Advertisement

20 ಸಾವಿರ ಚೆಕ್‌ಡ್ಯಾಂ ನಿರ್ಮಾಣ

12:44 AM Jun 28, 2019 | Team Udayavani |

ಕೊಪ್ಪಳ: ಪ್ರಸಕ್ತ ವರ್ಷ ರಾಜ್ಯದಲ್ಲಿ ಜಲ ಸಂರಕ್ಷಣೆ ಉದ್ದೇಶದಿಂದ ಉದ್ಯೋಗ ಖಾತ್ರಿಯನ್ನು ಬಳಸಿಕೊಂಡು 20 ಸಾವಿರ ಚೆಕ್‌ಡ್ಯಾಂಗಳನ್ನು ನಿರ್ಮಿಸಬೇಕೆಂಬ ಗುರಿ ಹಾಕಿಕೊಂಡಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರತಿವರ್ಷ ಜಲಕ್ಷಾಮ ಕಟ್ಟಿಟ್ಟ ಬುತ್ತಿಯಾಗುತ್ತಿದೆ. ಬರದ ಮಧ್ಯೆಯೂ ಗ್ರಾಮೀಣ ಜನರು ಜೀವನ ನಡೆಸಬೇಕಿದೆ. ನಾವು ಜಲ ಸಂರಕ್ಷಣೆಗೆ ಮುಂದಾಗಬೇಕು. ಹಾಗಾಗಿ, ಈ ವರ್ಷ ‘ಜಲವರ್ಷ’ ಎಂದು ಘೋಷಣೆ ಮಾಡಿ ಜಲಾಮೃತದಲ್ಲಿ 20 ಸಾವಿರ ಚೆಕ್‌ಡ್ಯಾಂ ನಿರ್ಮಾಣದ ಗುರಿಯನ್ನಿಟ್ಟಿದ್ದೇವೆ. ಗ್ರಾಪಂ, ಪ್ರೌಢಶಾಲೆ, ಪಿಯು ಕಾಲೇಜಿನಲ್ಲಿ ನೀರಿನ ಮಹತ್ವದ ಬಗ್ಗೆ ಚರ್ಚೆ ಏರ್ಪಡಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಗಿಡ ನೆಡುವ ಕಾರ್ಯಕ್ರಮವೂ ಇದೆ. ಜಲಾಮೃತದಲ್ಲಿ ನೀರಿನ ಸಂರಕ್ಷಣೆ, ನೀರಿನ ಮಿತ ಬಳಕೆ ಉದ್ದೇಶವನ್ನು ಹೊಂದಿದ್ದೇವೆ ಎಂದರು.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರತಿಪಕ್ಷದ ನಾಯಕರು ಮೈತ್ರಿ ಸರ್ಕಾರವನ್ನು ಪತನಗೊಳಿಸಬೇಕೆಂಬ ಪ್ರಯತ್ನ ಇನ್ನೂ ನಿಲ್ಲಿಸಿಲ್ಲ. ಅವರು ಶಾಸಕರ ಖರೀದಿ ಸೇರಿ ವಾಮ ಹಾಗೂ ದುಷ್ಟ ಪ್ರಯತ್ನಗಳನ್ನು ನಡೆಸಿದ್ದಾರೆ. ಅವರ ವಾಮಮಾರ್ಗ ಮೆಟ್ಟಿ ನಿಂತು ಜನಪರ ಕೆಲಸ ಮಾಡುತ್ತಿದ್ದೇವೆ.
  -ಕೃಷ್ಣಬೈರೇಗೌಡ, ಗ್ರಾಮೀಣಾಭಿವೃದ್ದಿ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next