Advertisement

ಅಂತೂ ಬಂತು 20 ಸಾವಿರ ಲೀ. ಪ್ರಾಣವಾಯು

05:36 PM May 13, 2021 | Team Udayavani |

ಮೈಸೂರು: 20 ಸಾವಿರ ಲೀಟರ್‌ ಆಮ್ಲಜನಕ ತುಂಬಿರುವ ಒಂದು ಕಂಟೈನರ್‌ ಮೈಸೂರಿಗೆ ಬುಧವಾರ ಆಗಮಿಸಿದ್ದು, ಇದನ್ನು ಜಿಲ್ಲಾಡಳಿದ ಸುಪರ್ದಿಗೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

Advertisement

ಕೇಂದ್ರ ಸರ್ಕಾರವು ಆಮ್ಲಜನಕ ಎಕ್ಸ್‌ಪ್ರೆಸ್‌ನಲ್ಲಿ ಮಂಗಳವಾರ ಬೆಂಗಳೂರಿಗೆ ಸಾಗಿಸಿದ್ದ ಕಂಟೈನರ್‌ಗಳಲ್ಲಿ ಒಂದು ಮೈಸೂರು ತಲುಪಿದ್ದು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ವಿಕೋಪ ನಿರ್ವಹಣೆ ಕಾಯ್ದೆಯಡಿ ಕಡಕೊಳ ಕೈಗಾರಿಕಾ ಪ್ರದೇಶದ ತ್ರಿನೇತ್ರ ಗ್ಯಾಸಸ್‌ನಲ್ಲಿದ್ದ ಸೌಲಭ್ಯವನ್ನು ಜಿಲ್ಲಾಡಳಿತದ ಸುಪರ್ದಿಗೆ ಪಡೆದು, 20 ಸಾವಿರ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಘಟಕದಲ್ಲಿ ಶೇಖರಿಸಿಡಲಾಗಿದೆ.

ಕಂಟೈನರ್‌ನಲ್ಲಿ ಬರುವ ಬೃಹತ್‌ ಪ್ರಮಾಣದ ಆಮ್ಲಜನಕವನ್ನು ಶೇಖರಣೆ ಮಾಡಿಟ್ಟುಕೊಳ್ಳಲು ಮೈಸೂರು ಜಿಲ್ಲೆಯಲ್ಲಿ ಶೇಖರಣಾ ಘಟಕದ ಅಭಾವ ಇದ್ದುದ್ದರಿಂದ ಕಡಕೊಳ ಕೈಗಾರಿಕಾ ಪ್ರದೇಶದಲ್ಲಿದ್ದ ತ್ರಿನೇತ್ರ ಗ್ಯಾಸಸ್‌ನ ಆಮ್ಲಜನಕ ಶೇಖರಣೆ ಘಟಕವನ್ನು ಡಿಸಾಸ್ಟರ್‌ ಮ್ಯಾನೇಜ್‌ ಮೆಂಟ್‌ ಆ್ಯಕ್ಟ್ 2005 ಕಲಂ 34(ಜೆ) 64ರಡಿಯಲ್ಲಿ ವಶಕ್ಕೆ ಪಡೆದು ಸಂಗ್ರಹಿಸಿಡಲಾಗಿದೆ. ಈ ಘಟಕದ ಸುಪರ್ದಿಯನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಸಹಾಯಕ ಔಷಧ ನಿಯಂತ್ರಕರಿಗೆ ನೀಡಿದ್ದು, ಕೇಂದ್ರ ಸರ್ಕಾರವು ಸರಬರಾಜು ಮಾಡಲಿರುವ ಆಮ್ಲಜನಕವನ್ನು ಶೇಖರಿಸಿಡಲು ಹಾಗೂ ಜಿಲ್ಲಾಡಳಿತದ ನಿರ್ದೇಶನದಂತೆ ಹಂಚಿಕೆ ಮಾಡಲು ಕ್ರಮ ವಹಿಸಲು ಆದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next