಕ್ಕೆ ಕಳೆದ 20 ವರ್ಷಗಳಿಂದ ರಸ್ತೆಬದಿಯಲ್ಲಿ ವಾಸವಾಗಿರುವ ಜನರೇ ಜೀವಂತ ಸಾಕ್ಷಿ.

Advertisement

ಸರ್ಕಾರ ಬಡವರಿಗಾಗಿ ವಿವಿಧ ಭಾಗ್ಯಗಳ ಯೋಜನೆ ಜಾರಿಗೆ ತಂದಿದೆ, ಆದರೆ ಯೋಜನೆಗಳು ಉಳ್ಳವರ ಪಾಲಾಗುವ ಮೂಲಕ ಬಡವರು ಯೋಜನೆ ಗಳಿಂದ ವಂಚಿತರಾಗಿದ್ದಾರೆ ಅನ್ನುವುದಕ್ಕೆ ಎಚ್‌.ಡಿ.ಕೋಟೆ ತಾಲೂಕು ಕೇಂದ್ರಸ್ಥಾನದಿಂದ ಕೇವಲ 3 ಕಿಮೀ ಅಂತರದಲ್ಲಿರುವ ಹೆಗ್ಗಡಾಪುರ, ಇದು ನಾಗನಹಳ್ಳಿ ಗ್ರಾಪಂಗೆ ಸೇರಿದೆ.                         

ಹೆಗ್ಗಡಪುರದಲ್ಲಿ ನಿವೇಶನವಿಲ್ಲದ 10 ಬಡ ಕುಟುಂಬಗಳು ಕಳೆದ 20 ವರ್ಷಗಳಿಂದ ಶಿಥಿಲಾ ವಸ್ಥೆಯ ಗುಡಿಸಲುಗಳಲ್ಲಿ ಜೀವನ ನಡೆಸುತ್ತಿದ್ದಾರೆ. ವಯೋವೃದ್ಧರು ಮಹಿಳೆಯರು ಮಕ್ಕಳು ವಾಸವಾಗಿದ್ದರೂ ಸರ್ಕಾರಕ್ಕಾಗಲಿ ಚುನಾಯಿತ ಪ್ರತಿನಿಧಿಗಳಿಗಾಗಲಿ ಇವರು ಕಾಣದೇ ಇರುವುದು ದೌರ್ಭಾ ಗ್ಯವೇ ಸರಿ.

ತಾಲೂಕಿನಿಂದ ತಾರಕ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಮಾರ್ಗದಿಂದ ಕೇವಲ 8-10 ಅಡಿಗಳ ಅಂತರದಲ್ಲಿ ಮುರಿದು ಬೀಳುವ ಗುಡಿಸಲುಗಳಲ್ಲಿ ಜೀವದ ಹಂಗು ತೊರೆದು ಜೀವನ ಸಾಗಿಸುತ್ತಿದ್ದಾರೆ. ನಿವಾಸಿಗಳು ದಿನ ಜೀವನೋಪಾಯಕ್ಕಾಗಿ ದುಡಿದು ಬಂದರೂ ರಾತ್ರಿ ವೇಳೆ ಜೀವವನ್ನು ಕೈಯಲ್ಲಿಡಿದುಕೊಂಡು ಮಲಗುವ ಪರಿಸ್ಥಿತಿಯಲ್ಲಿದ್ದಾರೆ. ಯಾಕೆಂದ್ರೆ ಈ ಗುಡಿಸಲುಗಳು ಯಾವಾಗ ಬೀಳುತ್ತವೋ ಹೇಳಲೂ ಆಗದಂತ ಸ್ಥಿತಿ ತಲುಪಿವೆ. 

ಸರ್ಕಾರದ ಮನೆಗಳನ್ನು 20ರಿಂದ 30 ಸಾವಿರ ರೂ.ಗಳಿಗೆ ಉಳ್ಳವರಿಗೇ ಮಾರಾಟ ಮಾಡಿಕೊಳ್ಳುವ ಚುನಾಯಿತ ಪ್ರತಿನಿಧಿಗಳು ಇನ್ನಾದರೂ ಇಂತಹ ಬಡಜನರ ಕಡೆ ಕೊಂಚ ಗಮನ ಹರಿಸಿ ಸರ್ಕಾರಿ ಸವಲತ್ತುಗಳ ಜೊತೆಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಮುಂದಾಗಬೇಕಾಗಿದೆ.

Advertisement

ಸ್ವಂತ ನಿವೇಶನ ಇಲ್ಲ: ಆರಂಭದ ದಿನಗಳಲ್ಲಿ ಈ ಕುಟುಂಬಗಳ ಶೌಚಾಲಯಗಳ ನಿರ್ಮಾಣಕ್ಕೆ ಗ್ರಾಪಂ ಅನುದಾನ ಮಂಜೂರು ಮಾಡಿದೆಯಾದರೂ ಬಳಿಕ ಮನೆಗಳ ನಿರ್ಮಾಣಕ್ಕೆ ಮೀನಮೇಷ ಎಣಿಸಿ ನಿಮ್ಮ ಹೆಸರಿನಲ್ಲಿ ಸ್ವಂತ ನಿವೇಶನ ಇಲ್ಲದ ಪರಿಣಾಮ ಮನೆ ಮಂಜೂರಾತಿಗೆ ಅವಕಾಶ ಇಲ್ಲವೆಂದು ತಿಳಿಸಿದ್ದಾರೆ. ಇದರಿಂದ ಬೇರೆ ದಾರಿಕಾಣದೆ ಇಂದೋ ನಾಳೆಯೋ ಬಿಳುವ ಗುಡಿಸಲಿನಲ್ಲೇ ಆ 10 ಕುಟುಂಬಗಳು ಜೀವನ ನಡೆಸುತ್ತಿವೆ.

ಮೂಲಭೂತ ಸೌಲಭ್ಯಗಳಿಲ್ಲ: ಇವರಿಗೆ ಗ್ರಾಪಂ ಇದುವರೆಗೂ ಯಾವುದೇ ರೀತಿಯ ಮೂಲಭೂತ ಸೌಲಭ್ಯ ಒದಗಿಸಿಲ್ಲ. ಹಾಗಾಗಿ ನೀರು, ರಸ್ತೆ, ವಿದ್ಯುತ್‌ ದೀಪಗಳಿಲ್ಲ. 

ದುಡಿದು ಬರುವ ನಮಗೆ ಗುಡಸಲೇ ಆಶ್ರಯ: ಕಡು ಬಡತನದ ಜೀವನ ನಡೆಸುವ ನಾವು ಇಡೀ ದಿನ ಕೂಲಿನಾಲಿ ಮಾಡಿ ರಾತ್ರಿ ಮನೆಗೆ ಬಂದು ಕೂಲಿ ಹಣದಿಂದ ಜೀವನ ನಡೆಸಬೇಕು. ಕೂಲಿ ಹಣದಿಂದ ಗುಡಿಸಲಿಗೆ ಹೇಗೋ ತೆಂಗಿನ ಗರಿ ಪ್ಲಾಸ್ಟಿಕ್‌ ಹೊದಿಕೆ ಹಾಕಿ ಜೀವನ ನಡೆಸುತ್ತಿದ್ದೇವೆ.

* ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next